ಕೊಪ್ಪಳ: ಕೊಪ್ಪಳ ಜಿಲ್ಲೆ ಆಸ್ಪತ್ರೆಗೆ ಬಂದರೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೇಯೇನೋ ಸಿಗುತ್ತಿದ್ದು, ಕುಡಿಯುವ ನೀರಿಗಾಗಿಯೇ ಪ್ರತಿನಿತ್ಯ ನೂರಾರು ರೂಪಾಯಿ ಖರ್ಚು ಮಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿದ್ದು, ಬಿಸಿಲುನಾಡು ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಕುಟುಂಬದವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ಜಿಲ್ಲೆಯಲ್ಲಿಯೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಇಲ್ಲಿ ಚಿಕಿತ್ಸೆ ಕೂಡಾ ತಕ್ಕಮಟ್ಟಿಗೆ ಸರಿಯಾಗಿ ಸಿಗೋದರಿಂದ ಹೆಚ್ಚಿನ ರೋಗಿಗಳು ಕೂಡಾ ಇಲ್ಲಿಗೆ ಬರ್ತಾರೆ. ಆದ್ರೆ ಇಲ್ಲಿಗೆ ಬರೋ ರೋಗಿಗಳು ಮತ್ತು ಕುಟುಂಬದವರು ಇದೀಗ ಕುಡಿಯೋ ನೀರಿಗಾಗಿ ಪರದಾಡುವಂತಾಗಿದೆ. ಕೊಪ್ಪಳದಲ್ಲಿ ಬಿಸಿಲಿನ ಆರ್ಭಟ ಜೋರಾಗಿದೆ. ಈ ಸಮಯದಲ್ಲಿ ತಿನ್ನಲು ಆಹಾರವಿಲ್ಲದೇ ಇದ್ದರು ಚಿಂತೆಯಿಲ್ಲ, ಕುಡಿಯಲು ನೀರು ಮಾತ್ರ ಬೇಕೇ ಬೇಕು. ಆದರೆ, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಸರಿಯಾಗಿ ಕುಡಿಯುವ ನೀರು ಸಿಗುತ್ತಾ ಇಲ್ಲ.
ಇಡೀ ಆಸ್ಪತ್ರೆ ಅಡ್ಡಾಡಿದರೂ ಕೂಡಾ ಬಹುತೇಕ ಕಡೆ ಇರೋ ನೀರಿನ ಘಟಕಗಳಲ್ಲಿ ನೀರು ಸಿಗುತ್ತಾ ಇಲ್ಲ. ಅನಿವಾರ್ಯವಾಗಿ ರೋಗಿಗಳ ಕುಟುಂಬದವರು, ಹೊರಗಡೆ ನೂರಾರು ರೂಪಾಯಿ ಖರ್ಚು ಮಾಡಿ, ವಾಟರ್ ಬಾಟಲ್ಗಳನ್ನು ತಂದು ರೋಗಿಗಳಿಗೆ ಕೊಡುತ್ತಿದ್ದಾರೆ.ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿಯೇ ಅನೇಕ ಕಡೆ ವಾಟರ್ ಫಿಲ್ಟರ್ಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರು ಪೂರೈಕೆಗಾಗಿಯೇ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಆದ್ರೆ ಒಮ್ಮೆ ಬಂದ್ರೆ ವಾರ ನೀರು ಬರೋದಿಲ್ಲ ಅಂತಿದ್ದಾರೆ ರೋಗಿಗಳ ಸಂಬಂಧಿಗಳು. ಬೇಸಿಗೆ ಬಿಸಿಲು ಹೆಚ್ಚಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.