ನಿಮ್ಮ ಸುದ್ದಿ ಬಾಗಲಕೋಟೆ
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ನಿಧಿ ಸಮರ್ಪಣೆ ಕಾರ್ಯ ಭರದಿಂದ ಸಾಗಿದೆ.
ರಾಮಮಂದಿರ ನಿರ್ಮಾಣದಲ್ಲಿ ದೇಶದ ಪ್ರತಿಯೊಬ್ಬರ ಪಾಲಿರಬೇಕು ಎಂದು ನಿಧಿ ಸಂಗ್ರಹಿಸುತ್ತಿದ್ದು ಎಲ್ಲೆಡೆ ಭಾರಿ ಬೆಂಬಲ ಹರಿದು ಬರುತ್ತಿದೆ.
ಇಂತಹ ಅವಧಿಯಲ್ಲಿ ಚಿಕ್ಕಮಕ್ಕಳು ಸಹ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸುತ್ತಿದ್ದಾರೆ. ಅಂತಹ ಮಕ್ಕಳಲ್ಲಿ ಬಾಗಲಕೋಟೆ ತಾಲೂಕಿನ ಗದ್ದನಕೇರಿಯ ಸಪ್ತಗಿರಿ ಬಡಾವಣೆ ನಿವಾಸಿ, ರೈಲ್ವೆ ಇಲಾಖೆ ನಿವೃತ್ತ ಉದ್ಯೋಗಿ ತಿಮ್ಮಾಜಿ ಅಡವಿರಾವ್ ಕುಲಕರ್ಣಿ ಅವರ ಮೊಮ್ಮಗ ವಾಗೀಶ ಕುಲಕರ್ಣಿ ತಾನೂ ಕೂಡಿಟ್ಟ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಿಸಿದ್ದಾನೆ.
ಮನೆಯಲ್ಲಿ ಆಗೊಮ್ಮೆ ಈಗೊಮ್ಮೆ ಅಜ್ಜ, ಅಜ್ಜಿ, ತಾಯಿ, ತಂದೆ ನೀಡುವ ಹಣವನ್ನು ಕೂಡಿಟ್ಟ ವಾಗೀಶ ತಾನು ಕೂಡಿಟ್ಟ ಹಣ ರಾಷ್ಟ್ರ ಸೇವೆಗೆ ಅರ್ಪಣೆಯಾಗಲಿ ಎಂಬ ಉದ್ದೇಶದಿಂದ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸದ್ಯ ಮನೆಗೆ ಆಗಮಿಸಿದ ಶ್ರೀರಾಮ ನಿಧಿ ಸಮರ್ಪಣಾ ತಂಡಕ್ಕೆ ರೂ.230 ಸಮರ್ಪಿಸಿದ್ದಾನೆ.
ವಾಗೀಶನಿಗೆ ಈ ಗುಣ ಮನೆಯ ಸಂಸ್ಕೃತಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನಿಂದ ಬಂದಿದೆ ಎಂದು ಹೇಳಲಾಗುತ್ತಿದ್ದು ಕಳೆದ ೪ ವರ್ಷದಿಂದ ಬಾಗಲಕೋಟೆಯಲ್ಲಿ ನಡೆಯುವ ಬಾಲಕರ ಪಥ ಸಂಚಲನದಲ್ಲಿ ಘನವೇಷಧಾರಿಯಾಗಿ ಭಾಗವಹಿಸುತ್ತಿದ್ದಾನೆ. ಚಿಕ್ಕ ವಯಸ್ಸಲ್ಲೇ ವಾಗೀಶನಿಗಿರುವ ಸಂಸ್ಕೃತಿ, ಶಿಸ್ತು ಇಡೀ ಮನೆತನಕ್ಕೆ ಹೆಮ್ಮೆ ಪಡುವ ವಿಷಯವಾಗಿದೆ.