ನಮ್ಮ ರಕ್ತದ ಒತ್ತಡ ಹೊರಗಿನ ತಾಪಮಾನ ಯಾವ ರೀತಿ ಇರುತ್ತದೆ ಅದರಂತೆ ಇರುತ್ತದೆ ಎಂದು ಹೇಳುತ್ತಾರೆ. ಬೇರೆ ಎಲ್ಲಾ ಸಮಯದಲ್ಲೂ ನಾರ್ಮಲ್ ಇರುವ ಬಿಪಿ ಚಳಿಗಾಲ ಬಂದರೆ ಮಾತ್ರ ಹೆಚ್ಚು ಕಡಿಮೆ ಆಗುತ್ತದೆ.
ಇದರ ಪ್ರಭಾವ ನೇರವಾಗಿ ಹೃದಯದ ಮೇಲೆ ಉಂಟಾಗುತ್ತದೆ. ಅದರಲ್ಲೂ ಬೆಳಗಿನ ಸಮಯದಲ್ಲಿ ಚಳಿ ಹೆಚ್ಚಾಗಿರುವಾಗ ಕೆಲವರ ದೇಹ ಚಳಿಗೆ ಅಡ್ಜಸ್ಟ್ ಆಗುವುದು ಕಷ್ಟ. ಈ ಸಂದರ್ಭದಲ್ಲಿ ಅವರಿಗೆ ಹೃದಯಘಾತ ಆಗುವ ಸಾಧ್ಯತೆ ಇರುತ್ತದೆ. ಹೀಗೆಂದು ಡಾಕ್ಟರ್ ಎಚ್ಚರಿಕೆ ಕೊಡುತ್ತಾರೆ. ಬೆಳಗ್ಗೆ ಚಳಿ ಇರುವಾಗ ಕಂಡುಬರುವ ಈ ಕೆಳಗಿನ ಸೂಚನೆಗಳು ಹಾರ್ಟ್ ಅಟ್ಯಾಕ್ ಆಗಬಹುದು ಎಂದು ಹೇಳುತ್ತವಂತೆ!
ಸುಸ್ತು ಮತ್ತು ಆಯಾಸ
ಇಡೀ ರಾತ್ರಿ ನೀವು ಮಲಗಿ ನೆಮ್ಮದಿಯ ನಿದ್ರೆ ಮಾಡಿದ್ದರೂ ನಿಮಗೆ ಸುಸ್ತು ಆಯಾಸ ಕಂಡುಬರುತ್ತಿದ್ದು ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕು ಎನಿಸಿದರೆ ಅದು ಹೃದಯಘಾತದ ಲಕ್ಷಣವಾಗಿದೆ.
ಈ ಸಂದರ್ಭದಲ್ಲಿ ನಮ್ಮ ಹೃದಯ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಕೆಲ ವರಿಗೆ ವಿಪರೀತ ಚಳಿಯಿಂದ ಈ ರೀತಿ ಆಗುತ್ತದೆ. ಇದರಿಂದ ಆಯಾಸ ಕಂಡು ಬರುತ್ತದೆ.
ಉಸಿರಾಟದ ತೊಂದರೆ
ಯಾವಾಗ ತಾಪಮಾನ ತುಂಬಾ ಕಡಿಮೆಯಾಗುತ್ತದೆ ಆ ಸಂದರ್ಭದಲ್ಲಿ ನಮ್ಮ ಹೃದಯ ರಕ್ತವನ್ನು ಎಲ್ಲಾ ಭಾಗಗಳಿಗೆ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.
ನಮ್ಮ ಶ್ವಾಸಕೋಶಗಳಿಗೂ ಕೂಡ ಸಮರ್ಪಕವಾದ ರಕ್ತ ಸಂಚಾರ ಇರುವುದಿಲ್ಲ. ಈ ಸಂದರ್ಭದಲ್ಲಿ ಉಸಿರಾಟದ ತೊಂದರೆ ಎದುರಾ ಗುತ್ತದೆ. ವಿಶೇಷವಾಗಿ ಬೆಳಗಿನ ಚಳಿಯಲ್ಲಿ ಈ ರೀತಿ ಆಗುತ್ತದೆ. ತುಂಬಾ ತಂಪಾದ ಗಾಳಿ ಆಗಿರುವುದರಿಂದ ಉಸಿರಾಡಲು ಕಷ್ಟವಾಗುತ್ತದೆ.
ತಲೆ ಸುತ್ತು ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ತಲೆಸುತ್ತು ಕಂಡುಬರುವುದು ಲೋ ಬಿಪಿ ಆಗಿದೆ ಎಂದು ಸೂಚಿಸುವ ಒಂದು ಲಕ್ಷಣವಾಗಿದೆ. ಈ ಸಂದರ್ಭ ದಲ್ಲಿ ಕೂಡ ಹೃದಯದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸ್ಥಿತಿಯಲ್ಲಿ ತುಂಬಾ ಜನರಿಗೆ ಎದೆ ನೋವು, ವಾಕರಿಕೆ ಮತ್ತು ಅತಿಯಾದ ಸುಸ್ತು, ಆಯಾಸ ಕಾಣಿಸುತ್ತದೆ.
ಮೈ ಬೆವರುವುದು
ಸಾಮಾನ್ಯವಾಗಿ ಬೆಳಗ್ಗೆ ಚಳಿ ಇರುವಾಗ ಮೈಯಲ್ಲಿ ಬೆವರು ಬರುವುದಿಲ್ಲ. ಆದರೆ ಹಾರ್ಟ್ ಅಟ್ಯಾಕ್ ಚಳಿಯಲ್ಲೂ ಮೈ ಬೆವರು ಕಾಣಿಸುವಂತೆ ಮಾಡುತ್ತದೆ.
ಏಕೆಂದರೆ ಈ ಸಂದರ್ಭದಲ್ಲಿ ನಮ್ಮ ದೇಹ ರಕ್ತವನ್ನು ಹೆಚ್ಚು ಪಂಪ್ ಮಾಡುವುದರಿಂದ ತಣ್ಣಗಾಗಲು ಪ್ರಯತ್ನಿಸುತ್ತಿರುತ್ತದೆ. ಅತಿಯಾದ ಮೈ ಬೆವರು ಹೀಗೆ ಮುಂದುವರೆಯುವುದರಿಂದ ನಮಗೆ ಹೃದಯಘಾತ ಆಗು ತ್ತದೆ. ಹಾಗಾಗಿ ಚಳಿಗಾಲದಲ್ಲಿ ಮೈ ಬೆವರು ಕಾಣಿಸುವುದನ್ನು ನಿರ್ಲಕ್ಷ್ಯ ಮಾಡಬಾರದು.
ಕಣ್ಣುಗಳ ಹಿಂಬದಿಯಲ್ಲಿ ನೋವು
ಹೃದಯದ ಸಮಸ್ಯೆ ನಮ್ಮ ಕಣ್ಣುಗಳ ಹಿಂಬದಿಯಲ್ಲಿ ನೋವು ಕಾಣಿಸುವಂತೆ ಮಾಡುತ್ತದೆ. ಯಾವಾಗ ಇದ್ದಕ್ಕಿದ್ದಂತೆ ಕಣ್ಣುಗಳ ಹಿಂದೆ ನೋವು ಕಾಣಿಸುತ್ತದೆ ಅದು ಹೃದಯಘಾತಕ್ಕೆ ಕಾರಣವಾಗಿರುತ್ತದೆ ಮತ್ತು ಅದನ್ನು ನಿರ್ಲಕ್ಷ್ಯ ಮಾಡಬಾರದು.
ಮಾನಸಿಕ ಆತಂಕ
ಬೆಳಗ್ಗೆ ಎದ್ದ ಕೂಡಲೇ ಯಾವುದಾದರೂ ಒಂದು ವಿಷಯ ತಲೆಗೆ ಬಂದು ಕೇವಲ ಅದೇ ವಿಷಯದ ಬಗ್ಗೆ ಆಲೋಚನೆ ಮಾಡುತ್ತಾ ಕೊರಗುತ್ತಾ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಆದರೆ ಕೆಲವರು ಪ್ರತಿದಿನ ಇದೇ ರೀತಿ ಮಾಡುತ್ತಾರೆ. ಈ ರೀತಿ ಮಾನಸಿಕವಾಗಿ ಪ್ರತಿದಿನ ಆತಂಕಕ್ಕೆ ಒಳಗಾಗುತ್ತಿದ್ದರೆ, ಅದು ಹೃದಯಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ.