This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಕೆಪಿಎಸ್‌ಸಿ ಪರೀಕ್ಷೆ ಬರೆಯುವವರ ಗಮನಕ್ಕೆ ಈ ಸೂಚನೆಗಳು: ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು..!

ಕೆಪಿಎಸ್‌ಸಿ ಪರೀಕ್ಷೆ ಬರೆಯುವವರ ಗಮನಕ್ಕೆ ಈ ಸೂಚನೆಗಳು: ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು..!

ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದ ನಡೆಸಲಾಗುತ್ತಿರುವ ಯಾವುದೇ ಸರ್ಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಪರೀಕ್ಷೆ ಕೇಂದ್ರಗಳಲ್ಲಿ ಯಾವುದಾದರೂ ಒಂದು ಲೋಪ ಕಂಡುಬರುತ್ತಲೇ ಇದೆ. ಅವುಗಳಲ್ಲಿ ಅಭ್ಯರ್ಥಿಗಳು ನಕಲು ಮಾಡುವುದು, ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿಯೇ ಲೋಪವಾಗುವುದು, ಡೀಲ್‌ ಕುದುರಿಸಿ ಅಭ್ಯರ್ಥಿಗಳು ಒಎಂಆರ್‌ ಶೀಟ್‌ ಖಾಲಿ ಬಿಡುವುದು, ಇತ್ತೀಚಿನ ದಿನಗಳಲಂತು ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಅತ್ಯಾಧುನಿಕ ಟೆಕ್ನಾಲಜಿಗಳನ್ನು ಬಳಸಿ ನಕಲು ಮಾಡಲು ಮುಂದಾಗುತ್ತಿರುವುದು ಹೀಗೆ ಹಲವಾರು ಆರೋಪಗಳು ಪದೇ ಪದೇ ವರದಿಗಳಾಗುತ್ತಿವೆ. ಪ್ರತಿ ಬಾರಿ ಮಾಧ್ಯಮಗಳ ಮುಂಚೆ ಈ ಪರೀಕ್ಷೆಗೆ ಕಟ್ಟೆಚರ ವಹಿಸಲಾಗುತ್ತದೆ, ಕ್ಯಾಮೆರಾ ಅಳವಡಿಸಲಾಗುತ್ತದೆ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು, ಸಚಿವರು, ಕೊನೆಗೆ ಮುಖ್ಯ ಮಂತ್ರಿಗಳು ಹೇಳಿದರು ಸಹ ಯಾವುದಾದರೊಂದು ಲೋಪ ಕಂಡುಬರುತ್ತಲೇ ಇದೆ.

ಆದರೆ ಕೆಪಿಎಸ್‌ಸಿ ನವೆಂಬರ್ 4, 5 ರಂದು ನಡೆಸುವ ಪರೀಕ್ಷೆಗಳಿಗೆ ಡಿಜಿಟಲ್ ಸೆಕ್ಯೂರಿಟಿ ಅನ್ನು ಅತ್ಯಾಧುನಿಕವಾಗಿ ನೀಡಲು ಮುಂದಾಗಿದ್ದು, ನಕಲು, ಇತರೆ ಲೋಪಗಳಿಗೆ ಅವಕಾಶವಾಗದಂತೆ ಪರೀಕ್ಷೆ ನಡೆಸಲಾಗುತ್ತದೆ ಎಂದಿದೆ. ಅದು ಎಷ್ಟರ ಮಟ್ಟಿಗೆ ಆರೋಪಕ್ಕೆ ಎಡೆಮಾಡದಂತೆ ಯಶಸ್ವಿ ಆಗುವುದೆಂದು ಕಾದು ನೋಡಬೇಕಿದೆ ಅಷ್ಟೆ.

ಇದೇ ಮೊದಲ ಬಾರಿಗೆ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳ ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಕೆ, ಅಭ್ಯರ್ಥಿಗಳ ನೈಜತೆ ಪರೀಕ್ಷಿಸಲು ಬಯೋಮೆಟ್ರಿಕ್ ಫೇಸ್ ರಿಕಗ್ನಿಷನ್, ಬ್ಲೂಟೂತ್ ನಿಷೇಧ, ಜಾಮರ್ ಅಳವಡಿಕೆ, ಕಂಟ್ರೋಲ್ ರೂಮ್ ಸ್ಥಾಪನೆ ಸೇರಿದಂತೆ, ಹಲವು ಬಿಗಿ ಬಂದೋಬಸ್ತ್‌ ಕ್ರಮ ಕೈಗೊಂಡಿದೆ.

ಕೆಪಿಎಸ್‌ಸಿ ಯು ನವೆಂಬರ್ 4, 5 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಪತ್ರ ಸಹಾಯಕರು, ಸಹಕಾರ ಸಂಘಗಳ ನಿರೀಕ್ಷಕರು ಸೇರಿದಂತೆ ಒಟ್ಟು 400 ಹೆಚ್ಚು ಗ್ರೂಪ್‌ ಸಿ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದೆ. ರಾಜ್ಯದ ಒಟ್ಟು 23 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಿದೆ. ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ತಮ್ಮ ಅಡ್ಮಿಟ್‌ ಕಾರ್ಡ್‌, ಅಧಿಕೃತ ಗುರುತಿನ ಚೀಟಿ ತೆಗೆದುಕೊಂಡು ಹೋಗುವ ಜತೆಗೆ, ಈ ಕೆಳಗಿನ ಕೆಲವು ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಂಡು, ಅಂತೆಯೇ ಪಾಲನೆ ಮಾಡಬೇಕಿದೆ. ಅವುಗಳ ಲಿಸ್ಟ್‌ ಇಲ್ಲಿದೆ ನೋಡಿ.

ಪರೀಕ್ಷೆ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳಾದ ಮೊಬೈಲ್‌, ಬ್ಲೂಟೂತ್, ಕ್ಯಾಲ್ಕುಲೇಟರ್, ವೈಟ್ ಫ್ಲೂಯಿಡ್, ವೈರ್‌ಲೆಸ್‌ ಸೆಟ್ಸ್‌, ಪೇಪರ್, ಬುಕ್‌ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್‌ ಮತ್ತು ಯಾವುದೇ ಆಭರಣಗಳನ್ನು (ಮಂಗಳ ಸೂತ್ರ ಮತ್ತು ಕಾಲುಂಗುರವನ್ನು ಹೊರತುಪಡಿಸಿ), ಪುಲ್‌ವೋವರ್ಸ್‌, ಜಾಕೆಟ್‌ ಮತ್ತು ಸ್ವೆಟರ್ ಗಳನ್ನು ಧರಿಸಿ ಹಾಜರಾಗುವುದನ್ನು ನಿಷೇಧಿಸಿದೆ.

ಪರೀಕ್ಷಾರ್ಥಿಗಳು ಮೆಟಲ್ ವಾಟರ್ ಬಾಟೆಲ್‌ ಅಥವಾ ನಾನ್‌ ಟ್ರಾನ್ಸ್‌ಪರೆಂಟ್ ವಾಟರ್ ಬಾಟಲ್ ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಪರೀಕ್ಷಾರ್ಥಿಗಳು ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್‌ ಮಾಸ್ಕ್‌ ಅನ್ನು ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ.

ಪರೀಕ್ಷಾ ಕೇಂದ್ರದೊಳಗೆ ಹಾಜರಾಗುವ ಮುನ್ನ ಹ್ಯಾಂಡ್ ಹೆಲ್ಡ್‌ ಮೆಟಲ್ ಡಿಟೆಕ್ಟರ್ ಮುಖಾಂತರ ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳಿಂದ ಫ್ರಿಸ್ಕಿಂಗ್ ಕಾರ್ಯವನ್ನು ನೆರವೇರಿಸಲಾಗುತ್ತಿದೆ.

ಕರ್ನಾಟಕ ವಿವಿಯಲ್ಲಿ ವಿವಿಧ ಹುದ್ದೆಗಳ ನೇಮಕ: 7ನೇ ಕ್ಲಾಸ್ ಪಾಸಾದವರಿಗೂ ಉದ್ಯೋಗಾವಕಾಶ

ಮೊಬೈಲ್ ಮತ್ತು ಇತರೆ ತಾಂತ್ರಿಕ (ಎಲೆಕ್ಟ್ರಾನಿಕ್) ವಸ್ತುಗಳಿಂದ ಪರೀಕ್ಷಾ ಉಪಕೇಂದ್ರದಲ್ಲಿ ಸಂವಹನ ನಡೆಸಲು ಅವಕಾಶವಾಗದಂತೆ ಜಾಮರ್ಸ್‌ ಅಳವಡಿಸಲಾಗುತ್ತಿದೆ.

ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ನೈಜತೆಯನ್ನು ಪರಿಶೀಲಿಸಲು ಬಯೋಮೆಟ್ರಿಕ್ ಫೇಸ್ ರಿಕಾಗ್ನಿಷನ್ ಮಾಡಲಾಗುತ್ತದೆ.

ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಪರೀಕ್ಷೆ ಸಮಯದಲ್ಲಿ ನಿರಂತರ ನಿಗವನ್ನು ಒಂದು ರೂಮ್‌ನಲ್ಲಿ ವಹಿಸಲಾಗುತ್ತಿದೆ.

ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರಗಳ ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳ ಚಲನ-ವಲನ ಗಮನಿಸಲು, ದಾಖಲಿಸಲು ಉದ್ದೇಶಿಸಲಾಗಿದೆ.

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹಂತದ ವೀಕ್ಷಕರನ್ನು ನೇಮಿಸಲು ಕ್ರಮವಹಿಸಲಾಗಿದೆ.

ಈ ಮೇಲಿನ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಅಭ್ಯರ್ಥಿಗಳು ಪಾಲಿಸಬೇಕು. ಹಾಗೂ ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆಯಬೇಕಿದೆ.

";