ಬಾಗಲಕೋಟೆ:
ಸಾರ್ವಜನಿಕರಲ್ಲಿ ಪೊಲೀಸ್ ಎಂದರೆ ಭಯದ ಕಲ್ಪನೆಯಿದ್ದು, ವಾಸ್ತವದಲ್ಲಿ ಪೊಲೀಸ್ ಒಂದು ರಕ್ಷಣಾ ಪಡೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ನವನಗರದ ಪೊಲೀಸ್ ಹುತಾತ್ಮರ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ್ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಅವರು ಪೊಲೀಸ್ ಇಲಾಖೆಯೆಂದರೆ ಸವಾಲುಗಳ ಇಲಾಖೆಯಾಗಿದೆ. ನಾಡಿನ ಭದ್ರತೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ, ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಯುವ ಪೊಲೀಸ್‌ರು ಪ್ರಾಣ ತ್ಯಾಗ ಮಾಡಿದ್ದು ಇದೆ. ತಮ್ಮ ಜೀವವನ್ನೇ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಪೊಲೀಸ್‌ರ ಜೀವನ ಕಷ್ಟಕರವಾದದ್ದು. ಕೆಲಸದ ಒತ್ತಡದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಆರೋಗ್ಯದತ್ತ ಗಮನ ನೀಡುವುದನ್ನು ಮರೆಯಬಾರದು ಎಂದು ತಿಳಿಸಿದರು.
ಸಾರ್ವಜನಿಕರ ಆಸ್ತಿ ಪಾಸ್ತಿ ಉಳಿಸಲು, ಸಮಾಜದ ಶಾಂತಿ ಸುವ್ಯವಸ್ಥೆ ಕಾಲಾಡಲು ಶ್ರಮಿಸುತ್ತೆವೆ ಎಂದು ಪೊಲೀಸ ಹೆಮ್ಮೆ ಪಡಬೇಕು. ಬದಲಾದ ಜಗದಲ್ಲಿ ಸಮಾಜ ಘಾತುಕ ಸಂಖ್ಯೆ ಹೆಚ್ಚಾಗಿ ಸ್ವರೂಪವೂ ಬದಲಾಗಿವೆ. ಇಂತಹ ಸವಾಲುಗಳಿಗೆ ತಂತ್ರಜ್ಞಾನವನ್ನು ತಿಳಿಸಿ ವೈಜ್ಞಾನಿಕ ತರಭೇತಿ ನೀಡಿದಲ್ಲಿ ಅಪರಾಧಗಳನ್ನು ತಡೆಯಬಹುದು. ಪೊಲೀಸ್ ಇಲಾಖೆಯಲ್ಲಿ ಸೌಲಭ್ಯಗಳ ಕುರಿತು ಸಾಕಷ್ಟು ಕೊರತೆಗಳಿವೆ. ಅವುಗಳನ್ನು ನೀವಾರಿಸುವಲ್ಲಿ ಸರಕಾರ ಮತ್ತು ಸಾರ್ವಜನಿಕ ವಲಯ ಆಸಕ್ತಿ ವಹಿಸಬೇಕಿದೆ ಎಂದರು.
ತಮ್ಮ ಪುರ್ವಾಶ್ರಮದಲ್ಲಿ ಪೊಲೀಸ್ ಇನ್ಸಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಪೊಲೀಸ್ ತರಬೇತಿಯಿಂದ ಹಿಡಿದು ನೌಕರಿವರೆಗೆ ಜೊತೆಯಾಗಿದ್ದ ಆತ್ಮೀಯ ಸ್ನೇಹಿತ ರವಿ ಉಕ್ಕುಂದ ಹುತಾತ್ಮರಾದ ಸುದ್ದಿ ಕೇಳಿ ವಿಚಲಿತನಾದೆ. ಅಂದಿನ ಪೊಲೀಸ್ ವ್ಯವಸ್ಥೆಗಿಂತ ಇಂದಿನ ಪೊಲೀಸ್ ವ್ಯವಸ್ಥೆ ತುಂಬಾ ಬದಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಂದಿದ್ದರಿAದ ಅಪರಾಧ ಹಾಗೂ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಬಹಳ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಸ್ವಾಗತಿಸಿ, ಕಳೆದ ಒಂದು ವರ್ಷದಲ್ಲಿ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟçದ ೧೮೯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಹೆಸರನ್ನು ಓದಿ, ಅಕ್ಟೋಬರ್ ೨೧ ಹುತಾತ್ಮರಾದ ಪೊಲೀಸರನ್ನು ನೆನೆದು ಅವರ ಕುಟುಂಬಗಳಿಗೆ ದೈರ್ಯ ತುಂಬುವ ದಿನವಾಗಿದೆ ಎಂದು ಹೇಳಿದರು. ವಿವಿಧ ಗಣ್ಯಮಾನ್ಯರು, ಹುತಾತ್ಮರಾದ ಪೊಲೀಸ್‌ರ್ ಕುಟುಂಬ ಸದಸ್ಯರು. ರೈತರು, ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮ ಸ್ಮಾರಕಕ್ಕೆ ಪುಸ್ಪಚಕ್ರ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಡಿಎಆರ್ , ಆರ್ ಎಸ್ ಐ ಶಿವಾನಂದ ಜೇವರ್ಗಿ ಅವರ ನಾಯಕತ್ವದಲ್ಲಿ ಪರೇಡ್ ಮೂಲಕ ಗೌರವ ಸಲ್ಲಿಸಲಾಯಿತು.
ಪೊಲೀಸ್ ಬ್ಯಾಂಡ್ ತಂಡವು ಅತ್ಯಂತ್ಯ ಸುಮಧುರವಾಗಿ ವಾದ್ಯಗಳನ್ನು ನುಡಿಸಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಹಾಂತೇಶ ಮತ್ತು ಆರ್.ಬಿ.ಕುರಿ ಕಾರ್ಯಕ್ರಮ ನಿರೂಪಿಸಿದರು.