ಬಾಗಲಕೋಟೆ
ಶೈಕ್ಷಣಿಕ ಸಮಯದಲ್ಲಿ ವಿದ್ಯಾರ್ಥಿಗಳು ಶಿಸ್ತು ಹಾಗೂ ಗಂಭೀರತೆಯಿAದ ಅಧ್ಯಯನ ಮಾಡಿ ತಮ್ಮ ಗುರಿ ಮುಟ್ಟುವ ಕಡೆ ಹೆಜ್ಜೆ ಹಾಕಬೇಕು. ಸಾಧನೆಗೆ ಸತತ ಪರಿಶ್ರಮದ ಅಧ್ಯಯನ ಮುಖ್ಯ ಎಂದು ಎಸ್ಪಿ ಅಮರನಾಥ ರೆಡ್ಡಿ ಹೇಳಿದರು.
ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ 2024-25ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ರೆಡ್‌ಕ್ರಾಸ್, ಎನ್‌ಸಿಸಿ, ಎನ್ನೆಸ್ಸೆಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇತರೆ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನದಲ್ಲಿ ಸತತ ಪರಿಶ್ರಮದ ಅಧ್ಯಯನ ಮುಖ್ಯವಾಗಿದ್ದು, ಶೈಕ್ಷಣಿಕ ಸಮಯವನ್ನು ಬಹಳ ಶಿಸ್ತು ಸಂಯಮ ಮತ್ತು ಗಂಭೀರವಾಗಿ ಪರಿಗಣಿಸಬೇಕಿದೆ. 25 ವರ್ಷದವರೆಗೆ ನೀವು ಕಷ್ಟಪಟ್ಟು ಓದಿದರೆ, ಮುಂದೆ 35 ರಿಂದ 40 ವರ್ಷ ಉತ್ತಮ ಬದುಕು ನಿಮ್ಮದಾಗುತ್ತದೆ ಎಂದರು.
ಸಿಬಿಸಿ ಸದಸ್ಯ ಟಿ.ಎಲ್.ಗಂಗೂರ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ದೀಪದಾನದ ಮೂಲಕ ಬೀಳ್ಕೊಡಲಾಯಿತು. ಸುಜಾತಾ ನಾವಿ, ದ್ಯಾಮಣ್ಣ ಕಂಬಾರ ಅನಿಸಿಕೆ ಹಂಚಿಕೊAಡರು. ವಿವಿ ಮಟ್ಟದಲ್ಲಿ ಬ್ಲೂö್ಯ ಆಗಿ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಿಬಿಸಿ ಸದಸ್ಯ ಎಚ್.ಎಸ್.ಗುಳೇದ, ಬಿ.ಎಲ್.ಸೋಮನಾಳ, ನಗರಸಭೆ ಸದಸ್ಯ ಹಾಜಿಸಾಬ್ ದಂಡಿನ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಜಿ.ಜಿ.ಹಿರೇಮಠ, ಪ್ರೊ.ಪರಸÀಪ್ಪ ತಳವಾರ, ನೀಲಪ್ಪ ಕುರಿ, ಸಾವಿತ್ರಿ ಮುತ್ತಗಿ, ಡಾ.ಸುಮಂಗಲಾ ಮೇಟಿ, ಡಾ.ಚಂದ್ರಶೇಖರ ಕಾಳನ್ನವರ ಇತರರಿದ್ದರು.