ರಾಯಚೂರು: “ಮಂಗಳೂರಲ್ಲಿ ಮಸೀದಿಗಳು ಖಾಲಿಯಾಗಿವೆ. ಅದಕ್ಕೆ ರಸ್ತೆಗೆ ಬಂದು ನಮಾಜ್ ಮಾಡ್ತಿದ್ದಾರೆ. ನಮಾಜ್ ತುಂಬಿ ರಸ್ತೆಗೆ ಬಂದಿರೋರು ಅಲ್ಲ. ಭವಿಷ್ಯದ ದಿನಗಳಲ್ಲಿ ಏನ್ ಮಾಡಿದ್ರೆ ಏನ್ ಆಗ್ತದೆ ಟೆಸ್ಟ್ ಮಾಡ್ತಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡಿರೋದರಲ್ಲಿ ಯಾರ ಮೇಲೆ FIR ಆಗಿದೆ?”
ಮಂಗಳೂರಿನ ಕಂಕನಾಡಿಯಲ್ಲಿ ರಸ್ತೆ ಮಧ್ಯೆ ನಮಾಜ್ ಮಾಡಿರುವ ಘಟನೆೆಗೆ ಸಂಬಂಧಿಸಿ ಬಿಜೆಪಿ ಮುಖಂಡ ಸಿಟಿ ರವಿ ಅವರು ನೀಡಿರುವ ಖಾರವಾದ ಪ್ರತಿಕ್ರಿಯೆ. ನಗರದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ರಾಜ್ಯ ಸರ್ಕಾರದ ಓಲೈಕೆ ರಾಜಕಾರಣವೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನರು ಯಾಕೆ ಈ ರೀತಿ ಸಮೂಹವಾಗಿ ಆಕ್ರಮಣ ಮಾಡ್ತಾರೆ? ಕೆಜೆ ಹಳ್ಳಿ ,ಡಿಜೆಹಳ್ಳಿಯಲ್ಲಿ ಮನೆಗಳಿಗೆ,ಪೊಲೀಸ್ ಸ್ಚೇಷನ್ ಗೆ ಬೆಂಕಿ ಹಾಕಿದರು. ಅಂದು ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಆಗ ವಾಸ್ತವವಾಗಿ ನಾವು ಯುಪಿ ಮಾದರಿ ಅನುಸರಿಸಬೇಕಿತ್ತು. ನಮ್ಮ ಕರ್ನಾಟಕ ನಂದನ ವನ, ಚಂದನವನ ಎಂಬ ಖ್ಯಾತಿಯಿದೆ. ಆದರೆ ಇಂತಹ ರಾಜ್ಯದಲ್ಲಿ ಯಾಕೆ ಇಂತಹ ಘಟನೆಗಳು ನಡೆಯುತ್ತೀವೆ? ಹುಬ್ಬಳ್ಳಿ ಆಯ್ತು ಈಗ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿಯಾಗಿದೆ. ರಾಜ್ಯದಲ್ಲಿ ಮಟ್ಕಾ ದಂಧೆ ವ್ಯಾಪಕವಾಗಿಯಿದೆ ಅನ್ನುವ ಸತ್ಯ ಹೊರಬಿದ್ದಿದೆ ಎಂದರು.
ಕೋಮುಗಲಭೆಗೆ ಯಾರೂ ಪ್ರಚೋದನೆ ಮಾಡ್ತಿದ್ದಾರೆ. ಕ್ರೈ ಮಾಡಿದವರನ್ನ ಕ್ರಿಮಿನಲ್ ಗಳ ತರ ಟ್ರೀಟ್ ಮಾಡಬೇಕು. ರಸ್ತೆಯಲ್ಲಿ ನಮಾಜ್ ಮಾಡಿದವರಿಗೆ ಸರಿಯಾಗಿ ಬಾರಿಸಿದ್ದರೆ ಇನ್ನೊಂದು ಊರಲ್ಲಿ ಈತರ ಆಗ್ತಿರಲಿಲ್ಲ. ಇವರು ಓಲೈಕೆ ರಾಜಕಾರಣ ಮಾಡಿರೋದರಿಂದ ಇನ್ನೊಂದು ಊರಲ್ಲಿ ಶುರು ಆಗುತ್ತಿದೆ ಎಂದರು.