ಬಾಗಲಕೋಟೆ
ಶ್ರೀ ಮುತ್ತಪ್ಪ ಯಲಪ್ಪ ಕಂಬಾರ, ಇವರು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಜರಾಗಿ ತಮ್ಮ ಪಿರಾದಿ ಕೊಟ್ಟಿದ್ದರಲ್ಲಿ, ಭಗವತಿ ಗ್ರಾಮದ ತಮ್ಮ ಮನೆಯ ಮುಂದೆ ನಿಲ್ಲಿಸಿದ ತಮ್ಮ ಬಜಾಜ ಕಂಪನಿ ಪಲ್ಸರ್ ಮೋಟಾರ ಸೈಕಲ್ ನಂಬರ 28/6784 : 27.12.2022 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಪಿರಾದಿ ಇತ್ತು
ಸದರ ಪ್ರಕರಣದ ಕಳುವಾದ ಮೋಟಾರ ಸೈಕಲ್ ಪತ್ತೆ ಮಾಡುವ ಕಾಲಕ್ಕೆ ಸಂಶಯುಕ್ತ ವ್ಯಕ್ತಿಗಳಾದ 1) ಗೋಪಾಲ ಗುರುರಾಜ ಕುರಿ, ವಯಾ 22 ವರ್ಷ ವಾಗಲಕೋಟಿ 2) ಸಚಿನ ವಿಠಲಗೌಡ, ಪಾಟೀಲ, ವಯಾ 25 ವರ್ಷ ಸಾಃ, ಬೇವೂರ, ಇವರನ್ನು ಸಂಶಯುಕ್ತವಾಗಿ ಕಳ್ಳತನ ಮಾಡುವ ಇರಾದಿಯಲ್ಲಿ ತಿರುಗಾಡುತ್ತಿದ್ದಾಗ ಇಂದು ದಿನಾಂಕ:10.09.2023 ರಂದು ಸಿಕ್ಕಿದ್ದು ವಿಚಾರಣೆ ಮಾಡುವ ಕಾಲಕ್ಕೆ ಪಿರ್ಯಾದಿ ಮೋಟರ ಸೈಕಲ ನಂಬರ 28/ಇಎ6784 ನೇದ್ದನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು
ಆ ಕಾಲಕ್ಕೆ ಆರೋಪಿತರಿಗೆ ವಿಚಾರಣೆ ಮುಂದುವರಿಸಿದ್ದರಿಂದ ಆರೋಹಿತರಿ೦ದ 5 ಹೆಚ್‌ಎಫ್ ಡಿಲಕ್ಸ್ ಮೋಟಾರ ಸೈಕಲ, ತ ಸೈಡರ ಪ್ಲಸ್ ಮೋಟಾರ ಸೈಕಲ, ಎರಡು ಪಲ್ಸರ್ ಬೈಕ್ ಹೀಗೆ ಒಟ್ಟು 11 ಮೋಟಾರ ಸೈಕಲ್‌ಗಳನ್ನು ಆರೋಪಿತರಿಂದ ವಶಪಡಿಸಿಕೊಂಡಿದ್ದು, ಇರುತ್ತದೆ. ಅವುಗಳ ಅಂದಾಜು ಕಿಮ್ಮತ್ತು 585000/- ರೂ. ಇದೆ.
ಮಾನ್ಯ ಎಸ್.ಪಿ ಸಾಹೇಬರು ಅಮರನಾಥ ರೆಡ್ಡಿ ರವರು, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಪ್ರಸನ್ನಕುಮಾರ ದೇಸಾಯಿ ರವರು, ಡಿಎಸ್‌ಪಿ ಪಂಪನಗೌಡ ರವರ ಮಾರ್ಗದರ್ಶನದಲ್ಲಿ ಮತ್ತು ತನಿಖಾ ತಂಡದ ಮುಖ್ಯಸ್ಥರಾದ ಶ್ರೀ ಹೆಚ್. ಆರ್. ಪಾಟೀಲ ಸಿಪಿಐ ಬಾಗಲಕೋಟ ಗ್ರಾಮೀಣ ವೃತ್ರ ರವರ ನೇತೃತ್ವದಲ್ಲಿ, ಪಿಎಸ್‌ಐ ಶರಣಬಸಪ್ಪ, ಎನ್. ಸಂಗಳದ, ಆರ್.ಡಿ.ಲಮಾಣಿ, ಎಎಸ್‌ಐ ಡಿ. ಸಿ. ಗುಡ್ಡ, ಹೆಚ್-108 ಆರ್.ಎಮ್, ಕುಲಕರ್ಣಿ, ಸಿ-1118 ಪಿ.ಎಸ್. ಪಾಟೀಲ್, ಪಿಸಿ-625 ಆರ್.ಎ ನಾಫ್, ಪಿಸಿ-1636 ಎಸ್.ಪಿ ಹಳೇಮನಿ, ಪಿಸಿ-973, ಎಸ್.ಎಸ್. ಸೊನ್ನದ ಹಾಗೂ ಬಾಗಲಕೋಟ ಮಹಿಳಾ 2A-1522 ಮುತ್ತು ಅಜಮನಿ, ಎಲ್ಲ ತನಿಖಾ ತಂಡದ ಅಧಿಕಾರಿ ಸಿಬ್ಬಂದಿಯವರಿಗೆ, ಮಾನ್ಯ ಎಸ್.ಪಿ ಸಾಹೇಬರು ರವರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿದ್ದಾರೆ.