This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಬಾಗಲಕೋಟೆಯಲ್ಲಿ ಸ್ಕೂಲ್ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ

ಬಾಗಲಕೋಟೆಯಲ್ಲಿ ಸ್ಕೂಲ್ ಬಸ್-ಟ್ರಾಕ್ಟರ್ ನಡುವೆ ಭೀಕರ ಅಪಘಾತ

ಬಾಗಲಕೋಟೆ: ಜಿಲ್ಲೆಯ ಸ್ಕೂಲ್ ಬಸ್ ನಲ್ಲಿದ್ದ ನಾಲ್ವರು ಶಾಲಾ ಮಕ್ಕಳ ದುರ್ಮರಣ ನಡೆದಿದ್ದು, ಆಲಗೂರು ಗ್ರಾಮದ ಸಮೀಪ ಭಾನುವಾರ ಮಧ್ಯರಾತ್ರಿ ನಡೆದ ಅಪಘಾತ ಎಂದು ಮಾಹಿತಿ ತಿಳಿದು ಬಂದಿದೆ.

ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ‌. ಎಂಟಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ‌ವಾಗಿದ್ದು, ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ‌.ಆಲಗೂರು ಕಡೆಯಿಂದ ಕವಟಗಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್, ಆಲಗೂರು ಗ್ರಾಮದ ವರ್ಧಮಾನ ಖಾಸಗಿ ಶಾಲೆಯ ಬಸ್, ಎಂದು ಮಾಹಿತಿ ಬೆಳಕಿಗೆ ಬಂದಿದೆ.

ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮುಗಿಸಿ ತೆರಳುವಾಗ ಘಟನೆ ನಡೆದಿದ್ದು, ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಶಾಲಾ ವಾಹನ ಅಪಘಾತದಲ್ಲಿ ನಾಲ್ವರು ಮಕ್ಕಳ ದುರ್ಮರಣ ಪ್ರಕರಣ…ಶ್ವೇತಾ ಪಾಟೀಲ (16) , ಸಾಗರ ಕಡಕೋಳ (17), ಗೋವಿಂದ ಜಂಬಗಿ (13), ಬಸವರಾಜ್ ಕೊಟಗಿ (17) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.

";