ನಿಮ್ಮ ಸುದ್ದಿ ಬಾಗಲಕೋಟೆ
ರಾಜಕೀಯದಲ್ಲಿ ವಿರೋಧ ಸಹಜ, ಆದರೆ ಪಾಕಿಸ್ತಾನದ ಮೇಲೆ ಏರ್‌ಸ್ಕ್ಟ್ರೈಕ್ ಮಾಡಿದ ಸೈನಿಕರ ಕಾರ್ಯ ಮೆಚ್ಚದೆ ಅದಕ್ಕೆ ಸಾಕ್ಷಿ ಕೇಳುತ್ತಿರುವವರು ಅಯೋಗ್ಯರು ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಭಾವನೆಗಳ ಕಿಂದರಜೋಗಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ಭಾವನೆಗಳಿಗೆ ಬೆಲೆ ಕೊಡುತ್ತದೆ. ಹಲವು ವರ್ಷದಿಂದ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನಮ್ಮ ದೇಶ ನೀಡಬೇಕು ಎಂದು ಕಾಯುತ್ತಿದ್ದೆವು. ಅಂತಹ ಧೈರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಅವರ ನೆಲದಲ್ಲೇ ತೆರಳಿದ ನಮ್ಮ ಸೈನಿಕರು ಏರ್‌ಸ್ಕ್ಟ್ರೈಕ್ ಮೂಲಕ ದಾಳಿ ಮಾಡಿದರು. ಇದನ್ನು ಹೆಮ್ಮೆ ಪಡುವ ಬದಲು ಕೆಲ ಪುಣ್ಯಾತ್ಮರು ದಾಳಿಗೆ ಸಾಕ್ಷಿ ಕೇಳುತ್ತಿದ್ದಾರೆ. ಅಂತಹ ಅಯೋಗ್ಯರ ಮಾತಿಗೆ ಕಿವಿಗೊಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಭಾರತದ ದಾಳಿಯನ್ನು ಒಂದೂವರೆ ವರ್ಷದ ಬಳಿಕ ಪಾಕಿಸ್ತಾನದವರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ದೇಶದವರು ಕೇಂದ್ರ ಸರಕಾರವನ್ನು ವಿರೋಧಿಸುವದಕ್ಕಾಗಿಯೇ ಸೈನಿಕರ ದಾಳಿಗೆ ಸಾಕ್ಷಿ ಕೇಳುತ್ತಿದ್ದಾರೆ. ಚೀನಾ ದೇಶದ ಜಗತ್ತಿಗೆ ಕೊರೊನಾ ವೈರಸ್ ಕೊಟ್ಟರೆ ನಮ್ಮ ದೇಶ ಜಗತ್ತಿಗೆ ಲಸಿಕೆ ನೀಡಿದೆ. ಪಕ್ಕದ ಬಡರಾಷ್ಟçಗಳಿಗೆ ಔಷಧ ಖರೀದಿಗೆ ಸಾಧ್ಯವಿಲ್ಲದಿದ್ದಾಗ ಉಚಿತವಾಗಿಯೂ ಮುಂಚೂಣಿ ವಾರಿರ‍್ಸ್ಗೆ ಕೊರೊನಾ ಲಸಿಕೆ ನೀಡಿ ಜಗತ್ತಿಗೆ ಮಾದರಿ ದೇಶವಾಗಿ ಪರಿವರ್ತಿತವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಭಾವನೆಗಳನ್ನು ಹೊತ್ತ ಭಾರತದಲ್ಲಿ ಯುವ ಸಮೂಹದ ಮೂಲಕ ಹೊಸ ಅಲೆ ಏಳಬೇಕಿದೆ. ಯುವ ಸಮೂಹ ನಾಡು ಕಟ್ಟಲು ಸಮರ್ಥರಾಗಬೇಕು. ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಭಾರತ ಸೃಷ್ಠಿಯಾಗಿದೆ. ಅವರಿಗೆ ಹೆಗಲು ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶತೃಗಳನ್ನೂ ಸಹ ಮಿತ್ರರಂತೆ ನೋಡುವ ದೇಶ ಭಾರತ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕೆನಡಾದ ಕಾಲಿಸ್ತಾನಿಗಳ ಕೈವಾಡವಿದ್ದರೂ ಅಂತಹ ದೇಶಕ್ಕೂ ಕೊರೊನಾ ಲಸಿಕೆ ನೀಡಲು ಮುಂದಾಗಿದ್ದು ನಮ್ಮ ದೇಶದ ಹೆಮ್ಮೆ ಎಂದರು.
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ರೆಡ್‌ಝೋನ್‌ನಲ್ಲೂ ಸೇವೆ ಸಲ್ಲಿಸಿದವರು ಪೋಸ್ಟ್ಮನ್‌ಗಳು. ಅವರನ್ನು ಯಾರೂ ಸಹ ಕೊರೊನಾ ವಾರಿರ‍್ಸ್ಗಳೆಂದು ಗುರುತಿಸಲಿಲ್ಲ. ಅಂಚೆ ಇಲಾಖೆ ಇರುವುದೇ ಬಡವರಿಗಾಗಿ. ಅಂತಹ ಭಾವನೆಗಳಿಗೆ ಬೆಲೆ ನೀಡುವ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ಮುಂದಾಗಿದೆ ಎಂದು ಹೇಳಿದರು.
ಸೂಳೇಬಾವಿಯೊಂದಿಗೆ ಅವಿನಾಭಾವ ಸಂಬಂಧವಿದೆ ಎಂದೆನಿಸುತ್ತದೆ. ನನ್ನೂರು ಸೂಲಿಬೆಲೆ ಆದರೂ ಇಂದಿಗೂ ಕೆಲವರು ಚಕ್ರವರ್ತಿ ಸೂಳೇಬಾವಿ ಎಂದೇ ಕರೆಯುತ್ತಾರೆ. ಸಂಘಟನೆ ಕಟ್ಟಿ ೬ ವರ್ಷ ಆಗಿದೆ. ಇನ್ನೂ ಬೆಳೆಯುತ್ತಿರುವ ಸಂಘಟನೆ ಆಗಿದ್ದು ಉತ್ತಮ ಸಲಹೆಗಳಿಗೆ ಸದಾ ಸ್ವಾಗತವಿರುತ್ತದೆ. ಸಮಾಜಕ್ಕೋಸ್ಕರ ದುಡಿಯುವವರನ್ನು ಗುರುತಿಸುವ ಚಿಕ್ಕ ಕೆಲಸ ಮಾಡುತ್ತಿದ್ದೇವೆ. ಭಾವನೆಗಳನ್ನು ಹೊತ್ತು ತರುವ ಅಂಚೆಯಣ್ಣನನ್ನು ಗೌರವಿಸುವುದೇ ಭಾವನೆಗಳ ಕಿಂದರಜೋಗಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿ, ಬಹುದಿನಗಳ ಆಸೆ ಸಾರ್ಥಕತೆ ಕಂಡಿದೆ. ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದರ ಕುರಿತು ಆತ್ಮಾವಲೋಕ ಮಾಡಿಕೊಳ್ಳುವ ಸುಸಮಯವಿದು. ಭಾರತಕ್ಕೆ ವಿಶ್ವಗುರು ತಂದು ಕೊಡುವ ಕಾರ್ಯದಲ್ಲಿ ಸೂಲಿಬೆಲೆ ಅವರ ಕಾರ್ಯ ಶ್ಲಾಘನೀಯ. ಗಡಿ ಕಾಯುವ ಸೈನಿಕ ಹಾಗೂ ಮಠಾಧಿಪತಿಗಳು ಜಾಗೃತರಾಗಿರಬೇಕು. ಆಗ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಎಂದರು.
ಅತಿಥಿಗಳಾಗಿ ಬ್ರಿಗೇಡ್‌ನ ವಿಭಾಗ ಸಂಚಾಲಕ ವರ್ಧಮಾನ ತ್ಯಾಗಿ, ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್.ರಾಮದುರ್ಗ, ಅಕ್ಷಯ ನಾಯ್ಕರ್, ನಾಗೇಶ ಗಂಜಿಹಾಳ, ಬಾಹುಬಲಿ ಮಣೀ, ನಿಲೇಶ ಪೂಜಾರಿ, ರಮೇಶ ಮಡಿವಾಳ, ಶ್ರೀಧರ ನಿರಂಜನ ಇತರರು ಇದ್ದರು.