This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Business NewsEntertainment NewsInternational NewsLocal NewsNational NewsState News

ಕೊಹ್ಲಿಯ ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಸ್ಟಾರ್​ ನಟ; 1000 ಕೋಟಿ ಆಫರ್​!

ಕೊಹ್ಲಿಯ ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಸ್ಟಾರ್​ ನಟ; 1000 ಕೋಟಿ ಆಫರ್​!

ಮುಂಬಯಿ: ಈಗಾಗಲೇ ಭಾರತ ಕ್ರಿಕೆಟ್​ ತಂಡದ ಹಲವು ಸ್ಟಾರ್​ ಕ್ರಿಕೆಟಿಗರ ಬಯೋಪಿಕ್‌ ಚಿತ್ರ ಬಿಡುಗಡೆಗೊಂಡು ಯಶಸ್ಸು ಕಂಡಿದೆ. ಇದೀಗ ಕಿಂಗ್​ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಅವರ ಜೀವನಾಧಾರಿತ(virat kohli biopic) ಚಿತ್ರ ಸೆಟ್ಟೇರಲು ಭರ್ಜರಿ ಸಿದ್ದತೆ ನಡೆದಿದೆ ಎಂದು ವರದಿಯಾಗಿದೆ. ಚಿತ್ರದ ನಾಯಕನಾಗಿ ಟಾಲಿವುಡ್‌ನ ರಾಮ್‌ ಚರಣ್‌(Ram Charan) ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

1000 ಕೋಟಿ ಬೇಡಿಕೆ
ವರದಿಗಳ ಪ್ರಕಾರ, ಕೊಹ್ಲಿ ತಮ್ಮ ಬಯೋಪಿಕ್ ಹಕ್ಕನ್ನು ಮಾರಾಟ ಮಾಡಲು 800-1000 ಕೋಟಿ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹೇಂದ್ರ ಸಿಂಗ್​ ಧೋನಿ ಅವರು ತಮ್ಮ ಬಯೋಪಿಕ್ ಹಕ್ಕುಗಳನ್ನು 100 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಬಯೋಪಿಕ್​ ಬಗ್ಗೆ ವಿರಾಟ್​ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ರಾಮ್​ಚರರಣ್​ ಕೊಹ್ಲಿಯನ್ನು ಹೊಗಳ್ಳಿದ್ದು ಈ ಸುದ್ದಿ ಹರಿದಾಡಲು ಮೂಲ ಕಾರಣ. ಕೆಳವು ತಿಂಗಳ ಹಿಂದೆ ರಾಮ್​​ ಚರಣ್ ಅವರು ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ, ನಾನು ಕ್ರೀಡಾಪಟುಗಳ ಬಯೋಪಿಕ್​ನಲ್ಲಿ ನಟಿಸಿದರೆ ಅದು ವಿರಾಟ್​ ಕೊಹ್ಲಿಯ ಪಾತ್ರದಲ್ಲಿ ಎಂದು ಹೇಳಿದ್ದರು.

ಪಾಕ್​ ವಿರುದ್ಧದ ರೋಚಕ ಗೆಲುವು
ಈ ಚಿತ್ರದಲ್ಲಿ ಕಳೆದ ವರ್ಷ ಮೆಲ್ಬೋರ್ನ್​ನಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ಸೋಲುವ ಹಂತಕ್ಕೆ ತಲುಪಿದಾಗ ವಿರಾಟ್​ ಕೊಹ್ಲಿ ಅವರು ಏಕಾಂಗಿಯಾಗಿ ಬ್ಯಾಟಿಂಗ್​ ಹೋರಾಟ ನಡೆಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಈ ಗೆಲುವನ್ನು ಇಡೀ ದೇಶವೇ ಸಂಭ್ರಮಿಸಿತ್ತು. ಅಲ್ಲದೆ ನಾಯಕ ರೋಹಿತ್​ ಮೈದಾನಕ್ಕೆ ಓಡಿ ಬಂದು ವಿರಾಟ್​ ಅವರನ್ನು ಹೆಗಲ ಮೇಲೆ ಹೊತ್ತು ಮೆರೆದಾಡಿದ್ದರು. ಈ ದೃಶ್ಯವೂ ಚಿತ್ರದ ಪ್ರಮುಖ ಭಾಗವಾಗಿರಲಿದೆ ಎಂದು ವರದಿಯಲ್ಲಿ ತಿಳಿಸಿದೆ. ತಂದೆಯ ಸಾವಿನ ನೋವಲ್ಲೂ ದೆಹಲಿ ತಂಡದ ಪರ ಅದ್ಭುತ ಇನ್ನಿಂಗ್ಸ್​ ಕಟ್ಟಿ ವಿರಾಟ್​ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಈ ದೃಶ್ಯ ಕೂಡ ಇರಲಿದೆ ಎನ್ನಲಾಗಿದೆ.

ನಾಯಕನಾಗಿಯೂ ಸಾಧನೆ
2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಸರಣಿ ಗೆಲುವು ದಾಖಲಿಸಿತ್ತು. ಭಾರತೀಯ ತಂಡವು 70 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿತ್ತು. ಈ ಕೀರ್ತಿ ವಿರಾಟ್​ ಕೊಹ್ಲಿಗೆ ಸೇರಿದೆ. ಕೊಹ್ಲಿ ನಾಯಕನಾಗಿ 68 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 40 ಗೆದ್ದರೆ, 17 ರಲ್ಲಿ ಸೋಲು ಮತ್ತು 11 ಡ್ರಾ ಕಂಡಿದೆ. 2019ರ ಏಕದಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿ ವೇಳೆ ಭಾರತ ತಂಡ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಂಡು ನಿರಾಸೆ ಮೂಡಿಸಿತ್ತು.

Nimma Suddi
";