1047 ಜನ ಗುಣಮುಖ, 584 ಹೊಸ ಪ್ರಕರಣಗಳು ದೃಡ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್‍ನಿಂದ 1047 ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ 584 ಕೊರೊನಾ ಪ್ರಕರಣಗಳು ಹಾಗೂ 14 ಮೃತ ಪ್ರಕರಣಗಳು ಶನಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 28584 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 21592 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ ಬಾಗಲಕೋಟೆ 262, ಬಾದಾಮಿ 60, ಜಮಖಂಡಿ 109, ಹುನಗುಂದ 46, ಮುಧೋಳ 75, ಬೀಳಗಿ 32 ಜನರಲ್ಲಿ ಸೋಂಕು ದೃಡಪಟ್ಟಿವೆ.
ಕೋವಿಡ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗುತ್ತಿದ್ದ 1215 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 590489 ಸ್ಯಾಂಪಲ್‍ಗಳನ್ನು ಪರೀಕ್ಷೀಸಲಾಗಿದ್ದು, ಈ ಪೈಕಿ 560090 ನೆಗಟಿವ್ ಪ್ರಕರಣ, ಹಾಗೂ 239 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು 6753 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್‍ಗೆ 14 ಜನ ಮೃತ
ಕೋವಿಡ್ಗೆ ಹೊಸದಾಗಿ ಮತ್ತೆ 14 ಜನ ಮೃತಪಟ್ಟಿದ್ದು, ಮೃತರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 70 ವರ್ಷದ ವೃದ್ದ (ಪಿ-1572931), ವಿಜಯಪುರ ಜಿಲ್ಲೆ ಮುದ್ದೇಬಿಹಾಲ ತಾಲೂಕಿನ ನಾಗರಬೆಟ್ಟದ 58 ವರ್ಷದ ಪುರುಷ (ಪಿ-2101840), ಹುನಗುಂದ ತಾಲೂಕಿನ ಮುಗನೂರಿನ 54 ವರ್ಷದ ಪುರುಷ (ಪಿ-1754064), ಜಮಖಂಡಿಯ 58 ವರ್ಷದ ಮಹಿಳೆ (ಪಿ-2066326), ಗಿರಿಸಾಗರದ 52 ವರ್ಷದ ಪುರುಷ (ಪಿ-2187927), ಬಾದಾಮಿ ತಾಲೂಕಿನ ಕೆಂದೂರಿನ 64 ವರ್ಷದ ವೃದ್ದೆ (ಪಿ-2187885), ಜಮಖಂಡಿ ತಾಲೂಕ ಶೂರಪಾಲಿಯ 40 ವರ್ಷದ ಮಹಿಳೆ (ಪಿ-2206877), ಮುಧೋಳನ 41 ವರ್ಷದ ಪುರುಷ (ಪಿ-2206879), ಮಹಾಲಿಂಗಪೂರದ 58 ವರ್ಷದ ಮಹಿಳೆ (ಪಿ-1912662), ಬಾಗಲಕೋಟೆಯ 71 ವರ್ಷದ ವೃದ್ದ (ಪಿ-2050338), ತುಳಸಿಗೇರಿ 45 ವರ್ಷದ ಪುರುಷ (ಪಿ-1820293), ಕಗಲಗೊಂಬದ 44 ವರ್ಷದ ಪುರುಷ (ಪಿ-2187922), ನವನಗರದ 35 ವರ್ಷದ ಪುರುಷ (ಪಿ-2178172), 54 ವರ್ಷದ ಪುರುಷ (ಪಿ-2095398) ಮೃತಪಟ್ಟಿದ್ದಾರೆ.