ಬೀದರ್: ದೇಶದಲ್ಲಿರುವ ಬಲಿಷ್ಠ ಯುವಶಕ್ತಿಯ ಪಡೆ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ನಗರದಲ್ಲಿರುವ ಪ್ರತಿಷ್ಠಿತ ಶಾಲೆಯಾದ ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಜ್ಞಾನಸುಧಾ ವಿದ್ಯಾಲಯದಲ್ಲಿ ಓಪನ್ ಜಿಮ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಪ್ರತಿನಿತ್ಯ ಜಿಮ್ ಮಾಡುವುದು ರೂಢಿಸಿಕೊಳ್ಳಬೇಕಿದ್ದು, ಸಮಾಜದಲ್ಲಿಯ ಜನ ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ ಎಂದರು.
ಆದರೆ ನಮ್ಮ ಶುದ್ಧ ನಡೆ, ನುಡಿಯಿಂದ ಮಾನಸಿಕವಾಗಿ ಗಟ್ಟಿಯಾಗಿರಬೇಕೆಂದು ಎಲ್ಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜ್ಞಾನಸುಧಾ ವಿದ್ಯಾಲದಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಸ್ಥೆ ಪೂರ್ಣಿಮಾ ಜಾರ್ಜ್ ಮಾತನಾಡಿ, 20 ಲಕ್ಷ ವೆಚ್ಚದ ಓಪನ್ ಜಿಮ್ ನೀಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಭಗವಂತ ಖೂಬಾ ಅವರು ಮಾಡುತ್ತಿರುವ ಕೆಲಸ ಆದರ್ಶವಾಗಿದೆ ಎಂದು ವಿವರಿಸಿದರು.