ನವದೆಹಲಿ: ” ರಿಚರ್ಡ್ ಅಟ್ಟೆನ್‌ಬರೊ ಅವರ ಸಿನಿಮಾ ಬಿಡುಗಡೆ ಆಗುವವರೆಗೂ ಮಹಾತ್ಮ ಗಾಂಧಿ ಅವರು ಯಾರು ಎಂದು ವಿಶ್ವಕ್ಕೆ ತಿಳಿದಿರಲೇ ಇಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ” ಗಾಂಧೀಜಿ ಅವರನ್ನು ಕಾಂಗ್ರೆಸ್ ಹೆಚ್ಚು ಜನಪ್ರಿಯಗೊಳಿಸಲೇ ಇಲ್ಲ. ಸಿನಿಮಾ ಬಿಡುಗಡೆ ಆದಮೇಲೆಯೇ ಜಗತ್ತಿಗೆ ಗಾಂಧಿ ಅವರ ಬಗ್ಗೆ ತಿಳಿಯಿತು ಎಂದರು
75 ವರ್ಷಗಳಲ್ಲಿ ಗಾಂಧಿ ಅವರನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ನಮ್ಮದಾಗಿರಲಿಲ್ಲವೇ? ಸಿನಿಮಾ ಬಿಡುಗಡೆ ಆದ ಮೇಲೆಯೇ ಗಾಂಧಿ ಅವರ ಬಗ್ಗೆ ಕುತೂಹಲ ಹೆಚ್ಚಾಯಿತು,” ಎಂದು ಹೇಳಿದರು.
ಪ್ರಧಾನಿಯ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, 1982ರಲ್ಲಿ ಬ್ರಿಟನ್ ಮೂಲದ ನಿರ್ದೇಶಕ ರಿಚರ್ಡ್ ಅವರು ‘ಗಾಂಧಿ’ ಸಿನಿಮಾ ನಿರ್ದೇಶನ ಮಾಡಿದರು. ಬೆನ್ ಕಿಂಗ್‌ಸ್ಲೀ ಅವರು ಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರವು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಕಾಂಗ್ರೆಸ್ ಸೇರಿದಂತೆ ಅನೇಕರಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಹಲವು ನಾಯಕರು ಪ್ರಧಾನಿ ಮೋದಿಯ ಶಿಕ್ಷಣದ ಬಗ್ಗೆಯೂ ಪ್ರಶ್ನೆ ಮಾಡಿದರು.