ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ
ಆರಾಧ್ಯ ದೇವ ಶ್ರೀ ಮಾರುತೇಶ್ವರ ಹಾಗೂ
ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಹುಬ್ಬಿ ಮಳೆಯ ಕೊನೆಯ ಪಾದವಾದ (೦೯-೦೯-೨೦೨೩) ರಂದು ಶನಿವಾರ ಗ್ರಾಮದ ಮಾರುತೇಶ್ವರ ಹಾಗೂ ಬಸವೇಶ್ವರ
ಮತ್ತು ಎಲ್ಲಾ ದೇವರುಗಳಿಗೆ ನೀರು ಎರೆಯುವುದರ
ಮೂಲಕ ಚಾಲನೆ ನೀಡಲಾಯಿತು.
ಜಾತ್ರೆಗೆ ತಯ್ಯಾರಿ :-
ನೀರು ಎರೆಯುವುದರೊಂದಿಗೆ ಪ್ರಾರಂಭಗೊಂಡ
ನಂತರ ಪೂಜಾರಿಗಳು ಮಡಿ ಉಡಿಯಿಂದ ಬರಿಗಾಲಿನಿಂದ
ನಡೆದಾಡುತ್ತಾರೆ. ಹಾಗೂ ಮಾರುತೇಶ್ವರ
ಗೋಪಾಳದೊಂದಿಗೆ ತಿಮ್ಮಾಪೂರ, ಕಿರಸೂರ, ಹಡಗಲಿ
ಸೇರಿದಂತೆ ನಮ್ಮ ಗ್ರಾಮದವರು ವಿವಿಧ ರಾಜ್ಯ, ಜಿಲ್ಲೆ,
ತಾಲೂಕಿನಲ್ಲಿ ನೆಲೆಸಿರುವ ಸ್ಥಳಗಳಿಗೆ ತೆರಳಿ ಅಲ್ಲಿ ಶಂಖ
ನಾಧವನ್ನು ಮಾಡಿ ದವಸ, ಧಾನ್ಯ, ದೇಣಿಗೆ
ಸಂಗ್ರಹಿಸುತ್ತಾರೆ. ಹಾಗೂ ಗ್ರಾಮದ ದೈವ
ಮಂಡಳಿಯವರು ದೇವಾಲಯಗಳಿಗೆ ಸುಣ್ಣ ಬಣ್ಣ
ಶೃಂಗರಿಸುವುದು ಜಾತ್ರೆಗೆ ಬೇಕಾಗುವ
ಸಾಮಗ್ರಿಗಳನ್ನು ಖರೀದಿ ಮಾಡುತ್ತಾರೆ. ಬರುವ ದಿ. ೧೬-೦೯-೨೦೨೩ ರಂದು ಶನಿವಾರ ದಿಂದ ದಿ. ೧೭-೦೯-೨೦೨೩ ರವಿವಾರ ಹಾಗೂ
ದಿ. ೧೮-೦೯-೨೦೨೩ ಸೋಮವಾರದ ವರೆಗೆ ಜಾತ್ರೆ ಜರುಗಲಿದೆ.
*ನೀರು ಎರೆಯುವ ಕಾರ್ಯಕ್ರಮದಲ್ಲಿ*
ಯುವಕರಾದ ಸಂಜೀವ ಪೂಜಾರಿ ಕನಕಪ್ಪ ಪೂಜಾರಿ,
ಶಿವನಗೌಡ ಕೆಂಚನಗೌಡರ, ಮಹಾಂತೇಶ
ಕೆಂಚನಗೌಡರ, ಬಸವರಾಜ ತಳವಾರ, ರಮೇಶ್
ಹಡಪದ, ವೀರೇಶ ಹನಮಗೌಡ್ರ ಬಸವರಾಜ
ಬಡಿಗೇರ ಮುತ್ತು ಪಾಟೀಲ್, ಗೌರೀಶ್ ಚನ್ನಪ್ಪನವರು,
ವೆಂಕಟೇಶ ಮಾಲಿಪಾಟೀಲ್, ಅಂಬಿರೇಶ್ ಬೆಳ್ಳಿಹಾಳ, ಸಂಕೇತ ಹೆರಕಲ್ಲ, ಬಸವರಾಜ.ಹ.ಹೂನೂರ, ಅಕ್ಷಯಕುಮಾರ ಮುಮುದೇನೂರು, ಪ್ರವೀಣ್ ಹಾದಿಮನಿ, ಅನಿಲ ಜಗ್ಗಲ, ರವಿ
ಬೇರಗಿ, ಮುಂತಾದವರು ಪಾಲ್ಗೊಂಡಿದ್ದರು.