ಅಮೀನಗಡ
ಸಮೀಪದ ಹಿರೇಮಾಗಿ ಗ್ರಾಮ ಪಂಚಾಯಿತಿಯಿAದ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಕಾರ್ಯಕ್ರಮ ನಡೆಯಿತು.
ಗ್ರಾಮದ ಸರಕಾರಿ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶೌಚಾಲಯ ಕುರಿತ ಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಶೌಚಾಲಯ ಉಪಯೋಗದ ಕುರಿತಾದ ಘೋಷಣೆ ಕೂಗಿದರು.
ನಂತರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನೀಲವ್ವ ಹುಲ್ಲಿಕೇರಿ, ಪಿಡಿಒ ಎಸ್.ಬಿ.ಚಂದ್ರಗಿರಿ ಸಸಿಗೆ ನೀರುಣಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು.
ಆಂದೋಲನ ಜಿಲ್ಲಾ ಸಮಾಲೋಚಕ ಎಂ.ಜಿ.ಮುAಗೋಜಿ, ಶೌಚಾಲಯ ಬಳಕೆಯ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು. ಮನೆಯಲ್ಲಿ ಪ್ರತಿಯೊಬ್ಬರೂ ಶೌಚಾಲಯವಿರುವಂತೆ ಮಕ್ಕಳು ಪಾಲಕರನ್ನು ಒತ್ತಾಯಿಸಬೇಕು. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಕೈ ಜೋಡಿಸಬೇಕು ಎಂದರು.
ಮುಖ್ಯಶಿಕ್ಷಕ ಪಿ.ಎಚ್.ಪವಾರ್, ಶಿಕ್ಷಕರಾದ ಎನ್.ಆರ್.ಸವರಾಜ, ವಿ.ಡಿ.ನಿಡಗುಂದಿ, ಎಸ್.ಎಸ್.ಮಳ್ಳಿ, ಎ.ಡಿ.ಲಮಾಣಿ, ಬಿ.ಡಿ.ಗೌಡರ, ಗ್ರಾಪಂ ಕಾರ್ಯದರ್ಶಿ ಎಚ್.ಎಸ್.ಮಿಟ್ಟಲಕೋಡ, ಸಂಗಪ್ಪ ಬನ್ನೆಪ್ಪನವರ ಹಾಗೂ ಸಿಬ್ಬಂದಿ ಇದ್ದರು.