ದ್ರಾಕ್ಷಿಗೆ ವರ ಮೂರು ಜಿಲ್ಲೆಗಳ
ಮಣ್ಣು, ಹವಾಮಾನ
ಮೂರೂ ಜಿಲ್ಲೆಯಲ್ಲಿ ದ್ರಾಕ್ಷಿ ಹೆಚ್ಚು ಬೆಳೆಯುವುದೇಕೆ
ಹೆಚ್ಚೆಚ್ಚು ಬಿಸಿಲು ತಿಂದಷ್ಟು ದ್ರಾಕ್ಷಿ ಸಿಹಿಯಾಗಿ ಅಕ ಇಳುವರಿ ಬರುತ್ತದೆ. ಆ ಮೂಲಕ ಬಾಯಿ ರುಚಿ ತಣಿಸುತ್ತದೆ.ಇಂಥ ಹವಾಗುಣ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ‘ಾಗದಲ್ಲಿರುವುದರಿಂದ ಇಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುವ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ.
ಬಿಸಿಲ ಜತೆಗೆ ಇಲ್ಲಿನ ಮಣ್ಣಿನ ಗುಣವೂ ದ್ರಾಕ್ಷಿಗೆ ಹೇಳಿ ಮಾಡಿಸಿದಂತಿದೆ. ಹಣ್ಣು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾ ಕ್ಯಾಲಿಪೋರ್ನಿಯಾದಲ್ಲಿರುವ ವಾತಾವರಣವೇ ಮುರು ಜಿಲ್ಲೆಗಳಲ್ಲಿದೆ. ಇಲ್ಲಿನ ಬಿಸಿಲು ದ್ರಾಕ್ಷಿ ಬೆಳೆಗೆ ವರದಾನವಾಗಿದೆ. ಹೀಗಾಗಿ ದ್ರಾಕ್ಷಿ ಕ್ಷೇತ್ರ ಹೆಚ್ಚಾಗುತ್ತಲೇ ಇದೆ. ಬಿಸಿ ಹಾಗೂ ಆರ್ದ್ರತೆ ಹೊಂದಿದ ಹವಾಮಾನ ಇಲ್ಲಿಯದು. ಬೇಸಿಗೆಯಲ್ಲಿ ವಿಜಯಪುರದಲ್ಲಿ ಬಿಸಿಲು 44 ಡಿಗ್ರಿಗೂ ಹೆಚ್ಚಿದರೂ, ಬೆಳೆಗಾರರು ಮಾತ್ರ ಬಿಸಿಲು ಖುಷಿ ಅನು‘ವಿಸುತ್ತಾರೆ.
ಮಣ್ಣಿನ ಗುಣ ಪೂರಕ: ಈ ‘ಾಗದ ಮಣ್ಣಿನ ಗುಣವೂ ದ್ರಾಕ್ಷಿಗೆ ಪೂರಕವಾಗಿದೆ. ಮರಳು ಮಿಶ್ರಿತ ಕೆಂಪು ಹಾಗೂ ಗರಸಿನ ಮಾದರಿಯ ಮಣ್ಣು ‘ರಪೂರ ದ್ರಾಕ್ಷಿ ಬೆಳೆಯಲು ಪೂರಕವಾಗಿದೆ 3 ಜಿಲ್ಲೆಗಳ ಮಣ್ಣಿನಲ್ಲಿ ಕ್ಷಾರದ ಅಂಶವಿರುವುದರಿಂದ ಶೀಘ್ರ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದಾಗಿ ನೀರು ಕೂಡಾ ಸರಾಗವಾಗಿ ಬಸಿದು ಹೋಗಲು ಅನುಕೂಲವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ 1948ರಲ್ಲಿ ತಿಕೋಟಾದ ಶ್ಯಾಮರಾವ್ ಛತ್ರೆ ಎಂಬುವರು ಪ್ರಥಮ ಬಾರಿಗೆ ಬೀಜವನ್ನೊಳಗೊಂಡ ದ್ರಾಕ್ಷಿ ಬೆಳೆದರು. ಬಳಿಕ 1950ರಲ್ಲಿ ಬೋಕ್ರಿ ಎಂಬ ತಳಿಯ ದ್ರಾಕ್ಷಿಯನ್ನು ಬಿಜ್ಜರಗಿಯ ನಾನಾ ಸಾಹೇಬ್ ಕುಲಕರ್ಣಿ ಅವರು ಬೆಳೆದರು. ಬಳಿಕ ಇದೇ ಕುಲಕರ್ಣಿಯವರು ಸೀಡ್‌ಲೆಸ್ ದ್ರಾಕ್ಷಿ ಬೆಳೆಯುವ ಮೂಲಕ ಇತರೆ ರೈತರ ಗಮನಸೆಳೆದರು.
ಮನೆ ದ್ರಾಕ್ಷಿಘಿ, ಇಂದು ಜಗತ್ಪ್ರಸಿದ್ದ:ನಂತರದ ದಿನಗಳಲ್ಲಿ ಕೆಲವರು ಕುಟುಂಬಕ್ಕೆಂದು ದ್ರಾಕ್ಷಿ ಬೆಳೆದರು. ನಂತರದ ವರ್ಷಗಳಲ್ಲಿ ಜಿಲ್ಲೆಯ ಬಹುತೇಕ ರೈತರು ತಮ್ಮ ಪಾರಂಪರಿಕ ಕೃಷಿ ಪದ್ಧತಿಯೊಂದಿಗೆ ದ್ರಾಕ್ಷಿಯನ್ನು ಬೆಳೆಯಲಾರಂಭಿಸಿದರು. ಇಲ್ಲಿನ ಮಣ್ಣುಘಿ, ಹವಾಮಾನ ದ್ರಾಕ್ಷಿಗೆ ಪೂರಕವಾಗಿದೆ ಎಂಬ ವೈಜ್ಞಾನಿಕ ಸತ್ಯ ಅರಿತ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾರಂಭಿಸಿದ್ದು ಇತಿಹಾಸ.
ಕೃಷಿಯ 4 ಕಾಲುಗಳಾದ ಮನುಷ್ಯಘಿ, ಮಣ್ಣುಘಿ, ಜಾನುವಾರು, ಜೀವಾಣುಗಳಲ್ಲಿ ಒಂದಕ್ಕೆ ಊನವಾದಲ್ಲಿ ಕೃಷಿಯೇ ಬಿದ್ದು ಹೋಗುತ್ತದೆ ಎಂಬುದನ್ನರಿತ ರೈತರು, ಮಣ್ಣಿನ ಸವಕಳಿ ಕ್ಷಾರಗೊಳಿಸುವುದನ್ನು ತಡೆಗಟ್ಟುವ ಮೂಲಕ ದ್ರಾಕ್ಷಿಯನ್ನು ಸಮೃದ್ಧವಾಗಿ ಬೆಳೆಯಲಾರಂಭಿಸಿದರು.
ಮಾದರಿಯಾದ ರೈತರು: ಹೀಗೆ ಉತ್ತಮ ಮಣ್ಣು ಮತ್ತು ಹವಾಮಾನ ಆ‘ರಿತ ದ್ರಾಕ್ಷಿ ಬೆಳೆದ ರೈತರು ಅತ್ಯಕ ಲಾ‘ದಲ್ಲಿ ಮುನ್ನಡೆಯುತ್ತಿರುವುದು ಇತರೇ ರೈತರಿಗೆ ಮಾದರಿಯಾಯಿತು. ನಂತರದ ದಿನಗಳಲ್ಲಿ ಒಬ್ಬರನ್ನೊಬ್ಬರು ನೋಡಿ, ಇನ್ನೊಬ್ಬರು ದ್ರಾಕ್ಷಿ ಬೆಳೆಯುವ ಮೂಲಕ ಇದೀಗ ಜಿಲ್ಲೆಯ ಬಹುತೇಕ ‘ಾಗಗಳಲ್ಲಿ ದ್ರಾಕ್ಷಿ ಬೆಳೆಯುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಗಮನಸೆಳೆದಿದ್ದಾರೆ.
ಮಣೂಕ: ನಂತರದ ದಿನಗಳಲ್ಲಿ ದ್ರಾಕ್ಷಿಗಿಂತ ಒಣದ್ರಾಕ್ಷಿಗೆ ಹೆಚ್ಚು ಬೆಲೆ ಬಾಳುತ್ತದೆ ಎಂಬ ಸತ್ಯ ಅರಿತ ಬಹುತೇಕ ಬೆಳೆಗಾರರು ದ್ರಾಕ್ಷಿ ಮಾರಾಟದ ಬದಲಿಗೆ ಒಣದ್ರಾಕ್ಷಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಇದಕ್ಕೆಂದೇ ಖಾಸಗಿ ಸಹ‘ಾ ಗಿತ್ವದ 14 ಶೀತಲ ಗೃಹಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ಒಣದ್ರಾಕ್ಷಿ ತಯಾರಿಸಿ, ಕೈತುಂಬ ಕಾಂಚಾಣ ಎಣಿಸುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ವಿಶೇಷ. ಈಗ ನೀರಾವರಿ ಪ್ರದೇಶ ಹೆಚ್ಚಾದ ಜತೆಗೆ ಕೆರೆ ತುಂಬಿಸುತ್ತಿರುವುದೂ ದ್ರಾಕ್ಷಿ ಪ್ರದೇಶ ವಿಸ್ತರಣೆಗೊಂಡು ಬೆಳೆ ಪ್ರಮಾಣ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ.
ವಿಜಯಪುರದ ಮಣ್ಣಿನ ಗುಣದಲ್ಲಿದೆ ಅಂಥ ಶಕ್ತಿಯಿದೆ. ಸಮೃದ್ಧವಾಗಿ ದ್ರಾಕ್ಷಿ ಬೆಳೆಯಲು ಜಿಲ್ಲೆಯ ಜನತೆಗೆ ನಿಸರ್ಗವೇ ಸಾಥ್ ನೀಡಿದೆ. ಈಗ ಸರಕಾರದಿಂದ ಹೆಚ್ಚಿನ ಉತ್ತೇಜನ ಸಿಕ್ಕಿದ್ದರಿಂದಾಗಿ ಜಿಲ್ಲೆಯಲ್ಲಿ ದ್ರಾಕ್ಷಿ ಪ್ರಮಾಣ ಹೆಚ್ಚುತ್ತಿರುವುದು ಸಂತಸದ ಸಂಗತಿ.
ನಾನಾಸಾಹೇಬ ಕುಲಕರ್ಣಿ, ಬಾಬಾನಗರ
ದ್ರಾಕ್ಷಿ ಜಿಲ್ಲೆಯ ಹವಾಮಾನ ಉತ್ತಮವಾಗಿದೆ. ಆದರೆ ಈ ವರ್ಷ ಮಳೆ ಅಕವಾಗಿದ್ದರಿಂದ ಇಳುವರಿ ಕಡಿಮೆಯಾಗಿದೆ. ಪೂರಕ ವಾತಾವರಣವಿಲ್ಲದ್ದರಿಂದ ಖರ್ಚು-ವೆಚ್ಚ ಹೆಚ್ಚಾಗಿದೆ. ಆದಾಗ್ಯೂ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಮಣೂಕು ಮಾಡುತ್ತಿದ್ದೇವೆ.
ಹಣಮಂತ ಮೂರಾಬಟ್ಟಿಘಿ, ಗೋಠೆ, (ಜಮಖಂಡಿ)
ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ದ್ರಾಕ್ಷಿ ಹಾಳಾಗಿದೆ. 30 ಎಕರೆ ದ್ರಾಕ್ಷಿಗೆ 30 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಆದರೆ ಈ ಪೈಕಿ ಶೇ. 10ರಷ್ಟು ಖರ್ಚು ಮರಳುವ ಸ್ಥಿತಿಯಿಲ್ಲಘಿ. ಪತ್ರಿಕೆ ಆಯೋಜಿಸಿರುವ ಸಮಾವೇಶದಲ್ಲಿ ‘ಾಗವಹಿಸುವ ಜನಪ್ರತಿನಿಗಳು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು.
ಎಸ್.ಎ. ಮುದಕಣ್ಣವರ, ಕೊಕಟನೂರ (ಅಥಣಿ)