ಬಾಗಲಕೋಟೆ:
ವಿಕಲಚೇತನ ಮಕ್ಕಳಿಗೆ ಸರಕಾರದ ಸೌಲಭ್ಯ, ಶಿಕ್ಷಣ ಪಡೆಯುವಲ್ಲಿ ಎಂ.ಆರ್.ಡಬ್ಲೂ, ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ ಅವರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.
ನೂತನ ಜಿ.ಪಂ. ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ, ಫೆÇೀರ್ಥ ವೇವ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುನರ್ವಸತಿ ಕಾರ್ಯಕರ್ತರಿಗೆ ಎರಡು ದಿನಗಳ ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯ ಮಕ್ಕಳಂತೆಯೇ ಶಿಕ್ಷಣ, ಸೌಲಭ್ಯಗಳನ್ನು ಪಡೆಯಲು ನೀವೆಲ್ಲರೂ ಕೆಲಸ ಮಾಡುತ್ತಿದ್ದು, ಹುಟ್ಟಿದ ಪ್ರತಿ ಮಗು ಶಿಕ್ಷಣ ಪಡೆಯಬೇಕು ಮತ್ತು ಸರಕಾರದ ಸೌಲಭ್ಯಗಳನ್ನು ಪಡೆಯುವುದು ಎಲ್ಲರ ಹಕ್ಕು ಎಂದರು.
ಸರಕಾರದಿಂದ ಸಿಗಬೇಕಾದ ಶಿಕ್ಷಣ ಮತ್ತು ಸರಕಾರಿ ಸೌಲಭ್ಯಗಳಾದ ಯುಡಿಐಡಿ ಕಾರ್ಡ, ಪೋಷಣಾ ಭತ್ಯೆ, ಸಾಧನ ಸಲಕರಣೆಗಳು, ವಿದ್ಯಾರ್ಥಿವೇತನ, ಪೆÇ್ರೀತ್ಸಾಹಧನ ಹೀಗೆ ವಿವಿಧ ರೀತಿಯ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ವಿಕಲಚೇತನರ ಸೇವೆ ಮಾಡುವುದು ಒಂದು ಪುಣ್ಯದ ಕೆಲಸ ಎಂದು ತಿಳಿದು ಕೆಲಸ ಮಾಡಬೇಕು. ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಎಲ್ಲ ಎಂ.ಆರ್.ಡಬ್ಲೂ, ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸಬೇಕು. ಯಾವುದವೇ ಮಗು ಶಿಕ್ಷಣ ಮತ್ತು ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಸಲಹೆ ನೀಡಿದರು.
ಬಾಗಲಕೋಟೆ ತಹಶೀಲದಾರ ಅಮರೇಶ ಪಮ್ಮಾರ, ಫೌಂಡೇಶನ್ ಸಿಬ್ಬಂದಿಗಳಾದ ರೋಶಿನಿ, ಬಿಂದು ಮರಸಾನಿ, ಅಭಿನ್, ರಿಯಾಜ್ ವೇದಿಕೆಯ ಹಾಜರಿದ್ದರು. ಫೆÇೀರ್ಥ ವೇವ್ ಫೌಂಡೇಶನ್ ಸಂಯೋಜಕ ಬಸವರಾಜ ಮ್ಯಾಗೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಅಂಜನಾದೇವಿ ಸ್ವಾಗತಿಸಿದರು. ರಾಮು ಮರಸಾನಿ ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ 230 ಕ್ಕೂ ಹೆಚ್ಚು ಎಂ.ಆರ್.ಡಬ್ಲೂ, ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ ಕಾರ್ಯಕರ್ತರು ಭಾಗವಹಿಸಿದ್ದರು.