ಬಾಗಲಕೋಟೆ
ಮತದಾನಕ್ಕಾಗಿ ಸೂಕ್ತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಉಪವಿಭಾಗಾಕಾರಿ ಸಂತೋಷ ಜಗಲಾಸರ್ ಮತಗಟ್ಟೆ ವೀಕ್ಷಿಸಿದರು.
ಅಮೀನಗಡ ಪಟ್ಟಣದ ಸರಕಾರಿ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.೨ರಲ್ಲಿನ ಮತಗಟ್ಟೆ ವೀಕ್ಷಿಸಿದ ಅವರು, ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಬ್ಬಂದಿ ಹಾಗೂ ಮತದಾರರಿಗೆ ಸೂಕ್ತ ಸೌಲಭ್ಯವಿರಬೇಕು. ಕುಡಿವ ನೀರು, ಶೌಚಾಲಯ, ರ‍್ಯಾಂಪ್, ವಿಶೇಷಚೇತನರಿಗೆ ವ್ಯವಸ್ಥೆ, ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಶಾಮಿಯಾನ ಸೇರಿದಂತೆ ಅವಶ್ಯಕ ಸೌಲಭ್ಯವಿರಬೇಕು ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಗ್ರಾಮ ಆಡಳಿತಾಕಾರಿ ಸುರೇಶ ಹುದ್ದಾರ, ಸಿಆರ್‌ಪಿ ಅಶೋಕ ಎಮ್ಮಿ, ಜಿಪಂ ಎಂಜಿನಿಯರಿAಗ್ ವಿಭಾಗದ ಜೆಇ ವಿಶ್ವನಾಥ, ಗುತ್ತಿಗೆದಾರ ಶಿವಯ್ಯ ಗಡದಾರ, ಬಿಎಲ್‌ಒ ಎಸ್.ವೈ.ಮಾಗುಂಡಪ್ಪನವರ, ಮುಖ್ಯಶಿಕ್ಷಕ ಹರಗಬಲ್ ಇತರರು ಇದ್ದರು.