ಬಾಗಲಕೋಟೆ
ರಸ್ತೆಯಲ್ಲಿ ಕಂಡ ಕಲ್ಲು ಆಮೆಯೊಂದನ್ನು ಪ್ರವಾಸಿ ಮಿತ್ರರೊಬ್ಬರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಇಳಕಲ್ ತಾಲೂಕಿನ ಗುಡೂರ (ಎಸ್ಸಿ) ಗ್ರಾಮದ ಪ್ರವಾಸಿಮಿತ್ರ ಶರಣಪ್ಪ ತುಂಬರಮಟ್ಟಿ ಐಹೊಳೆಯಲ್ಲಿ ಕರ್ತವ್ಯ ಮುಗಿಸಿಕೊಂಡು ಸ್ವಗ್ರಾಮ ಗುಡೂರಗೆ ತೆರಳುವಾದ ಮಾರ್ಗ ಮಧ್ಯೆ ರಸ್ತೆಯಲ್ಲಿ ಕಲ್ಲು ಆಮೆಯೊಂದು ಕಂಡಿದೆ.
ಕೂಡಲೆ ಅದನ್ನು ರಕ್ಷಿಸಿದ ಶರಣಪ್ಪ ಅವರು ಗುಡೂರ ಗ್ರಾಮದಲ್ಲಿ ಅರಣ್ಯ ಇಲಾಖೆಯ ಕಚೇರಿಗೆ ಒಪ್ಪಿಸಿದ್ದಾರೆ. ಇಲಾಖೆ ಅಧಿಕಾರಿ ಮಹೇಶ ಕಲ್ಲೂರ ಕಲ್ಲು ಆಮೆಯನ್ನು ಇಲಾಖೆ ವಶಕ್ಕೆ ಪಡೆದಿದ್ದಾರೆ.