This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

National News

ಕೃಷಿ ಸಾಲದ ಪ್ರಮಾಣ ಹೆಚ್ಚಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ

ಕೃಷಿ ಸಾಲದ ಪ್ರಮಾಣ ಹೆಚ್ಚಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ

ನವದೆಹಲಿ: ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಇರಾದೆಯಲ್ಲಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೃಷಿ ಸಾಲದ ಪ್ರಮಾಣ ಹೆಚ್ಚಿಸುವ ಆಲೋಚನೆಯಲ್ಲಿದೆ. ವರದಿ ಪ್ರಕಾರ ಫೆಬ್ರುವರಿ 1ರ ಬಜೆಟ್​ನಲ್ಲಿ ಕೃಷಿ ಸಾಲದ ಪ್ರಮಾಣವನ್ನು 25 ಲಕ್ಷ ಕೋಟಿ ರೂಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂ ಇದೆ. ಮುಂಬರುವ ಹಣಕಾಸು ವರ್ಷಕ್ಕೆ 22ರಿಂದ 25 ಲಕ್ಷ ಕೋಟಿ ರೂ ಕೃಷಿ ಸಾಲಗಳಿಗೆ ಗುರಿ ಇಡುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವರದಿ ಮಾಡಿದೆ.ಗ್ರಾಮೀಣ ಭಾಗದ ಬ್ಯಾಂಕುಗಳಲ್ಲಿ ಕಿರು ಅವಧಿಯ ಕೃಷಿ ಸಾಲಗಳಿಗೆ ಬಡ್ಡಿದರ 2 ಪ್ರತಿಶತದಷ್ಟು ಕಡಿಮೆ ಇರುತ್ತದೆ.

ಕಳೆದ 10 ವರ್ಷದಲ್ಲಿ ಸರ್ಕಾರ ಕೃಷಿ ಸಾಲಕ್ಕೆ ಇಟ್ಟಿರುವ ಗುರಿ ಬಹುತೇಕ ಈಡೇರಿದೆ. 2023-24ರ ಹಣಕಾಸು ವರ್ಷಕ್ಕೆ 20 ಲಕ್ಷ ಕೋಟಿ ರೂನಷ್ಟು ಸಾಲ ವಿತರಣೆಯ ಗುರಿ ಇಡಲಾಗಿತ್ತು. ಡಿಸೆಂಬರ್​ವರೆಗೆ, ಅಂದರೆ ಮೂರು ತಿಂಗಳು ಇರುವಾಗಲೇ 16.37 ಲಕ್ಷ ಕೋಟಿ ರೂನಷ್ಟು ಸಾಲ ವಿತರಣೆ ಆಗಿದೆ. ಅಂದರೆ ಶೇ. 82ರಷ್ಟು ಗುರಿ ತಲುಪಲಾಗಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳೆರಡರಿಂದಲೂ ವಿತರಣೆ ಆದ ಕೃಷಿ ಸಾಲಗಳ ದತ್ತಾಂಶ ಇದು.

ಶೇ. 7ರ ಬಡ್ಡಿದರದಲ್ಲಿ ರೈತರು 3 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ವಾರ್ಷಿಕ ಬಡ್ಡಿಯಲ್ಲಿ ಇನ್ನಷ್ಟು 3 ಪ್ರತಿಶತದಷ್ಟು ಕಡಿತ ಮಾಡಲಾಗುತ್ತದೆ. ಆದರೆ, ದೀರ್ಘಾವಧಿ ಸಾಲಗಳಿಗೆ ಈ ಸೌಲಭ್ಯ ಇರುವುದಿಲ್ಲ. ಬ್ಯಾಂಕ್​ನ ಸಾಮಾನ್ಯ ಬಡ್ಡಿದರದಲ್ಲೇ ಸಾಲ ಪಡೆಯಬೇಕಾಗುತ್ತದೆ.

ಹಿಂದಿನ ಕೆಲ ವರ್ಷಗಳಲ್ಲಿ ಸರ್ಕಾರ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚು ಕೃಷಿ ಸಾಲಗಳ ವಿತರಣೆ ಆಗಿರುವುದು ಗಮನಾರ್ಹ. ಉದಾಹರಣೆಗೆ, 2022-23ರ ಹಣಕಾಸು ವರ್ಷದಲ್ಲಿ ಸರ್ಕಾರ 18.50 ಲಕ್ಷ ಕೋಟಿ ರೂನಷ್ಟು ಕೃಷಿ ಸಾಲಗಳ ಗುರಿ ಇಟ್ಟುಕೊಂಡಿತ್ತು. ವಾಸ್ತವದಲ್ಲಿ ಆ ಹಣಕಾಸು ವರ್ಷ ವಿತರಣೆ ಆದ ಕೃಷಿ ಸಾಲಗಳ ಪ್ರಮಾಣ 21.55 ಲಕ್ಷ ಕೋಟಿ ರೂ. ಅಂದರೆ ಸರ್ಕಾರದ ಗುರಿಗಿಂತಲೂ 3 ಲಕ್ಷ ಕೋಟಿ ರೂ ಹೆಚ್ಚೇ ಸಾಲ ನಿಡಲಾಗಿದೆ.ಗ್ರಾಮೀಣ ಭಾಗದ ಬ್ಯಾಂಕುಗಳಲ್ಲಿ ಕಿರು ಅವಧಿಯ ಕೃಷಿ ಸಾಲಗಳಿಗೆ ಬಡ್ಡಿದರ 2 ಪ್ರತಿಶತದಷ್ಟು ಕಡಿಮೆ ಇರುತ್ತದೆ. ಶೇ. 7ರ ಬಡ್ಡಿದರದಲ್ಲಿ ರೈತರು 3 ಲಕ್ಷ ರೂವರೆಗೂ ಸಾಲ ಪಡೆಯಬಹುದು ಮಾಹಿತಿ ಕಂಡು ಬಂದಿದೆ.

Nimma Suddi
";