This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsNational NewsPolitics NewsState News

*ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಕ್ರಮ : ತಿಮ್ಮಾಪೂರ

*ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಕ್ರಮ : ತಿಮ್ಮಾಪೂರ

ಬಾಗಲಕೋಟೆ:

ಸಂಕಷ್ಟದಲ್ಲಿರುವ ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಒದಗಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗ ಇಂದು ಉದ್ಯಮವಾಗಿ ಮಾರ್ಪಡುತ್ತಿದ್ದು, ಇದರಲ್ಲಿ ಪತ್ರಕರ್ತರು ನೌಕರರಾಗಿ ಕೆಲಸ ಮಾಡಬೇಕಾಗಿದೆ. ಇದರಿಂದಾಗಿ ಪತ್ರಕರ್ತರು ನಿಷ್ಟುರ ಬರಹ ಬರೆಯುವುದು ಕಷ್ಟವಾಗಿದೆ. ಸುದ್ದಿಗಳು ವಾಣಿಜ್ಯಕರಣಗೊಂಡಿದ್ದು, ಇದರಿಂದ ಪತ್ರಕರ್ತರ ಗೌರವ ಕಡಿಮೆಯಾಗುತ್ತಿರುವುದು ವಿಷಾದಕರ. ಪತ್ರಕರ್ತರಿಗೆ ವೇತನ ಕಡಿಮೆಯಾದರೂ ಪರವಾಗಿಲ್ಲ ಅವರ ಗೌರವ ಕಡಿಮೆಯಾಗಬಾರದು. ಆ ನಿಟ್ಟಿನಲ್ಲಿ ಕಾರ್ಯಗಳು ನಡೆಯಬೇಕಿದೆ ಎಂದರು.

ಪತ್ರಕರ್ತರಾದವರು ಎಲ್ಲರ ಜೊತೆ ಒಡನಾಟ ಹೊಂದಿದದ್ದರೂ ನಿಷ್ಟುರ ಬರಹ ವಿಚಾರದಲ್ಲಿ ರಾಜೀ ಬೇಡ ಎಂದ ಅವರು ಇಂದಿನ ಸ್ಥಿತಿಯಲ್ಲಿ ನಿಷ್ಟುರತೆಯಿಂದ ಪತ್ರಕರ್ತರು ಬದುಕುವುದು ಕಷ್ಟವಾಗಿದೆ. ಅದಕ್ಕಾಗಿ ಅವರಿಗೆ ಸರಕಾರದಿಂದ ಸೂಕ್ತ ಸೌಲಭ್ಯಗಳು ಲಭಿಸಬೇಕು.

ಪತ್ರಕರ್ತ ಯಾವ ವಿಷಯ ಕುರಿತು ವರದಿ ಮಾಡುತ್ತಾರೋ ಆ ಕ್ಷೇತ್ರದ ಪರಿಣಿತ ವ್ಯಕ್ತಿಯಾಗಿ ಸಮಗ್ರ ಅಧ್ಯಯನ ಮಾಡಿ ಬರೆಯುವ ಕಲೆಯನ್ನು ಹೊಂದಿರುವುದು ಶ್ಲಾಘನೀಯ, ಆದರೆ ಅವರ ಶ್ರಮ, ಬುದ್ದಿಶಕ್ತಿಗೆ ತಕ್ಕಂತೆ ಪ್ರತಿಫಲ ಸಿಗುತ್ತಿಲ್ಲ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಮಾತನಾಡಿ ಬಡ ಮತ್ತು ನಿಜವಾದ ವೃತ್ತಿಪರ ಪತ್ರಕರ್ತರ ಕುಟುಂಬಗಳ ಯೋಗಕ್ಷೇಮಕ್ಕಾಗಿ ಒಂದು ಉತ್ತಮವಾದ ಯೋಜನೆ ರೂಪಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಮುಂದಿನ ೧೫-೨೦ ದಿನಗಳಲ್ಲಿ ಕಾರ್ಯನಿರತ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಒದಗಿಸುವ ಸಿದ್ದತೆಗಳು ನಡೆದಿವೆ. .

ಕಾರ್ಯ ಮರೆತ ಪತ್ರಕರ್ತರು ಮತ್ತು ವೃತ್ತಿ ತೊರೆದ ಪತ್ರಕರ್ತರು ಸರ್ಕಾರದ ಈ ಯೋಜನೆ ದುರುಪಯೋಗ ಆಗದಂತೆ ಸಹಕರಿಸಬೇಕು ಎಂದು ತಿಳಿಸಿದರು.

ಪತ್ರಕರ್ತರಿಗೆ ನಿವೇಶನ ಕೊಡುವ ಕುರಿತು ವೇದಿಕೆಯಲ್ಲಿದ್ದ ಸಚಿವ ತಿಮ್ಮಾಪೂರಲ್ಲಿ ಮನವಿ ಮಾಡಿಕೊಂಡಾಗ ಸಚಿವರು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಪತ್ರಿಕೋದ್ಯಮದಲ್ಲಿ ಸ್ನಾಕತೋತ್ತರ ಪದವಿ ಪಡೆದು ಜಿಲ್ಲಾ ಮಟ್ಟದ ಪತ್ರಿಕೆ ಆರಂಭಿಸುವ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರುತ್ತಿದ್ದಂತೆ ಅವರಿಗೆ ಪ್ರೋತ್ಸಾಹಕರ ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಈ ಕುರಿತು ಈಗಾಗಲೇ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಾರಂಭದಲ್ಲಿ ಆಶಯ ನುಡಿ ಹೇಳಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಅವರು ಪತ್ರಕರ್ತರು ನೈಜ ಪರಂಪರೆ ಉಳಿಸಕೊಂಡು ಹೋಗುವ ಅಗತ್ಯವಿದೆ. ಮಾಧ್ಯಮದ ಮೇಲೆ ಸಮಾಜ ವಿಶ್ವಾಸ, ಜವಾಬ್ದಾರಿ ಇಟ್ಟುಕೊಂಡಿದೆ. ಕೆಲವೊಬ್ಬರು ಯೂಟ್ಯೂಬ್ ಮಾಡಿಕೊಂಡು ಬ್ಲಾಕಮೇಲ್ ಮಾಡುವ ಮೂಲಕ ಪತ್ರಕರ್ತರ ವೃತ್ತಿಗೆ ಕೆಟ್ಟ ಹೆಸರು ತರುವ ಕೆಲಸವಾಗುತ್ತಿದೆ. ಇದನ್ನು ಹತ್ತಿಕ್ಕಿಸುವ ಕೆಲಸವಾಗಲಿ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದಲಭಂಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಸಿಎಂ ಮಾಧ್ಯಮ ಸಲಹೆಗಾರರ ಅಪ್ತ ಸಹಾಯಕ ಗಿರೀಶ, ಕಾನಿಪದ ರಾಜ್ಯ ಉಪಾದ್ಯಕ್ಷ ಪುಂಡಲೀಕ ಬಾಳೋಜಿ, ಕಾನಿಪದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮಹೇಶ ಅಂಗಡಿ, ಕಕಾನಿಸಂ ಸಂಘದ ರಾಜ್ಯ ಅಧ್ಯಕ್ಷ ಜಾಕೀರಹುಸೇನ ತಾಳಿಕೋಟಿ, ರಾಜ್ಯ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗುಳೇಗುಡ್ಡ, ಕಾನಿಪದ ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಸೇರಿದಂತೆ ಇತರರು ಇದ್ದರು.

Nimma Suddi
";