ಇಂದು ರಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭ
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸೇರಿ ಸಚಿವರ ದಂಡು
ಧಾರವಾಡ:
ರವಿವಾರ ಸಾಯಂಕಾಲ ೪-೦೦ ಗಂಟೆಗೆ ಬ್ಯಾಂಕಿನ ಪ್ರಧಾನ ಕಚೆÃರಿಯ ನೂತನ ಕಟ್ಟಡವನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಉದ್ಘಾಟಿಸುವರು. ನಂತರ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಎಫ್.ಟಿ.ನಲವಡಿ ಮತ್ತು ಬ್ಯಾಂಕಿನ ಅಭಿವೃದ್ಧಿ ಹರಿಕಾರರಾದ ಸಹಕಾರ ರಂಗದ ಭೀಷ್ಮ ಶ್ರೀ ಕೆ.ಎಚ್.ಪಾಟೀಲರ ಪುತ್ಥಳಿಗಳ ಅನಾವರಣ ಮಾಡುವರು.
ಸತ್ತೂರಿನ ಶ್ರೀ ಡಿ. ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ನಡೆಯುವ ಶತಮಾನೋತ್ಸವ ಸಮಾರಂಭವನ್ನು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ ಉದ್ಘಾಟಿಸುವರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅವರು ಶ್ರೀ ಕೆ.ಎಚ್.ಪಾಟೀಲ ವಿಚಾರಧಾರೆ ಪುಸ್ತಕ ಬಿಡುಗಡೆ ಮಾಡುವರು. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರು ಮಹಾಯೋಗಿ ವೇಮನ ಭಾವಚಿತ್ರ ಅನಾವರಣ ಮಾಡುವರು. ಸಹಕಾರಿ ಸಚಿವ ಶ್ರೀ ಕೆ.ಎನ್. ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಸಚಿವರಾದ ಶ್ರೀ ರಾಮಲಿಂಗಾರಡ್ಡಿ ಅವರು ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರ ಅನಾವರಣ ಮಾಡುವರು.
ಕಾರ್ಮಿಕ, ಮಾಹಿತಿ ಮತ್ತು ಮೂಲ ಸೌಕರ್ಯ ಖಾತೆ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ, ಅಬಕಾರಿ ಸಚಿವರಾದ ಶ್ರೀ ಆರ್.ಬಿ. ತಿಮ್ಮಾಪೂರ, ಸಣ್ಣಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ, ಹೊಸದಿಲ್ಲಿಯ ರಾಷ್ಟಿçÃಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಲಕ್ಷಿö್ಮÃದಾಸ, ಹೊಸದಿಲ್ಲಿಯ ಅಂಬ್ರೇಲಾ ಸಂಘಟನೆಯ (ಎನ್.ಯು.ಸಿ.ಎಫ್.ಡಿ.ಸಿ.) ಚೇರಮನ್‌ರಾದ ಶ್ರೀ ಜ್ಯೋತೀಂದ್ರಭಾಯಿ ಮೆಹ್ತಾ ಭಾಗವಹಿಸಲಿದ್ದಾರೆ.
ಎರೆಹೊಸಳ್ಳಿಯ ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಶ್ರೀ ವೇಮನಾನಂದ ಮಹಾಸ್ವಾಮಿಗಳು, ಧಾರವಾಡದ ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾ ಮಂಡಳದ ಅಧ್ಯಕ್ಷರು ಮತ್ತು ರಾಷ್ಟಿçÃಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಚೇರಮನ್ ಎಮಿರೇಟ್ಸ್ ಶ್ರೀ ಎಚ್. ಕೆ. ಪಾಟೀಲರು ವಹಿಸುವರು ಎಂದು ರಡ್ಡಿ ಬ್ಯಾಂಕಿನ ಚೇರಮನ್‌ರಾದ ಶ್ರೀ ಕೆ.ಎಲ್. ಪಾಟೀಲರು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ, (ಲೋಕಸಭಾ ಸದಸ್ಯರು, ಬೆಳಗಾವಿ), ಶ್ರೀ ಬಸವರಾಜ ಬೊಮ್ಮಾಯಿ, (ಲೋಕಸಭಾ ಸದಸ್ಯರು, ಹಾವೇರಿ), ವಿಧಾನಸಭೆಯ ಉಪಸಭಾಧ್ಯಕ್ಷ ಶ್ರೀ ರುದ್ರಪ್ಪ ಲಮಾಣಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಲೋಕಸಭೆ ಸದಸ್ಯರಾದ ಶ್ರೀ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವರಾದ ಶ್ರೀ ರಮೇಶ ಜಿಗಜಿಣಗಿ (ವಿಜಯಪುರ ಲೋಕಸಭಾ ಸದಸ್ಯರು) ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಶಾಸಕರು ಹಾಗೂ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ. ಎಸ್. ಪಾಟೀಲ, ಕರ್ನಾಟಕ ಸೋಪ್ಸ್ & ಡಿಟರಜಂಟದ ಅಧ್ಯಕ್ಷರಾದ ಶಾಸಕ ಶ್ರೀ ಸಿ.ಎಸ್. ನಾಡಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶ್ರೀ ಬಸವರಾಜ ರಾಯರಡ್ಡಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಜೆ.ಟಿ. ಪಾಟೀಲ, ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ಶ್ರೀ ವಿನಯ ಕುಲಕರ್ಣಿ, ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಶ್ರೀ ಪ್ರಸಾದ ಅಭಯ್ಯ, ಮಾಜಿ ವಿಧಾನಸಭಾಧ್ಯಕ್ಷರಾದ ಶ್ರೀ ಕೆ. ಬಿ. ಕೋಳಿವಾಡ, ಮಾಜಿ ಸಚಿವರು ಹಾಗೂ ನ್ಯಾಫಕಬ್ ನಿರ್ದೇಶಕರಾದ ಶ್ರೀ ಎ. ಎಮ್.ಹಿಂಡಸಗೇರಿ, ಶ್ರೀ ಸಿದ್ಧಾರೂಡ ಮಠದ ಪೋಷಕರು, ಅಜೀವ ಸದಸ್ಯರು ಮೇಲ್ಮನೆಯ ಅಧ್ಯಕ್ಷರಾದ ಮಾಜಿ ಶಾಸಕ ಶ್ರೀ ಡಿ.ಆರ್.ಪಾಟೀಲ, ಮಾಜಿ ಸಚಿವ ಶ್ರೀ ಬಿ.ಆರ್. ಯಾವಗಲ್, ಶಾಸಕರಾದ ಶ್ರೀ ಎನ್. ಎಚ್. ಕೋನರಡ್ಡಿ, ಮಾಜಿ ಸಚಿವ ಶ್ರೀ ಎಸ್.ಆರ್. ಪಾಟೀಲ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಶ್ರೀ ಅರವಿಂದ ಬೆಲ್ಲದ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಶ್ರೀ ಸಲೀಮ್ ಅಹ್ಮದ, ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಜಯ ನಾಗಭೂಷಣ ಹಾಗೂ ಭಾರತೀಯ ಭೂ ಸೇನೆಯ ಲೆ|| ಜನರಲ್‌ರಮೇಶ ಹಲಗಲಿ (ನಿ) ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶಾಸಕರಾದ ಶ್ರೀ ಪಿ.ಎಚ್. ಪೂಜಾರ, ಶ್ರೀ ಹಂಪನಗೌಡ ಬಾದರ್ಲಿ, ಶ್ರೀ ಮಹೇಶ ಟೆಂಗಿನಕಾಯಿ, ಶ್ರೀ ಪ್ರಕಾಶ ಕೋಳಿವಾಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯ ಪೂಜ್ಯ ಮಹಾಪೌರರಾದ ಶ್ರೀ ರಾಮಪ್ಪ ಬಡಿಗೇರ, ಶಾಸಕರಾದ ಶ್ರೀ ಚನ್ನಾರಡ್ಡಿ ತುನ್ನೂರ, ಮಾಜಿ ಸಚಿವರಾದ ಶ್ರೀ ಎನ್. ಎಚ್. ಶಿವಶಂಕರ ರಡ್ಡಿ, ಶ್ರೀ ಅಮೇರಗೌಡ ಬಯ್ಯಾಪುರ, ಮಾಜಿ ಶಾಸಕ ಶ್ರೀ ಎಸ್. ಜಿ. ನಂಜಯ್ಯನಮಠ, ಮಾಜಿ ಕೇಂದ್ರ ಸಚಿವ ಶ್ರೀ ಬಸವರಾಜ ಪಾಟೀಲ ಅನ್ವರಿ, ಶಾಸಕರಾದ ಶ್ರೀ ಸುಬ್ಬಾರಡ್ಡಿ, ಮಾಜಿ ಸಚಿವರಾದ ಶ್ರೀ ಹಾಲಪ್ಪ ಆಚಾರ, ಶ್ರೀ ವೆÀಂಕಟರಾವ ನಾಡಗೌಡ, ಮಾಜಿ ಶಾಸಕರಾದ ಶ್ರೀ ಸಿ.ಆರ್.ಸೊರಗಾವಿ, ಶ್ರೀ ಎನ್. ಶರಣಪ್ಪ ಮಟ್ಟೂರ, ಶ್ರೀ ಜಿ.ಎಚ್.ತಿಪ್ಪಾರಡ್ಡಿ, ಶ್ರೀ ಆರ್.ವ್ಹಿ. ಪಾಟೀಲ, ಶ್ರೀ ಸೋಮನಗೌಡ ಪಾಟೀಲ, ಶ್ರೀ ಎ.ಎಸ್. ಪಾಟೀಲ ನಡಹಳ್ಳಿ, ಶ್ರೀ ಬಸವರಾಜ ಪಾಟೀಲ (ಇಟಗಿ) ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಹಕಾರ ಸಂಘಗಳ ನಿಬಂಧಕರಾದ ಶ್ರೀ ಟಿ.ಎಚ್.ಎಮ್.ಕುಮಾರ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಮಾಜಿ ಅಧ್ಯಕ್ಷರಾದ ಶ್ರೀ ಡಿ.ಟಿ. ಪಾಟೀಲ, ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ, ನ್ಯಾಫ್‌ಕಬ್ ಮುಖ್ಯಕಾರ್ಯನಿರ್ವಹಣಾಧಿಕಾರಿ (ನಿ) ಶ್ರೀ ಡಿ. ಕೃಷ್ಣ, ನ್ಯಾಫ್‌ಕಬ್ ನಿರ್ದೇಶಕರಾದ ಶ್ರೀ ಜಯಕುಮಾರ, ಶ್ರೀ ಕೆ.ಕಾಳಪ್ಪ, ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಶ್ರೀ ಸುರೇಶಗೌಡ, ಶ್ರೀ ಪಿ.ಮಹೇಶ, ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೆರೂರೆ, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ರಮೇಶ ಬಗಲಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ನಿಂಗರಾಜ ಬೆಣ್ಣಿ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ.
ಸಮಾರಂಭಕ್ಕೆ ಸಹಕಾರಿಗಳು ಬ್ಯಾಂಕಿನ ಹಿತೈಷಿಗಳು ಹೆಚ್ಚಿನ ಸಂಖೈಯಲ್ಲಿ ಪಾಲ್ಗೊಳ್ಳÀಬೇಕೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ ಎಲ್ ಪಾಟೀಲರು ಮನವಿ ಮಾಡಿಕೊಂಡಿದ್ದಾರೆ.