ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷವನ್ನ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯ ಮಾತ್ರವಲ್ಲದೆ, ಮಸೀದಿ, ಚರ್ಚ್ ಹುಂಡಿಗೂ ಕೈಹಾಕುತ್ತಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ನಿಜವಾಗಲೂ ಜಾತ್ಯತೀತರಾ? ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದರು.
ಚಿಕ್ಕಮಗಳೂರು, ಫೆ.24: ಕಾಂಗ್ರೆಸ್ ಪಕ್ಷವನ್ನ ಕಮ್ಯೂನಲ್ ಮತ್ತು ಕ್ರಿಮಿನಲ್ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದವರು ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯ ಮಾತ್ರವಲ್ಲದೆ, ಮಸೀದಿ, ಚರ್ಚ್ ಹುಂಡಿಗೂ ಕೈಹಾಕುತ್ತಿದ್ದರು. ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ನಿಜವಾಗಲೂ ಜಾತ್ಯತೀತರಾ? ನಿಜವಾದ ಜಾತ್ಯತೀತರಾಗಿದ್ದರೆ ದೇವಾಲಯದ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದರು.ಹೆಸರಿನಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಎಂದು ಹೇಳುತ್ತಾರೆ.
ಹೆಸರಿನಲ್ಲಿ ದೇವರಿದ್ದರೆ ಭಕ್ತರ ಹುಂಡಿಗೆ ಕೈಹಾಕುತ್ತಿರಲಿಲ್ಲ. ಇವರು ದೇವರ ಹುಂಡಿ ಹಣಕ್ಕೂ ಕೈ ಹಾಕುತ್ತಿದ್ದಾರೆ. ಜಾತ್ಯತೀತತೆ ಅಂದರೆ ದೇವಸ್ಥಾನದ ಹುಂಡಿಗೆ ಕೈಹಾಕುವುದಾ? ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಮತ್ತು ಕ್ರಿಮಿನಲ್ ಪಾರ್ಟಿ. ಜಾತ್ಯತೀತರಾಗಿದ್ದರೆ ಮಸೀದಿ-ಚರ್ಚ್ ಹಣಕ್ಕೂ ಕೈಹಾಕುತ್ತಿದ್ದರು ಎಂದು ತಿಳಿಸಿದರು.