ಬಾಗಲಕೋಟೆ
ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಗೂಳನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸರಕಾರದ ಅನುದಾನ ನೆಚ್ಚಿಕೊಂಡು ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಹೊನ್ನರಹಳ್ಳಿಯ ಜನ ಲಕ್ಷಾಂತರ ದೇಣಿಗೆ ನೀಡಿ ಮಕ್ಕಳಿಗೆ ಊಟದ ಹಾಲ್ ನಿರ್ಮಾಣ ಮಾಡಿದ್ದು ಶ್ಲಾಘನೀಯ ಎಂದರು.
ನಾಗೂರ ಕ್ಪಸ್ಟರ್ ಸಂಪನ್ಮೂಲ ವ್ಯಕ್ತಿ ಸಂಗಪ್ಪ ಸಂಗಮ, ಕ್ರಿಯಾಶೀಲ ಶಿಕ್ಷಕರಿಂದ ಶಾಲೆಯ ಕೀರ್ತಿ ಹೆಚ್ಚುತ್ತದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸೃಜನಶೀಲ ಶಿಕ್ಷಕರು ಸದಾ ಶ್ರಮಿಸುತ್ತಿರುತ್ತಾರೆ ಎಂದು ಹೇಳಿದರು.
ರಕ್ಕಸಗಿ ಗ್ರಾಪಂ ಅಧ್ಯಕ್ಷೆ ಶೃತಿ ನೀಲಮ್ಮನವರ, ಮನು?À್ಯನಿಗೆ ಆತ್ಮಸಾಕ್ಷಿ ಬಹಳ ಮುಖ್ಯ. ನಾವು ಮಾಡುವ ತಪ್ಪುಗಳನ್ನು ಬೇರೆಯವರು ಎತ್ತಿ ತೋರಿಸುವ ಮುನ್ನ ಅದೇ ಎಚ್ಚರಿಸುತ್ತದೆ. ಯಾರೋ ಮಾಡಿದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಹೇಳುವಲ್ಲಿ ಮನಸಾಕ್ಷಿ ಚುಚ್ಚುತ್ತದೆ ಎಂದರು.
ಸನ್ಮಾನಿತರ ಪರವಾಗಿ ಆಧ್ಯಾಪಕ ಎನ್.ಸಿ.ಘಟ್ಟಿಗನೂರ, ಎ?ೆÆ್ಟÃ ಶಾಲೆಗಳಲ್ಲಿ ಭೌತಿಕ ಸೌಲಭ್ಯವಿದ್ದು ಶಿಕ್ಷಕರ ಕೊರತೆ ಇರುತ್ತದೆ. ಕೆಲವೆಡೆ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರಿದ್ದರೂ ಅಲ್ಲಿ ಮೂಲ ಸೌಲಭ್ಯಗಳ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರೇ ಸ್ವಂತ ಹಣ ಖರ್ಚು ಮಾಡಿ, ದಾನಿಗಳಿಂದ ಕಾಣಿಕೆ ಸಂಗ್ರಹಿಸಿ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಅವರ ವೃತ್ತಿ ಬದ್ಧತೆ ಎತ್ತಿ ತೋರಿಸುತ್ತದೆ.
ಶಾಲಾ ಮಕ್ಕಳ ಪರವಾಗಿ ಅಮೃತ ಕೊಣ್ಣೂರ, ಗೋಲಪ್ಪ ಕೊಣ್ಣೂರ, ವಿದ್ಯಾಶ್ರೀ ಅಮಾತಿಗೌಡರ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ವೀರಪ್ಪ ಮಾಗಿ, ಬಸಮ್ಮ ಪವಾಡಿಗೌಡ್ರ, ಉಮಾ ಬಲಕುಂದಿ, ಹಿರಿಯರಾದ ರುದ್ರಗೌಡ ಅಮಾತಿಗೌಡರ, ರಾಮನಗೌಡ ಮಾಗಿ, ಯಲಗುರದಪ್ಪ ಗುಡದನ್ನವರ, ಸಿದ್ದು ಶೀಲವಂತರ, ಸಂಗಪ್ಪ ಈರಣ್ಣವರ, ಅಂದಾನೆಪ್ಪ ಕೊಣ್ಣೂರ, ಸಂಗನಬಸಪ್ಪ ಸೂಳಿಬಾವಿ, ರತ್ನವ್ವ ಕಡಿವಾಲ, ಸಂಗನಬಸಯ್ಯ ಹಿರೇಮಠ, ಮಹಾಂತೇಶ ಅಳ್ಳೊಳ್ಳಿ, ವೀರಭದ್ರಪ್ಪ ಕೊಳ್ಳೊಳ್ಳಿ, ಮಲ್ಲಿಕಸಾಬ ನದಾಫ, ಮಹಾಂತೇಶ ಚಲವಾದಿ, ಲಕ್ಷ್ಮಪ್ಪ ಮಾದರ ಮುಖ್ಯಶಿಕ್ಷಕ ಪಿ.ಎಸ್.ಮಾಲಗಿತ್ತಿ ಇತರರಿದ್ದರು.