ಬಾಗಲಕೋಟೆ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುವುದರ ಮೂಲಕ ಬ್ಯಾಂಕ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಗಮನರ್ಹವಾದ ಪಾತ್ರ ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳನ್ನು ಸಮಾಜದ ಮುನ್ನೆಲೆಗೆ ತರುತ್ತಿರುವ ಬ್ಯಾಂಕ್‌ಗಳ ಕಾರ್ಯ ಮೆಚ್ಚುವಂತಹದ್ದು ಎಂದು ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಹೇಳಿದರು.
ನಗರದ ಬವಿವ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು ಈ ಶಾಖೆ ಸ್ಥಾಪಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಬೀಳೂರು ಕಾಲೋನಿಯ ನಿವಾಸಿಗಳಿಗೆ ಮತ್ತು ಎಪಿಎಂಸಿ ಸುತ್ತಲಿನ ವ್ಯಾಪಾರಸ್ಥರಿಗೆ ಇದರಿಂದ ಪ್ರಯೋಜನವಾಗಲಿದೆ. ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಬ್ಯಾಂಕ್‌ನ ನೂತನ ಶಾಖೆ ಸ್ಥಾಪಿಸಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಅಕಾರಿಗಳಿಗೆ ಕೃತಜ್ಞತೆಗಳು. ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿದ್ದು ಎಲ್ಲರೂ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಂಡಿ ಅಜಯಕುಮಾರ ಶ್ರೀವಾತ್ಸವ, ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಮತಿಮಠರ ಪ್ರಾಮಾಣಿಕ ಸಮಾಜಸೇವೆಯನ್ನು ಕೇಳಿದ್ದು ಇಂದು ಅವರನು ಕಂಡಾಗ ಅವರ ಸರಳತೆ, ಭಾವ ಮೆಚ್ಚುಗೆಯಾಯಿತು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಬವಿವ ಸಂಘಕ್ಕೂ ಬಹಳ ವರ್ಷಗಳ ನಂಟು ಇದ್ದು, ಇದಿಗೆ ಮತ್ತೊಂದು ೪ನೇ ಶಾಖೆ ಉದ್ಘಾಟನೆಗೊಂಡಿದೆ. ಶಾಖೆಯಲ್ಲಿ ಲಾಕರ್, ಎಟಿಎಂ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಬ್ಯಾಂಕ್‌ನ ಸೀನಿಯರ್ ರೀಜಿನಲ್ ಮ್ಯಾನೇಜರ್ ನೀರಕಾಂತ, ಸೀನಿಯರ್ ಮ್ಯಾನೇಜರ್ ಪ್ರವೀಣ ಪಾಠಕ್, ಸೀನಿಯರ್ ಬ್ರಾ÷್ಯಂಚ್ ಮ್ಯಾನೇಜರ್ ಮಹಾಂತೇಶ ತಾವಧಾರೆ, ಪ್ರಭಾರಿ ಪ್ರಾಚಾರ್ಯ ಡಾ.ಶಿವಕುಮಾರ ಸೊಲಬನ್ನವರ್, ವೈದ್ಯಕೀಯ ಅÃಕ್ಷಕಿ ಡಾ.ಭುವನೇಶ್ವರಿ ಯಳಮಲಿ ಮತ್ತು ಮೆಡಿಕಲ್ ಕಾಲೇಜಿನ ಸಿಬ್ಬಂದಿ ಇದ್ದರು.