This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsPolitics NewsState News

ಪೂರ್ಣಗೊಳ್ಳದ ಉದ್ಯಾನವನ:ಇದೀಗ ಬಯಲು ಶೌಚತಾಣ

ಪೂರ್ಣಗೊಳ್ಳದ ಉದ್ಯಾನವನ:ಇದೀಗ ಬಯಲು ಶೌಚತಾಣ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕರ ಉದ್ಯಾನವನದ ವಿಳಂಬ ಕಾಮಗಾರಿಯಿಂದಾಗಿ ಬಯಲು ಶೌಚಾಲಯ ತಾಣವಾಗಿದೆ.

ಸಾರ್ವಜನಿಕರ ಬಹು ದಿನಗಳ ಕನಸಿನಂತೆ, ಜನಪ್ರತಿನಿಧಿಗಳ ಒತ್ತಾಸೆಯಿಂದ ೨೦೨೦-೨೧ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ನಿಧಿಯ ಅನುದಾನದಲ್ಲಿ ಪಟ್ಟಣದ ವಾರ್ಡ್ ೧೫ರ ರಿಸನಂ. ೩೦೩/೩ನಲ್ಲಿ ೫ ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಗಾಗಿ ಕಳೆದ ಒಂದೂವರೆ ವರ್ಷದ ಹಿಂದೆ ಗುತ್ತಿಗೆದಾರರಿಗೆ ನಿರ್ಮಾಣ ಮಾಡಲು ಆದೇಶ ಪತ್ರ ನೀಡಲಾಗಿದೆ. ಆದರೆ ಒಂದೂವರೆ ವರ್ಷ ಗತಿಸುತ್ತಿದ್ದರೂ ಈವರೆಗೆ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹೀಗೆ ಹಲವರಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಕಿಂಗ್ ಸೇರಿದಂತೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ ಇದೀಗ ಬಯಲು ಶೌಚಾಲಯ ತಾಣವಾಗಿ ಪರಿಣಿಮಿಸುತ್ತಿದೆ.

ಕಾಮಗಾರಿ ಆದೇಶ ನೀಡಿದ ೯೦ ದಿನದೊಳಗೆ ಪೂರ್ಣಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಗುತ್ತಿಗೆ ರದ್ದುಪಡಿಸಬಹುದು, ಜತೆಗೆ ಆ ಕೆಲಸವನ್ನು ಬೇರೆಯವರಿಂದ ಪೂರ್ಣಗೊಳಿಸಿ ಅದಕ್ಕೆ ಖರ್ಚಾಗುವ ವೆಚ್ಚವನ್ನು ಗುತ್ತಿಗೆದಾರರಿಂದ ವಸೂಲು ಮಾಡಲಾಗುವುದು. ಕಾಮಗಾರಿ ಪೂರ್ಣಗೊಂಡು ವರದಿ ನೀಡಿದ ದಿನದಿಂದ ಉಚಿತವಾಗಿ ೨ ವರ್ಷದವರೆಗೆ ನಿರ್ವಹಣಾ ಅವಧಿ ಇರುತ್ತದೆ ಎಂದು ಷರತ್ತುಗಳು ಇಲ್ಲಿ ಗಾಳಿಗೆ ತೂರಿದಂತೆ ಕಾಣುತ್ತಿದೆ. ಒಂದುವರೆ ವರ್ಷ ಉರುಳುತ್ತಿದ್ದರೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವ ಆಡಳಿತದ ನಡೆಯನ್ನು ಸಂಶಯದಿಂದ ನೋಡುವಂತಾಗಿದೆ ಎಂಬ ದೂರು ಕೇಳಿ ಬಂದಿದೆ.

ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಇಂತಹ ಕೆಲಸಗಳು ವರ್ಷಗಟ್ಟಲೆ ವಿಳಂಬವಾದರೆ ದೊಡ್ಡ ದೊಡ್ಡ ಕೆಲಸಗಳನ್ನು ಇಂತಹ ಗುತ್ತಿಗೆದಾರರು ಹೇಗೆ ನಿರ್ವಹಿಸಿಬಹುದು ಎಂಬ ಮಾತು ಕೇಳಿದೆ. ಉದ್ಯಾನವನದ ಸಮರ್ಪಕ ನಿರ್ವಹಣೆ ಮಾಡದೆ ಇರುವುದರಿಂದ ಸರಕಾರದ ಇಂಥಹ ಅನೇಕ ಯೋಜನೆಗಳು ಮೂಲೆಗುಂಪಾಗುವ ಹಂತಕ್ಕೆ ತಲುಪುತ್ತವೆ. ಇವೆಲ್ಲವನ್ನು ಗಮನಿಸಿ ಪಟ್ಟಣ ಪಂಚಾಯಿತಿ ಆಡಳಿತ ಉದ್ಯಾನವನ ಶೀಘ್ರ ಪೂರ್ಣಗೊಳ್ಳಲು ಸರಿಯಾದ ವ್ಯವಸ್ಥೆ ಮಾಡಬೇಕೆಂದ ಆಗ್ರಹ ಕೇಳಿ ಬಂದಿದೆ.

 

";