ಬಾಗಲಕೋಟೆ
*ಬಾಗಲಕೋಟೆಯಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀ ಹೇಳಿಕೆ…*
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ವಿಚಾರ. ಕಳೆದ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೋರಾಟ ಅಂತಿಮ ಹಂತಕ್ಕೆ ತಲುಪಿತ್ತು.. ಹಿಂದಿನ ಸರ್ಕಾರ 2ಡಿ ಎಂದು ಮೀಸಲಾತಿ ನೀಡಿತು, ನಾವು ಕೇಳಿದ್ದು 2ಎ, ಇನ್ನೂ ಅದು ಅನುಷ್ಠಾನಗೊಂಡಿಲ್ಲ ಎಂದು ಹೇಳಿದರು.
ಇದೀಗ ಸರ್ಕಾರ ಬದಲಾಗಿದೆ, ಈಗಿನ ಸಿಎಂ ಅವರನ್ನ ಸಮುದಾಯದ ಶಾಸಕರೊಂದಿಗೆ ಭೇಟಿ ಆಗಿದ್ದೇವೆ…ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದೇವೆ, ಬಜೆಟ್ ಅಧಿವೇಶನ ಮುಗಿದ ಬಳಿಕ ಮೀಸಲಾತಿಗೆ ಸ್ಪಷ್ಟತೆ ನೀಡುವ ಬಗ್ಗೆ ಚರ್ಚಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.ಈಗ ಮತ್ತೊಮ್ಮೆ ಸಿಎಂ ಅವರಲ್ಲಿ ಮನವಿ ಮಾಡುವೆ ಎಂದರು.
ಶ್ರಾವಣ ಮಾಸದಲ್ಲಿ ಇಷ್ಠಲಿಂಗ ಪೂಜೆ ಜೊತೆ ಚಳವಳಿ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ಯಾವ ರೀತಿ ಮಾಡಬೇಕು ಎಂದು ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆಸಲಾಗುತ್ತಿದೆ. ರಾಜ್ಯಮಟ್ಟದ ಕಾರ್ಯಕಾರಣಿ ಸಭೆ ಕರೆದು ನಿರ್ಧಾರ ಕೈಗೊಳ್ಳುವ ಮೂಲಕ ಚಳುವಳಿ ಶುರು ಮಾಡುತ್ತೇವೆ. ಆದಷ್ಟು ಬೇಗ ರಾಜ್ಯ ಕಾರ್ಯಕಾರಣಿ ಸಭೆ ಕರೆದು ಚಳವಳಿ ದಿನಾಂಕ ನಿಗದಿ ಪಡೆಸುತ್ತೇವೆ ಎಂದು ಹೇಳಿದರು.
ಕಳೆದ ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ಕೋಟ್೯ ನಲ್ಲಿದೆ. ಕೋರ್ಟ್ ಅಡ ತಡೆ ನಿವಾರಿಸಿ ಸರ್ಕಾರ ನ್ಯಾಯ ಒದಗಿಸಬೇಕಿದೆ.