This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsPolitics NewsState News

ಸಂವಿಧಾನ ವಿರೋಧಕ್ಕೆ ಕಡಿವಾಣ ಅಗತ್ಯ : ತಿಮ್ಮಾಪೂರ

ಸಂವಿಧಾನ ವಿರೋಧಕ್ಕೆ ಕಡಿವಾಣ ಅಗತ್ಯ : ತಿಮ್ಮಾಪೂರ

ಬಾಗಲಕೋಟೆ:

ನಾವೆಲ್ಲರೂ ಒಂದೇ ದೇಶದವರು ಎಂಬ ಭಾವನೆ ಬರಬೇಕಾದರೆ ಸಂವಿಧಾನ ವಿರೋಧಕ್ಕೆ ಕಡಿವಾಣ ಹಾಕದಿದ್ದರೆ ಎಲ್ಲೋ ಒಂದು ಕಡೆ ದೇಶದಕ್ಕೆ ಹಾನಿಯಾಗುತ್ತದೆ ಎಂಬ ನೋವು ಉಂಟಾಗುತ್ತದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಭಿಪ್ರಾಯಪಟ್ಟರು.

ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಎಸ್.ಸಿ.ಎಸ್‌ಪಿ, ಟಿ.ಎಸ್.ಪಿ ಯೋಜನೆಗಳು ಮತ್ತು ಸಂವಿಧಾನ ಅರಿವು ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇವರು, ಧರ್ಮ ಜಾತಿಗಳು ತಾಂಡವಾಡುತ್ತಿರುವ ಈ ದೇಶದಲ್ಲಿ ಸಂವಿಧಾನದ ವಿರೋದಗಳು ಮಾರಕವಾಗಿವೆ ಎಂದರು.

ಬಾಬಾ ಸಾಹೇಬ ಅಂಬೇಡ್ಕರ ಅವರು ಎಲ್ಲ ಜಾತಿ ಧರ್ಮಗಳಲ್ಲಿ ಸಮನ್ವಯತೆ ಸಾಧಿಸಿ ಸಾಮಾಜಿಕ, ಆರ್ಥಿಕ, ರಾಜಕೀಯ ಒಳಗೊಂಡ ದೇಶಕ್ಕೆ ನ್ಯಾಯಯುತವಾದ ಸಂವಿಧಾನ ಜಾರಿಗೆ ತಂದು ೭೩ ವರ್ಷಗಳ ನಂತರ ಸಂವಿಧಾನ ಅವಲೋಕನÀ ಮಾಡಿದಾಗ ಎಷ್ಟರ ಮಟ್ಟಿಗೆ ಸಂವಿಧಾನ ಸದ್ಬಳಕೆ ಆಗಿದೆ ಎಂದುದನ್ನು ತಿಳಿಯಬೇಕಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಬೇಕಿದೆ. ಚುನಾವಣೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಕಿಮ್ಮತ್ತು ಒಂದೇ ಮಾಡಿದ್ದಾರೆ. ಅದರ ಸದ್ಬಳಕೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿಯುವರು ಅಗತ್ಯವಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ ಕೊಟ್ಟಂತಹ ಸಂವಿಧಾನದಿAದ ಇಂದು ನಾವು ಮಂತ್ರಿಗಳಾಗಿ, ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇವೆ. ನಿಮ್ಮ ಅಮೂಲ್ಯವಾದ ಮತ ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗಿದೆಯೇ ಇಲ್ಲವೋ ಎಂಬುದನ್ನು ಅವಲೋಕನ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಚುನಾವಣೆಗಳಲ್ಲಿ ವಿಪರೀತ ಖರ್ಚು ಮಾಡಿ ಗೆದ್ದಿದ್ದಾದರೆ, ಅಂಬೇಡ್ಕರವರ ಆಶೆ ನೆರವೇರಿದೆ ಎಂಬುದನ್ನು ಅವಲೋಕನ ಮಾಡಬೇಕಿದೆ. ಮಹಿಳೆಯರಿಗೆ ಸಮಾನತೆ ಕೊಡಲು ರಾಜೀನಾಮೆ ನೀಡುತ್ತೇನೆ ಎಂದು ಅಂಬೇಡ್ಕರ ಹೇಳಿದ್ದರು. ಸಂವಿಧಾನ ಸರಿಯಾಗಿ ಸದ್ಬಳಕೆಯಾಗದೇ ಹೋದರೆ ಅದಕ್ಕೆ ಅನುಮಾನ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಸರಕಾರ ನೋಡುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಸಂವಿಧಾನ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿ ಡಾ.ಜಾಗೃತಿ ದೇಶಮಾನೆ, ಎಸ್.ಸಿ.ಪಿ, ಟಿ.ಎಸ್.ಪಿ ಕಾಯ್ದೆ ಕುರಿತು ಭೀಮಾಶಂಕರ ಎಚ್.ಆರ್, ಅಮರೇಶ ನಾಯಕ, ಎಸ್.ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಕುರೇರ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಂವಿಧಾನ ಪೀಠಿಕೆಯನ್ನು ಓದಿಸಿದರು. ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಂದಾ ಹಣಮರಟ್ಟಿ, ನಗರಸಭೆ ಪೌರಾಯುಕ್ತ ರಮೇಶ ಜಾದವ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಂಚಮಿತ್ರ ವಾಟ್ಸ್ಪ್ ಚಾರ್ಟ ಲೋಕಾರ್ಪಣೆ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು, ಗ್ರಾಮ ಪಂಚಾಯತಿಗಳಿಗೆ ಸಂಬAಧಿಸಿದ ಸೇವೆಗಳಿಗೆ ಅರ್ಜಿ ಸಲ್ಲಿಕೆ, ಅರ್ಜಿ ಸ್ಥಿತಿಗತಿ, ಪರಿಶೀಲನೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬAಧಿಸಿದ ಕೊಂದುಕೊರತೆ ದಾಖಲಿಸಲು ಪ್ರಥಮ ಬಾರಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಅಬಿವೃದ್ದಿ ಪಡಿಸಿದ ವಾಟ್ಸಪ್ ಚಾರ್ಟಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜಿಲ್ಲಾ ಮಟ್ಟದಲ್ಲಿ ಲೋಕಾರ್ಪಣೆಗೊಳಿಸಿದರು.

Nimma Suddi
";