This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Feature ArticleMostbet

ವಿಶ್ವದ ಹಳೆಯ ರೈಲ್ವೆ ಸ್ಟೇಷನ್ ಗಳ ಪಟ್ಟಿಯಲ್ಲಿ ಭಾರತದ ಈ ರೈಲ್ವೆ ಸ್ಟೇಶನ ಕೂಡ ಇದೆ

ವಿಶ್ವದ ಹಳೆಯ ರೈಲ್ವೆ ಸ್ಟೇಷನ್ ಗಳ ಪಟ್ಟಿಯಲ್ಲಿ ಭಾರತದ ಈ ರೈಲ್ವೆ ಸ್ಟೇಶನ ಕೂಡ ಇದೆ

ಆಧುನಿಕ ರೈಲು ನಿಲ್ದಾಣಗಳ (Railway Stations) ಪರಿಕಲ್ಪನೆ ಹುಟ್ಟಿಕೊಂಡಿದ್ದು ಇಂಗ್ಲೆಂಡ್‌ನಲ್ಲಿ. ಸುಮಾರು 19ನೇ ಶತಮಾನದ ಆರಂಭವಾದ ಈ ನಿಲ್ದಾಣಗಳು ಮೂಲ ರೂಪ ಕಳೆದುಹೋದರೂ ಅನೇಕ ರೈಲು ನಿಲ್ದಾಣಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ವಿಶ್ವದ ಅತ್ಯಂತ ಹಳೆಯ 10 ರೈಲು ನಿಲ್ದಾಣಗಳನ್ನು (Oldest Train Stations) ಪಟ್ಟಿ ಮಾಡಲಾಗಿದ್ದು, ಭಾರತದ ಒಂದು ರೈಲು ನಿಲ್ದಾಣವು ಇದರಲ್ಲಿ ಸೇರಿದೆ.

1. ಲಿವರ್‌ಪೂಲ್ ರೋಡ್‌ ಸ್ಟೇಷನ್‌
ಸೆಪ್ಟೆಂಬರ್ 15, 1830ರಂದು ಆರಂಭಗೊಂಡ ಲಿವರ್‌ಪೂಲ್ ರಸ್ತೆ ನಿಲ್ದಾಣವು ವಿಶ್ವದ ಅತ್ಯಂತ ಹಳೆಯ ರೈಲುನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದೆ.

1975ರಿಂದ ಬಳಕೆಯಲ್ಲಿಲ್ಲದಿದ್ದರೂ, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನಿಲ್ದಾಣದ ಕಟ್ಟಡವು ಮ್ಯಾಂಚೆಸ್ಟರ್‌ನಲ್ಲಿರುವ ವಿಜ್ಞಾನ ಮತ್ತು ಉದ್ಯಮದ ವಸ್ತುಸಂಗ್ರಹಾಲಯದ ಭಾಗವಾಗಿದೆ. ಅಂದಹಾಗೆ ಇದು ವಿಶ್ವದ ಮೊದಲ ಉಗಿ-ಚಾಲಿತ ಇಂಟರ್‌ಅರ್ಬನ್ ರೈಲ್ವೆಯಾಗಿದೆ.

2. ಬ್ರಾಡ್‌ ಗ್ರೀನ್‌ ರೈಲ್ವೆ ಸ್ಟೇಷನ್‌
1830ರಲ್ಲಿ ಪ್ರಾರಂಭವಾಗಿ ಇನ್ನೂ ಕಾರ್ಯನಿರ್ವಹಿಸುತ್ತಿದ್ದರೂ, 1970ರ ದಶಕದಲ್ಲಿ ವ್ಯಾಪಕವಾದ ಮಾರ್ಪಾಡುಗಳಿಂದಾಗಿ ಬ್ರಾಡ್ ಗ್ರೀನ್ ರೈಲು ನಿಲ್ದಾಣವು ಹಳೆಯ ನಿಲ್ದಾಣಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ರಸ್ತುತ ಈ ನಿಲ್ದಾಣದ ಯಾವುದೇ ಕಟ್ಟಡಗಳು ಮೂಲ ರೂಪದಲ್ಲಿಲ್ಲ.
3. ಹೆಕ್ಸ್‌ಹ್ಯಾಮ್ ರೈಲು ನಿಲ್ದಾಣ
ಹೆಕ್ಸ್‌ಹ್ಯಾಮ್ ರೈಲು ನಿಲ್ದಾಣವು ವಿಶ್ವದ ಅತ್ಯಂತ ಹಳೆಯ ನಿರಂತರವಾಗಿ ಬಳಸುವ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ನ್ಯೂಕ್ಯಾಸಲ್ ಅಪಾನ್ ಟೈನ್‌ನಿಂದ ಕಾರ್ಲಿಸ್ಲೆವರೆಗಿನ ಟೈನ್ ವ್ಯಾಲಿ ಲೈನ್‌ನಲ್ಲಿರುವ ಈ ನಿಲ್ದಾಣವು 1835ರಿಂದ ಕಾರ್ಯನಿರ್ವಹಿಸುತ್ತಿದೆ. ಇದರ ಸುತ್ತ ಇತ್ತೀಚಿನ ಪುನರಾಭಿವೃದ್ಧಿಯು ಅದರ ಒಟ್ಟಾರೆ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಗುರಿ ಹೊಂದಿದೆ.

4. ಡೆಪ್ಟ್‌ಫೋರ್ಡ್ ರೈಲು ನಿಲ್ದಾಣ
ಲಂಡನ್ ಮತ್ತು ಗ್ರೀನ್‌ವಿಚ್ ರೈಲ್ವೆಯ ಭಾಗವಾಗಿ 1836ರ ಆರಂಭದಲ್ಲಿ ಈ ನಿಲ್ದಾಣ ತೆರೆಯಲಾಯಿತು. ಡೆಪ್ಟ್‌ಫೋರ್ಡ್ ರೈಲು ನಿಲ್ದಾಣವು ಲಂಡನ್‌ನ ಅತ್ಯಂತ ಹಳೆಯ ಕಾರ್ಯಾಚರಣಾ ರೈಲು ನಿಲ್ದಾಣವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ.

ಅಂದಹಾಗೆ ಈ ನಿಲ್ದಾಣವು 1915ರಿಂದ 1926ರವರೆಗೆ ಮುಚ್ಚಲ್ಪಟ್ಟಿತ್ತು. ನಂತರ ಅದನ್ನು 2011ರಲ್ಲಿ ಬದಲಾಯಿಸಲಾಯಿತು.

5. ಲಿವರ್‌ಪೂಲ್ ಲೈಮ್ ಸ್ಟ್ರೀಟ್ ಸ್ಟೇಷನ್
1836ರಿಂದ ಕಾರ್ಯನಿರ್ವಹಿಸುತ್ತಿರುವ ಲಿವರ್‌ಪೂಲ್ ಲೈಮ್ ಸ್ಟ್ರೀಟ್ ನಿಲ್ದಾಣವು ಪ್ರಪಂಚದ ಅತ್ಯಂತ ಹಳೆಯ ಗ್ರ್ಯಾಂಡ್ ಟರ್ಮಿನಸ್ ಮುಖ್ಯ ನಿಲ್ದಾಣವೆಂದು ಪರಿಗಣಿಸಲ್ಪಟ್ಟಿದೆ. ಆರಂಭದಲ್ಲಿ ಕ್ರೌನ್ ಸ್ಟ್ರೀಟ್‌ನಲ್ಲಿದ್ದ ಈ ರೈಲು ನಿಲ್ದಾಣವು ನಂತರದಲ್ಲಿ ಹಲವಾರು ಮರುಮಾದರಿಗಳು ಮತ್ತು ನವೀಕರಣಗಳಿಗೆ ಒಳಗಾಯಿತು.

6. ಲಂಡನ್ ಬ್ರಿಡ್ಜ್‌ ಸ್ಟೇಷನ್‌
1836ರ ಅಂತ್ಯದವರೆಗೆ ಲಂಡನ್ ಬ್ರಿಡ್ಜ್‌ ನಿಲ್ದಾಣವು ಇಂಗ್ಲೆಂಡ್‌ನ ರಾಜಧಾನಿಯ ಹೃದಯಭಾಗದಲ್ಲಿರುವ ಅತ್ಯಂತ ಹಳೆಯ ರೈಲು ನಿಲ್ದಾಣವಾಗಿದೆ.
ಲಂಡನ್ ಬ್ರಿಡ್ಜ್‌ ನಿಲ್ದಾಣದಲ್ಲಿ ವ್ಯಾಪಕವಾದ ನವೀಕರಣಗಳು ನಡೆದಿದ್ದು, ಅದನ್ನು ಆಧುನೀಕರಣಗೊಳಿಸಲಾಗಿದೆ. 2009 ರಿಂದ 2017 ರವರೆಗಿನ ಗಮನಾರ್ಹ ಪುನರಾಭಿವೃದ್ಧಿ ಸೇರಿದಂತೆ ಸುಮಾರು $1.25 ಶತಕೋಟಿ ವೆಚ್ಚವಾಗಿದೆ.

7. ಯುಸ್ಟನ್ ರೈಲು ನಿಲ್ದಾಣ
1837ರಲ್ಲಿ ಹುಟ್ಟಿಕೊಂಡಿದ್ದರೂ, ಯೂಸ್ಟನ್ ರೈಲು ನಿಲ್ದಾಣವು 1960ರ ದಶಕದಲ್ಲಿ ಸಂಪೂರ್ಣ ನವೀಕರಣಕ್ಕೆ ಒಳಗಾಯಿತು. ಇದು ವೆಸ್ಟ್ ಕೋಸ್ಟ್ ಮುಖ್ಯ ಮಾರ್ಗದ ದಕ್ಷಿಣದ ಟರ್ಮಿನಸ್ ಆಗಿ ಸೇವೆ ಸಲ್ಲಿಸುತ್ತಿದೆ.

ಅಂದಹಾಗೆ ಇದು ಲಿವರ್‌ಪೂಲ್ ಲೈಮ್ ಸ್ಟ್ರೀಟ್, ಎಡಿನ್‌ಬರ್ಗ್ ವೇವರ್ಲಿ, ಮ್ಯಾಂಚೆಸ್ಟರ್ ಪಿಕ್ಯಾಡಿಲಿ ಮತ್ತು ಗ್ಲ್ಯಾಸ್ಗೋ ಸೆಂಟ್ರಲ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.

8. ಹ್ಯಾರೋ ಮತ್ತು ವೆಲ್ಡ್ಸ್ಟೋನ್ ಸ್ಟೇಷನ್
ಲಂಡನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ನೆಲೆಗೊಂಡಿರುವ ಹ್ಯಾರೋ ಮತ್ತು ವೆಲ್ಡ್‌ಸ್ಟೋನ್ ನಿಲ್ದಾಣವು 1837ರ ಬೇಸಿಗೆಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿತ್ತು. 1960ರ ದಶಕದಲ್ಲಿ ವೆಸ್ಟ್ ಕೋಸ್ಟ್ ಮುಖ್ಯ ಮಾರ್ಗದ ವಿದ್ಯುದ್ದೀಕರಣದ ಸಮಯದಲ್ಲಿ ಇದು ಮರುನಿರ್ಮಾಣಗೊಂಡಿತು.

9. ವಿಟೆಬ್ಸ್ಕಿ ರೈಲು ನಿಲ್ದಾಣ
ಇದು ರಷ್ಯಾದ ಸಾಮ್ರಾಜ್ಯದಲ್ಲಿ ನಿರ್ಮಿಸಲಾದ ಮೊದಲ ರೈಲು ನಿಲ್ದಾಣವಾಗಿದೆ. ವಿಟೆಬ್ಸ್ಕಿ ರೈಲು ನಿಲ್ದಾಣವು ಹಿಂದೆ ಸೇಂಟ್ ಪೀಟರ್ಸ್ಬರ್ಗ್-ತ್ಸಾರ್ಸ್ಕೋಸೆಲ್ಸ್ಕಿ ನಿಲ್ದಾಣವಾಗಿತ್ತು.

ಅಕ್ಟೋಬರ್ 30, 1837 ರಂದು ಇದು ಉದ್ಘಾಟನೆಗೊಂಡಿತ್ತು. 20ನೇ ಶತಮಾನದ ಆರಂಭದಲ್ಲಿ ಆರ್ಟ್ ನೌವೀವ್ ವಾಸ್ತುಶಿಲ್ಪದ ಮೇರುಕೃತಿಯಾಗಿ ರೂಪಾಂತರಗೊಂಡಿತು.

10. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಭಾರತದ ಮೊದಲ ರೈಲು ನಿಲ್ದಾಣವಾಗಿದೆ. ಇದನ್ನು 1853ರಲ್ಲಿ ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ ನಿರ್ಮಿಸಿದೆ.

1887ರಲ್ಲಿ ಪುನರ್ನಿರ್ಮಾಣದ ನಂತರ ಇದನ್ನು ವಿಕ್ಟೋರಿಯಾ ಟರ್ಮಿನಸ್ ಎಂದು ಮರುನಾಮಕರಣ ಮಾಡಲಾಯಿತು. ನಂತರ 1996 ಮತ್ತು 2017ರಲ್ಲಿ ಇದನ್ನು ಛತ್ರಪತಿ ಶಿವಾಜಿ ಟರ್ಮಿನಸ್ (CST) ಎಂದು ಮರುನಾಮಕರಣ ಮಾಡಲಾಯಿತು. ಜುಲೈ 2004 ರಿಂದ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.

Nimma Suddi
";