This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsPolitics NewsState News

ವರುಣನ ಆಗಮನದ ಮಧ್ಯದಲ್ಲಿ ಸಂಭ್ರಮದಿಂದ ಜರುಗಿದ : ೭೮ ನೆಯ ಸ್ವಾತಂತ್ರ್ಯೋತ್ಸವ ಆಚರಣೆ

ವರುಣನ ಆಗಮನದ ಮಧ್ಯದಲ್ಲಿ ಸಂಭ್ರಮದಿಂದ ಜರುಗಿದ : ೭೮ ನೆಯ ಸ್ವಾತಂತ್ರ್ಯೋತ್ಸವ ಆಚರಣೆ

ವರುಣನ ಆಗಮನದ ಮಧ್ಯದಲ್ಲಿ ಸಂಭ್ರಮದಿಂದ ಜರುಗಿದ : ೭೮ ನೆಸ್ವಾತಂತ್ರೊತ್ಸವ ಆಚರಣೆ

ಹಿರಿಯರು ತಂದು ಕೊಟ್ಟ ಸ್ವಾತಂತ್ರ ಉಳಿಸಿ ಗೌರವ ಹೆಚ್ಚಿಸುವ ಸಂಕಲ್ಪ ಮಾಡೋಣ : ಶಾಸಕ ಕಾಶಪ್ಪನವರ

ಹುನಗುಂದ

ತ್ಯಾಗ ಬಲಿದಾನ ಮೂಲಕ ಪಡೆದುಕೊಂಡ ಸ್ವಾತಂತ್ರ ಇಂದಿಗೆ ೭೭ ವರ್ಷಗಳಾಗಿವೆ. ಭಾರತ ದೇಶ ಜಾತ್ಯಾತೀತ ತಳಹದಿಯ ಮೇಲೆ ನಿಂತಿದ್ದು.ನಮ್ಮ ಅನೇಕ ಮಹಾತ್ಮರು, ಸ್ವಾತಂತ್ರ ಹೋರಾಟಗಾರರು ಹಾಗೂ ಹಿರಿಯರು ತಂದು ಕೊಟ್ಟ ಸ್ವಾತಂತ್ರವನ್ನು ಉಳಿಸಿಕೊಳ್ಳುವುದರ ಜೊತೆಗೆ ದೇಶದ ಗೌರವ ಹೆಚ್ಚಿಸುವ ಸಂಕಲ್ಪ ಮಾಡೋಣ ಎಂದು ಕರ್ನಾಟಕ ವೀರಶೈವ ಮತ್ತು ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಗುರುವಾರ ಪಟ್ಟಣದ ಟಿಸಿಎಚ್ ಕಾಲೇಜು ಮೈದಾನದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ೭೮ನೇ ಸ್ವಾತಂತ್ರೊತ್ಸವದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು,,ಸ್ವಾತಂತ್ರೋತ್ಸವ ದಿನದಂದು ವರುಣ ಕೃಪೆ ತೋರಿದ್ದು. ಆಕಾಶದಿಂದಲೇ ಮಳೆಯ ನೀರು ಪುಷ್ಪದಂತೆ ಸುರಿಯುವ ಮೂಲಕ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದೆ.ಮಳೆ ರೈತರ ಜೀವನಾಡಿ ಮಳೆಯಿಂದ ರೈತರ ಬದುಕು ಹಸನಾಗಲು ಸಾಧ್ಯ ಎಂದರು.

ತಹಶೀಲ್ದಾರ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶ ಪರಕೀಯರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ಅನೇಕ ಸ್ವಾತಂತ್ರö್ಯ ಹೋರಾಟಗಾರು ಶ್ರಮಕ್ಕೆ ನಾವೆಲ್ಲಾ ಕೃತಜ್ಞತೆಯನ್ನು ಸಲ್ಲಿಸುವ ಶುಭ ದಿನವಾಗಿದೆ.ಸಿಕ್ಕ ಸ್ವಾತಂತ್ರö್ಯವನ್ನು ನಾವೆಲ್ಲರೂ ಜಾಗೃತಿಯಿಂದ ಕಾಪಾಡುವ ಕಾರ್ಯ ಭಾರತೀಯ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಾಲೂಕಾಡಳಿತ ವತಿಯಿಂದ ಸತ್ಕರಿಸಲಾಯಿತು. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಲ್ಯಾಪಟಾಪ್ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ,ತೋಟಗಾರಿಕೆ ಇಲಾಖೆಗಳಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಲಾಯಿತು.

ನಂತರ ಪಟ್ಟಣದ ವಿವಿಧ ಶಾಲೆಗಳ ಮಕ್ಕಳಿಂದ ದೇಶ ಭಕ್ತಿಯ ನೃತ್ಯಗಳನ್ನು ಪ್ರದರ್ಶಿಸಿದರು.ತೆರೆದ ಜೀಪಿನಲ್ಲಿ ಶಾಸಕರು ಗೌರವ ವಂದನೆಯನ್ನು ಸ್ವೀಕರಿಸಿದರು.ನಂತರ ಪೊಲೀಸ್ ಪಡೆ ಮತ್ತು ಎನ್‌ಸಿಸಿ,ಸೌಟ್ಸ್ ಆ್ಯಂಡ್ ಗೈಡ್ಸ್ ಪಡೆಗಳಿಂದ ಪಥಸಂಚಲ ಜರುಗಿತು.

ವೇದಿಕೆಯಲ್ಲಿ ತಾ.ಪಂ.ಇಓ ಮುರಳಿಧರ ದೇಶಪಾಂಡೆ,ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಸುನೀಲ ಸವದಿ,ಪುರಸಭೆ ಮಾಜಿ ಅಧ್ಯಕ್ಷ ಪರವೇಜ ಖಾಜಿ, ಉಪಾಧ್ಯಕ್ಷೆ ಶಾಂತಾ ಮೇಲಿನಮನಿ,ಸದಸ್ಯರಾದ ಬಸವರಾಜ ಗೊಣ್ಣಾಗಾರ,ಚಂದ್ರು ತಳವಾರ,ಭಾಗ್ಯಶ್ರೀ ರೇವಡಿ,ನಾಮನಿರ್ದೇಶನ ಸದಸ್ಯರಾದಮಲ್ಲಪ್ಪ ಅಂಟರತಾಣಿ,ರಾಜು ಹುನಗುಂದ,ಮಾರುತಿ ಹುನಗುಂದ. ನ್ಯಾಯವಾದಿ ಮಹಾಂತೇಶ ಅವಾರಿ,ಮುಖಂಡರಾದ ಶಿವಾನಂದ ಕಂಠಿ,ವಿಜಯ ಗದ್ದನಕೇರಿ,ಅಮರೇಶ ನಾಗೂರ,ಎಸ್.ಕೆ.ಕೊನೆಸಾಗರ,ದೇವು ಡಂಬಾಳ,ಯಮನಪ್ಪ ಬೆಣ್ಣಿ,ಮಹಾಂತಪ್ಪ ಪಲ್ಲೇದ ಸೇರಿದಂತೆ ಅನೇಕರು ಇದ್ದರು.,ಬಿಇಒ ಜಾಸ್ಮೀನ್ ಕಿಲ್ಲೇದಾರ ಸ್ವಾಗತಿಸಿದರು,ಸಂಗಮೇಶ ಹೊದ್ಲೂರ ನಿರೂಪಿಸಿ ವಂದಿಸಿದರು.

Nimma Suddi
";