This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsNational NewsPolitics NewsState News

ಅಂತಿಮ ಪರಿಸ್ಕøತ ಮತದಾರರ ಪಟ್ಟಿ ಪ್ರಕಟ | ಜಿಲ್ಲೆಯಲ್ಲಿ ಒಟ್ಟು 15.91 ಲಕ್ಷ ಮತದಾರರು

ಅಂತಿಮ ಪರಿಸ್ಕøತ ಮತದಾರರ ಪಟ್ಟಿ ಪ್ರಕಟ | ಜಿಲ್ಲೆಯಲ್ಲಿ ಒಟ್ಟು 15.91 ಲಕ್ಷ ಮತದಾರರು

ಬಾಗಲಕೋಟೆ

ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 21,919 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

 

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಪರಿಷ್ಕøತ ಮತದಾರರ ಪಟ್ಟಿಯನ್ನು ವಿತರಿಸಿ ಮಾತನಾಡಿದ ಅವರು ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 1726 ಮತಗಟ್ಟೆಗಳಿದ್ದು, ಒಟ್ಟು 15,91,208 ಮತದಾರರು ಇದ್ದಾರೆ. ಈ ಪೈಕಿ 7,88,051 ಪುರುಷ ಮತದಾರರು, 8,03,068 ಮಹಿಳಾ ಮತದಾರರು ಹಾಗೂ 89 ತೃತೀಯ ಲಿಂಗ ಮತದಾರರು ಇದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರು ಇದ್ದಾರೆ ಎಂದು ತಿಳಿಸಿದರು.

 

2023 ಅಕ್ಟೋಬರ 27 ರಂದು ಪ್ರಚುರಪಡಿಸಿರುವ ಕರಡು ಮತದಾರರ ಪಟ್ಟಿ ಹಾಗೂ ಜನವರಿ 22 ರಂದು ಪ್ರಚುರಪಡಿಸಿರುವ ಅಂತಿಮ ಮತದಾರರ ಪಟ್ಟಿಗೆ ಹೋಲಿಕೆ ಮಾಡಿದಾಗ ಜಿಲ್ಲೆಯಲ್ಲಿ ಒಟ್ಟು 21,919 ಮತದಾರರು ಹೊಸದಾಗಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗಳಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ.

 

ಹೊಸದಾಗಿ ಸೇರ್ಪಡೆಗೊಂಡ ಮತದಾರರ ಪೈಕಿ 5,647 ಪುರುಷ ಮತದಾರರು ಹಾಗೂ 16,270 ಮಹಿಳಾ ಮತದಾರರು ಹಾಗೂ 2 ತೃತೀಯ ಲಿಂಗ ಮತದಾರರು ಇದ್ದಾರೆ ಎಂದರು.

 

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2023 ಅಕ್ಟೋಬರ 27 ರಿಂದ ಜನವರಿ 12 ವರೆಗೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷೀಪ್ತ ಪರಿಷ್ಕರಣೆ-2024ರ ಕಾರ್ಯ ಕೈಗೊಳ್ಳಲಾಗಿತ್ತು.

ಹಕ್ಕು ಮತ್ತು ಆಕ್ಷೇಪಣೆಗೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶನದಂತೆ ಕಳೆದ 2023 ನವೆಂಬರ 18, 19, ಡಿಸೆಂಬರ 2 ಮತ್ತು 3 ರಂದು ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ 18 ರಿಂದ 19 ವಯಸ್ಸಿನೊಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದರು.

ಮತದಾರರ ಪಟ್ಟಿಗಳಲ್ಲಿ ಲಿಂಗಾನುಪಾತ ವ್ಯತ್ಯಾಸವನ್ನು ಸರಿದೂಗಿಸುವ ನಿಟ್ಟಿನಲ್ಲಿ 2023 ಡಿಸೆಂಬರ 1 ರಂದು ಮಹಿಳಾ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಂಡು ಒಟ್ಟು 1,998 ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

 

ಜಿಲ್ಲೆಯಾದ್ಯಂತ ಅಂತಿಮ ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ಪ್ರಚುರ ಪಡಿಸಲಾಗಿದೆ. ಮತದಾರರು ತಮ್ಮ ಹೆಸರುಗಳು ಮತದಾರರ ಪಟ್ಟಿಗಳಲ್ಲಿ ಇರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾರ್ಯ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ, ಚುನಾವಣಾ ವಿಭಾಗದ ತಹಶೀಲ್ದಾರ ಪುರಂದರ, ಶಿರಸ್ತೇದಾರರಾದ ರಜಪೂತ, ಮಹೇಶ ಪಾಂಡವ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಯಲ್ಲಪ್ಪ ಸನಕ್ಯಾನವರ, ಆನಂದ ಶಿಲ್ಪಿ ಹಾಗೂ ಇತರರು ಉಪಸ್ಥಿತರಿದ್ದರು.

*ಮತಕ್ಷೇತ್ರವಾರು ಮತದಾರರ ವಿವರ*

ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 15,91,208 ಮತದಾರರಿದ್ದು, ಇದರಲ್ಲಿ 7,88,051 ಪುರುಷ, 8,03,068 ಮಹಿಳಾ ಹಾಗೂ 89 ಇತರೆ ಮತದಾರರು ಇದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರು ಇದ್ದಾರೆ. ಮುಧೋಳ ಮೀಸಲು ಮತಕ್ಷೇತ್ರದಲ್ಲಿ 100517 ಪುರುಷ, 105257 ಮಹಿಳಾ ಮತದಾರರು, 6 ಇತರೆ ಸೇರಿ ಒಟ್ಟು 2,05,780 ಮತದಾರರಿದ್ದರೆ, ತೇರದಾಳ ಕ್ಷೇತ್ರದಲ್ಲಿ 115655 ಪುರುಷ, 117003 ಮಹಿಳಾ, 13 ಇತರೆ ಸೇರಿ ಒಟ್ಟು 232671, ಜಮಖಂಡಿ ಮತಕ್ಷೇತ್ರದಲ್ಲಿ 109117 ಪುರುಷ, 111014 ಮಹಿಳಾ, 7 ಇತರೆ ಸೇರಿ ಒಟ್ಟು 220138, ಇದ್ದಾರೆ. ಬೀಳಗಿ ಕ್ಷೇತ್ರದಲ್ಲಿ 114784 ಪುರುಷ, 118094 ಮಹಿಳಾ, 16 ಇತರೆ ಸೇರಿ ಒಟ್ಟು 232894, ಬಾದಾಮಿ ಕ್ಷೇತ್ರದಲ್ಲಿ 112449 ಪುರುಷ, 111713 ಮಹಿಳಾ, 14 ಇತರೆ ಸೇರಿ ಒಟ್ಟು 224176, ಬಾಗಲಕೋಟೆ ಕ್ಷೇತ್ರದಲ್ಲಿ 123276 ಪುರುಷ, 126089 ಮಹಿಳಾ, 20 ಇತರೆ ಸೇರಿ ಒಟ್ಟು 249385 ಹಾಗೂ ಹುನಗುಂದ ಕ್ಷೇತ್ರದಲ್ಲಿ 112253 ಪುರುಷ, 113898 ಮಹಿಳಾ, 13 ಇತರೆ ಸೇರಿ ಒಟ್ಟು 226164 ಮತದಾರರಿದ್ದಾರೆ.

";