This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsLocal NewsState News

ಗುಡಿಸಲಿಗೆ ಬೆಂಕಿ:ತಾಯಿ ಮಗಳ ಸಜೀವ ದಹನ

ಗುಡಿಸಲಿಗೆ ಬೆಂಕಿ:ತಾಯಿ ಮಗಳ ಸಜೀವ ದಹನ

ಸಿಂಟೆಕ್ಸ್‌ ನಲ್ಲಿ ಪೆಟ್ರೋಲ್ ಸುರಿದು ಗುಡಿಸಲಿಗೆ ಬೆಂಕಿ

ಬಾಗಲಕೋಟೆ

ಸಿಂಟೆಕ್ಸ್‌ ನಲ್ಲಿ ಪೆಟ್ರೋಲ್ ಹಾಕಿ ಗುಡಿಸಲಿಗೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ತಾಯಿ-ಮಗಳು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮುಧೋಳ ಸಮೀಪದ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

ಜೈಬಾನ ಪೆಂಡಾರಿ (60), ಶಬಾನ ಪೆಂಡಾರಿ (20) ಕೊಲೆಯಾದವರು. ಅವಘಡದಲ್ಲಿ ಸಿದ್ದಿಕ್ಕಿ ಎಂಬಾತ ಬಚಾವಾಗಿದ್ದು, ದಸ್ತಗಿರಿಸಾಬ್ ಪೆಂಡಾರಿ ಎಂಬಾತ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿವೇಳೆ ದಸ್ತಗಿರಸಾಬ ಪೆಂಡಾರಿ ಅವರ ಕುಟುಂಸ್ಥರು ತೋಟದ ಶೆಡ್ಡಿನಲ್ಲಿ ಮಲಗಿದ್ದಾಗ. ದುಷ್ಕರ್ಮಿಗಳು ಸಿಂಟೆಕ್ಸ್ ನಲ್ಲಿ ಪೆಟ್ರೋಲ್ ತುಂಬಿ ಅದನ್ನು ಎರಡು ಎಚ್ ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿ೦ಪಡಿಸಿ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿ ಇಡೀ ಕುಟುಂಬವನ್ನು ಮುಗಿಸಲು ಕೃತ್ಯ ನಡೆಸಿದ್ದಾರ ಎನ್ನಲಾಗಿದೆ. ಘಟನೆಯಲ್ಲಿ ತಾಯಿ-ಮಗಳ ಮೃತ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್ಪಿ ಅಮರಮಾಥರೆಡ್ಡಿ ಭೇಟಿ ನೀಡಿ ಘಟನೆ ವಿವರಣೆ ಪಡೆದುಕೊಂಡಿದ್ದಾರೆ. ಶ್ವಾನದಳದ ನರವು ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Nimma Suddi
";