ಹುಬ್ಬಳ್ಳಿ: ಕೇಂದ್ರ ಬಿಜೆಪಿ ಹೈಕಮಾಂಡಗೆ ರಾಜ್ಯ ಬಿಜೆಪಿ ಮೇಲೆ ಬೇಸರ ಇರುವುದು ನಿಜ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸ್ಥಿತಿಗತಿ ಬಗ್ಗೆ ರಾಷ್ಟ್ರೀಯ ಹೈಕಮಾಂಡ್ ಕಂಟ್ರೋಲ್ ಇಲ್ಲ ಎನ್ನುವುದಕ್ಕಿಂತ ಬಹಳ ಬೇಸರ ಇದೆ.ಕಂಟ್ರೋಲ ಇಲ್ಲ ಎನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸಂಘಟನೆಯಲ್ಲಿ ಶಕ್ತಿಶಾಲಿಯಾಗಿದೆ. 3-4 ಜನರಲ್ಲಿ ಅಸಮಾಧಾನ ಇರುವುದು ನಿಜ. ಇದೀಗ ಅಸಮಾಧಾನ ವ್ಯಕ್ತಪಡಿಸಿದವರೂ ಪಕ್ಷ ನಿಷ್ಠರೇ, ಆದರೆ ಅವರು ವೈಯುಕ್ತಿಕ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹೊರತು ಪಕ್ಷದಿಂದಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ, ಮುಂದಿನ ದಿನಗಳಲ್ಲಿ ಹೈಕಮಾಂಡ ಅವರೊಂದಿಗೆ ಚರ್ಚೆ ನಡೆಸಿ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಂರನ್ನು ತೃಪ್ತಿ ಪಡಿಸಲು ಯಾವ ಮಟ್ಟಿಗೆ ಬೇಕಾದರೂ ಹೋಗುತ್ತದೆ. ಜಾತಿಗಳನ್ನು ಒಡೆಯುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಂರು ಎಂದು ಟೀಕಿಸಿದರು.
ರಾಜ್ಯ, ರಾಷ್ಟ್ರ ಮಟ್ಟದಲ್ಲಿ
ಜಾತಿ ಗಣತಿ ಬಿಜೆಪಿ ಪರವಾಗಿದೆ. ಈ ಬಗ್ಗೆ ರಾಷ್ಟ್ರೀಯ ನಾಯಕರು ಹಿಂದುಳಿದ ವರ್ಗಗಳ ನಾಯಕರ ಅಭಿಪ್ರಾಯ ಪಡೆದಿದ್ದು, ಪರವಾಗಿ ನಿಲುವು ವ್ಯಕ್ತಪಡಿಸಿದ್ದಾರೆ.
ಆದರೆ ಕಾಂಗ್ರೆಸ್’ನವರು ಮಾತ್ರ ವಿಳಂಬ ಧೋರಣೆ ಅನುಸರಿಸುತ್ತಿದೆ. ಜಾತಿ ಗಣತಿ ವರದಿ ಸ್ವೀಕಾರ, ಅನುಷ್ಠಾನ ಕುರಿತಾಗಿ ಸರಕಾರ ಸರ್ವ ಪಕ್ಷಗಳ ನಾಯಕರು,ಸ್ವಾಮೀಜಿಗಳು, ಸಮುದಾಯದ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಮುಂದುವರಿಯಬೇಕು.
-ಕೆ.ಎಸ್. ಈಶ್ವರಪ್ಪಬಿಜೆಪಿ ನಾಯಕರು*