This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ನಾಡು, ನುಡಿ ಬದುಕಿನ ಆಶ್ರಯ ನೀಡುವ ಸಂಗತಿಗಳು

ನಾಡು, ನುಡಿ ಬದುಕಿನ ಆಶ್ರಯ ನೀಡುವ ಸಂಗತಿಗಳು ಪ್ರೊ.ಘಂಟಿ

ನಿಮ್ಮ ಸುದ್ದಿ ಬಾಗಲಕೋಟೆ

ನಾಡು-ನುಡಿ ಎಂಬುದು ಕೇವಲ ಭಾವಕೋಶದ ಸಂಗತಿಗಳಲ್ಲ. ಅವು ಘನತೆಯ ಬದುಕಿಗೆ ಆಶ್ರಯ ನೀಡುವ ಬಹುಮುಖ್ಯ ಸಂಗತಿಗಳಾಗಿವೆ ಎಂದು ಸಮ್ಮೇಳನಾಧ್ಯಕ್ಷೆ ಪ್ರೊ.ಮಲ್ಲಿಕಾ ಘಂಟಿ ತಿಳಿಸಿದರು.

ತಾಲೂಕಿನ ಶಿರೂರ ಗ್ರಾಮದ ವೀರಶೈವ ಗ್ರಾಮೀಣ ವಿದ್ಯಾವರ್ಧಕ ಸಂಘದ ಆವರಣದಲ್ಲಿ ರವಿವಾರ ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು ಸಾಹಿತ್ಯ ಸಮ್ಮೇಳನಗಳು ಪ್ರಾರಂಭದಲ್ಲಿ ಅಕ್ಷರ ಲೋಕದ ದಿಗ್ಗಜರು ಕೂಡಿ ಸಾಹಿತ್ಯ, ಸಮಾಜ, ರಾಜಕೀಯ, ಬದುಕು ಎಂಬುದ ಕುರಿತು ವಿದ್ವತ್‍ಪರಿಭಾಷೆಯಲ್ಲಿ ಚರ್ಚಿಸುವ ಗಂಭೀರ ವೇದಿಕೆಗಳಾಗಿದ್ದವು. ವಿದ್ವತ್ ವಲಯ ಮಾತ್ರ ಅಲ್ಲಿರುತ್ತಿದ್ದು, ಕಾಲ ಕ್ರಮೇಣ ಸಾಹಿತ್ಯ ಪರಿಷತ್ ವಿದ್ವತ್ವ ಮಂಡಳಿಯಿಂದ ಬಿಡುಗಡೆಗೊಂಡು ಜನಾಶ್ರಯದ ಕಡೆ ವಾಲಿತೋ ಅಲ್ಲಿಂದ ಸಾಹಿತ್ಯ ಸಮ್ಮೇಳನಗಳ ಸ್ವರೂಪ ಬದಲಾಯಿತು ಎಂದರು.

ಆರು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್ತು ನಾಲ್ಕು ಗೋಡೆಯೊಳಗೆ ಭಾಷೆ, ಸಾಹಿತ್ಯ, ಕಲೆ, ಸಂಗೀತವಾಗಿಲ್ಲ. ಸರ್ವರಿಗೂ ಹಿತವುಂಟು ಮಾಡುವ ಬೌದ್ದಿಕ, ವೈಚಾರಿಕ ಮಂಟಪಗಳ ಅಗತ್ಯವಿದೆ. ಕಪ್ಪೆ ಅರೆಬಟ್ಟನ ಶಾಸನ, ಪಂಪ, ರನ್ನಾದಿಗಳ ಹಾಗೆ ಶರಣ ಪರಂಪರೆ, ಸಂತ ಪರಂಪರೆ, ತತ್ವಪದಕಾರರನ್ನು ನೆನಪಿಸಿಕೊಳ್ಳುತ್ತೇವೆ. ನಾಡು, ನುಡಿ ಜನರ ಬದುಕಿನ ಘನತೆಯನ್ನು ಎತ್ತಿ ಹಿಡಿಯಲು ಅವರ ಮಾತುಗಳನ್ನು ಎತ್ತಿ ಹಿಡಿಯುತ್ತೇವೆ ಎಂದರು.

ಸಾಂಸ್ಕøತಿಕ, ಸಾಹಿತ್ಯ ಚರಿತ್ರೆಯಲ್ಲಿ ಜಿಲ್ಲೆಗೆ ವಿಶಿಷ್ಟವಾದ ಸ್ಥಾನವಿದೆ. ಕಲೆ, ಸಾಹಿತ್ಯ, ಧರ್ಮ ಮತ್ತು ವಾಸ್ತುಶಿಲ್ಪಗಳಿಗೆ ಭವ್ಯ ಪರಂಪರೆ ಇದೆ. ಚಾಲುಕ್ಯರ ಆಡಳಿತವನ್ನು ಸಾಕ್ಷಿಕರಿಸುವ ಬಾದಾಮಿ ಮೇಣಬಸದಿಗಳು, ಐಹೊಳೆ, ಪಟ್ಟದಕಲ್ಲಿನ ದೇವಾಲಯಗಳು ಜಗತ್ತನ್ನು ತನ್ನಡೆಗೆ ತಿರುಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ನೆಲದ ಸಾಮರಸ್ಯದ ಸಾಂಸ್ಕøತಿಕ ಪರಂಪರೆಯನ್ನು, ಜಾತಿವರ್ಗಗಳಿಲ್ಲದ ಸಮಸಮಾಜದ ಕನಸನ್ನು ಕಂಡ ಕ್ರಾಂತಿಕಾರಿ ಬಸವಣ್ಣನ ಕೂಡಲಸಂಗಮ ಮತಧರ್ಮಗಳಾಚೆ ಘನತೆಯ ಬದುಕಿದೆ ಎಂಬುದು ನೆನಪಿಸಿಕೊಟ್ಟಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಮ್ಮಿಕೊಂಡ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವದ ಸ್ಥಾನವನ್ನು ನೀಡುವ ಮೂಲಕ ಇಡೀ ಜಿಲ್ಲೆಯ ಮಹಿಳೆಯರನ್ನು ಗೌರವಿಸುವ ಕಾರ್ಯ ಮಾಡಿದ್ದೀರಿ. ಅದಕ್ಕೆ ನಿಮ್ಮೆಲ್ಲರಿಗೂ ಅಭಿನಂದನೆ ತಿಳಿಸಿದ ಅವರು ತವರು ಜಿಲ್ಲೆಯಲ್ಲಿ ಅಕ್ಷರದ ಉಡಿಯಕ್ಕಿಯನ್ನು ಹಾಕಿಸಿಕೊಳ್ಳುತ್ತಿರುವುದು ನನ್ನ ಬದುಕಿನ ಅವೀಸ್ಮರಣೀಯ ಕ್ಷಣವಾಗಿದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿ.ಪಂ ಬಾಯಕ್ಕ ಮೇಟಿ, ಉಪಾದ್ಯಕ್ಷ ಮುತ್ತಪ್ಪ ಕೋಮಾರ, ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಸಾಹಿತಿ ರಾಜಶೇಖರ ಮಠಮತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";