ಬಾಗಲಕೋಟೆ
ಗ್ರಾಮಾಂತರ ಪ್ರದೇಶವೊಂದರ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆ ಹೊಂದಿರುವ ಒಲವಿನ ಪಯಣ ಚಲನಚಿತ್ರ ಫೆ.21 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಕಿಶನ್ ಬಲ್ನಾಡ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳಗುಂದ ಕ್ರಿಯೆಷನ್ ನಿರ್ಮಾಣ ಸಂಸ್ಥೆಯಿAದ ಚಿತ್ರ ನಿರ್ಮಾಣಗೊಂಡಿದೆ. ಚಿತ್ರ ಹೊಸಬರಿಂದ ಕೂಡಿದ್ದು ಇದು ತಮ್ಮ ಮೊದಲ ನಿರ್ದೇಶನ ಚಿತ್ರವಾಗಿದೆ. ಮಡಿಕೇರಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಿತ್ರಕ್ಕೆ ಕಲಾವಿದರು ಹೊಸಬರು, ಆದರೆ ನಟನೆಯಲ್ಲಿ ಅನುಭವವುಳ್ಳವರಾಗಿದ್ದು ನಟನಾಗಿ ಕಿರುತೆರೆ ಕಲಾವಿದ ಸುನೀಲ್, ನಾಯಕಿಯಾಗಿ ಕುಶಿ, ಪ್ರಿಯಾ ಹೆಗಡೆ, ಪೋಷಕ ಕಲಾವಿದರಾಗಿ ಪದ್ಮಜಾರಾವ್, ನಾಗೇಶ ಮಯ್ಯ ಇತರರು ಅಭಿನಯಿಸಿದ್ದಾರೆ. ಅಂದಾಜು 30 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಿರ್ಮಾಪಕ ನಾಗರಾಜ ಮುಳಗುಂದ, ನಾಯಕಿ ಕುಶಿ, ಸಂಗೀತ ನಿರ್ದೇಶಕ ಸಾಯಿ ಸರ್ವೇಶ್ ಇತರರಿದ್ದರು.
ಸಾಂಗ್ ರಿಲೀಸ್ ಇಂದು
ಒಲವಿನ ಪಯಣ ಚಿತ್ರದ 2ನೇ ಹಾಡು ಫೆ.8 ರಂದು ಗುಳೇದಗುಡ್ಡದಲ್ಲಿ ಬಿಡುಗಡೆಯಾಗಲಿದೆ. ರಾಜೇಶ್ ಕೃಷ್ಣನ್ ಹಾಡಿದ ಹಾಡನ್ನು ನಗರದ ಅಂಕಿತಾ ಚಿತ್ರಮಂದಿರದಲ್ಲಿ ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗಾಯಕ ಗುರುರಾಜ ಹೊಸಕೋಟೆ ಬಿಡುಗಡೆಗೊಳಿಸಲಿದ್ದಾರೆ ಎಂದು ಚಿತ್ರ ನಿರ್ಮಾಪಕ ನಾಗರಾಜ ಮುಳಗುಂದ ತಿಳಿಸಿದರು.