ಬಾದಾಮಿ: ಜಾತ್ರೆಗೆ ಬರುವರೇ ಸಿಎಂ ಸಿದ್ದರಾಮಯ್ಯ? ಬಾದಾಮಿ ಕ್ಷೇತ್ರದ ಜನರ ಆಶೀರ್ವಾದ, ಬನಶಂಕರಿ ದೇವಿಯ ಕೃಪೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬನಶಂಕರಿ ದೇವಿ ಜಾತ್ರೆಗೆ ರಾಜಕೀಯ ಪುನರ್ ಜನ್ಮ ಪಡೆದ ಜಾತ್ರೆಗೆ ದಿನಗಣನೆ ಆರಂಭವಾಗಿರುವ ಹಿನ್ನಲೆ ಹೀಗೊಂದು ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಚಾಮುಂಡೇಶ್ವರಿ ಮುನಿದರೂ ಬಾದಾಮಿ ಯ ಬನಶಂಕರಿ ಸಿದ್ದರಾಮಯ್ಯ ಅವರನ್ನು ಬಿಡಲಿಲ್ಲ ಎಂಬ ಮಾತು 2018ರ ಚುನಾವಣೆ ಫಲಿತಾಂಶದ ಬಳಿಕ ವಿಶ್ಲೇಷಣೆಗಳು ನಡೆದಿದ್ದವು. ಮೊದಲ ಬಾರಿ ಮುಖ್ಯಮಂತ್ರಿ ಅವಧಿ ಮುಗಿದು ಚುನಾವಣೆ ಎದುರಾದಾಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
ಜಾತ್ರೆಗೆ ಮುಂಚೆ ಪೂರ್ವಭಾವಿ ಸಭೆ ನಡೆಸಿ ಯಶಸ್ವಿಯಾಗಲು ಸಲಹೆ ಸೂಚನೆ ನೀಡಿದ್ದರು. ಅಲ್ಲದೇ ರಥೋತ್ಸವದ ದಿನ ಸ್ವತಃ ಭಾಗವಹಿಸಿ ಚಾಲನೆ ನೀಡಿದ್ದರು. ಕೋವಿಡ್ ಕರಿ ನೆರಳಿನ ವೇಳೆ ಬೆಂಗಳೂರಲ್ಲೇ ಸಭೆ ನಡೆಸಿ ಜಾತ್ರೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದರು.
ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದಿದ್ದು, ಆ ಮೂಲಕ ರಾಜಕೀಯ ಪುನರ್‌ಜನ್ಮ ಪಡೆದಿದ್ದ ಸಿದ್ದರಾಮಯ್ಯ ಕ್ಷೇತ್ರದ ಶಾಸಕರಾಗಿ ಹಾಗೂ ಪ್ರತಿಪಕ್ಷದ ನಾಯಕರಾಗಿ ವರ್ಷ ಕೆಲಸ ಮಾಡಿದ್ದರು. ಬಾದಾಮಿ ಕ್ಷೇತ್ರದ ಶಾಸಕತ್ವದ ಐದು ವರ್ಷದಲ್ಲಿ ಬನಶಂಕರಿ ಕ್ಷೇತ್ರದ ಅಭಿವೃದ್ಧಿಗೂ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ.ಬಾದಾಮಿ ಕ್ಷೇತ್ರದ ಶಾಸಕತ್ವದ ಐದು ವರ್ಷದಲ್ಲಿ ಬನಶಂಕರಿ ಕ್ಷೇತ್ರದ ಅಭಿವೃದ್ಧಿಗೂ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.