ಬಾಗಲಕೋಟೆ
ಅಪಾಯದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತಿçÃಯರಿಗೆ ವುಶು ಕ್ರೀಡೆಯಂತಹ ಆತ್ಮರಕ್ಷಣಾ ಕಲೆಗಳು ಇಂದು ಅವಶ್ಯವಾಗಿವೆ ಎಂದು ರಾಜ್ಯ ವುಶು ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ವುಶು ಕ್ರೀಡೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಅಖಿಲ ಭಾರತ ವಿವಿ ವುಶು ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ, ಕಿತ್ತೂರ ರಾಣಿಚೆನ್ನಮ್ಮ ಪ್ರಶಸ್ತಿ ಪುರಸ್ಕçತೆ ಚಂದನಾ ಗರಸಂಗಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿನಿಯರು, ಮಹಿಳೆಯರು ಇಂದು ಶಿಕ್ಷಣ, ಉದ್ಯೋಗಕ್ಕೆ ಹೋಗುವಾಗ ಅದರಲ್ಲೂ ವಿಶೇಷವಾಗಿ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳಿಂದ ಮತ್ತು ಇತರೆ ಸಂಕಷ್ಟ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಕಲೆ ಸಹಾಯ ಮಾಡುತ್ತದೆ ಎಂದರು.
ವುಶು ಕ್ರೀಡೆಯ ರಾಜ್ಯ ಕಚೇರಿ ಬಾಗಲಕೋಟೆ ಆಗಿರುವುದರಿಂದ ಜತೆಗೆ ಚಂದನಾ ಬಾಗಲಕೋಟೆ ನಗರದವಳು ಎಂಬುದು ಎಲ್ಲರಿಗೂ ಹೆಮ್ಮೆಯ ವಿಷಯ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಲ್ಲಿನ ಪ್ರತಿಭೆಗೆ ತಕ್ಕ ಶಿಕ್ಷಣ ಕೊಡಿಸುವದು ಅವಶ್ಯವಾಗಿದೆ. ಮಕ್ಕಳು ಶಿಕ್ಷಣವಂತರಾದರೆ ಸಾಲದು ಅದರೊಂದಿಗೆ ಮಾನವವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಕಾರಿ ಪರಶುರಾಮ ಶಿನ್ನಾಳಕರ್, ಇಂದು ಶಿಕ್ಷಣವಂತರೇ ತಪುö್ಪದಾರಿ ಹಿಡಿಯುತ್ತಿರುವದು ವಿಪರ್ಯಾಸ. ಅನೇಕ ಅನಾಹುತಕಾರಿ ಘಟನೆ ಗಮನಿಸಿದರೆ ಸುಶಿಕ್ಷಿತರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡಬೇಕಾಗಿದೆ. ಇಲ್ಲವಾದಲ್ಲಿ ಪಾಲಕರೆ ಸಮಾಜಕ್ಕೊಂದು ಗಂಡಾAತರ ಒದಗಿಸಿದಂತಾಗುತ್ತದೆ ಎಂದರು.
ರಮೇಶ ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ಬವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ರಾಜ್ಯ ವುಶು ಸಂಸ್ಥೆಯ ಪ್ರಧಾನ ಕರ‍್ಯದರ್ಶಿ ಅಶೋಕ ಮೋಕಾಶಿ, ತರಬೇತುದಾರ ಸಂಗಮೇಶ ಲಾಯದಗುಂದಿ, ಕಾವ್ಯ, ಅಂಜಲಿ, ಗುರುನಾಥ ತಳವಾರ, ಸಮೀರಅಲಿ ರಫೂಗರ, ವಿವೇಕಾನಂದ ಗರಸಂಗಿ, ಕಾವೇರಿ ಗರಸಂಗಿ ಇತರರು ಇದ್ದರು. ಇತ್ತೀಚಿಗೆ ನಿಧನರಾದ ಹಿರಿಯ ಪತ್ರಕರ್ತ ರಾಮ ಮನಗೂಳಿ, ಚಿತ್ರನಟ ಕೆ.ಶಿವರಾಮ್ ಅವರಿಗೆ ಸಭೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.