This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsInternational NewsLocal NewsNational NewsState News

G20 Summit 2023: ಸಿರಿಧಾನ್ಯ ಭಕ್ಷ್ಯಗಳಿಗೆ ಬ್ರಿಟನ್ ಪಿಎಂ ಪತ್ನಿ ಅಕ್ಷತಾ ಮೂರ್ತಿ ಫುಲ್ ಫಿದಾ!

G20 Summit 2023: ಸಿರಿಧಾನ್ಯ ಭಕ್ಷ್ಯಗಳಿಗೆ ಬ್ರಿಟನ್ ಪಿಎಂ ಪತ್ನಿ ಅಕ್ಷತಾ ಮೂರ್ತಿ ಫುಲ್ ಫಿದಾ!

ನವದೆಹಲಿ: ಜಿ20 ಶೃಂಗಸಭೆಯಲ್ಲಿ (G20 Summit 2023) ಪಾಲ್ಗೊಂಡ ವಿಶ್ವನಾಯಕರು (World Leader) ಬಡಿಸಲಾದ ಆಹಾರ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿಬಂದಿದೆ. ಅದರಲ್ಲೂ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರು ಭಾರೀ ಇಷ್ಟ ಪಟ್ಟಿದ್ದಾರೆ. ಆವಕಾಡೊ ಮತ್ತು ಸಜ್ಜೆ ಸಿರಿಧಾನ್ಯ(ಪರ್ಲ್ ಮಿಲೆಟ್ ಸಲಾಡ್) ಹಾಗೂ ಜೋಳ ಮತ್ತು ಹಲಸು ಹಲೀಮ್‌ ಭಕ್ಷ್ಯಗಳಿಗೆ ಫಿದಾ ಆಗಿದ್ದಾರೆ ಎಂದು ಐಟಿಸಿ ಹೊಟೇಲ್ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಜಿ20 ಶೃಂಗಸಭೆಯ ವೇಳೆ ಐಟಿಸಿ ಹೊಟೇಲ್‌ ಸಿರಿಧಾನ್ಯಗಳ ಆಧಾರಿತ ಭಕ್ಷ್ಯಗಳನ್ನು ಒದಗಿಸಿತ್ತು. ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳಿಗೆ ಭಾರೀ ಮೆಚ್ಚುಗೆ ಕೂಡ ದೊರೆಯಿತು.

ಐಟಿಸಿ ಶೆರಾಟನ್ ನವದೆಹಲಿಯ ಇಬ್ಬರು ಪ್ರತಿಭಾವಂತ ಮಹಿಳಾ ಬಾಣಸಿಗರು 20 ರಾಗಿ ಆಧಾರಿತ ಭಕ್ಷ್ಯಗಳ ಮೆನು ರೂಪಿಸಿದ್ದರು. ಈ ಪಾಕಶಾಲೆಯ ಪ್ರಯತ್ನವು ಐಟಿಸಿ ಹೋಟೆಲ್ ಸರಪಳಿಗಳ “ಮಿಷನ್ ಮಿಲೆಟ್ಸ್” ಉಪಕ್ರಮದಿಂದ ಸ್ಫೂರ್ತಿ ಪಡೆದುಕೊಂಡಿದೆ. 2023ರ ವಿಶ್ವಸಂಸ್ಥೆಯ ಘೋಷಣೆಯೊಂದಿಗೆ ಸಿರಿಧಾನ್ಯಗಳ ಕೃಷಿಯ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಭಾರತವು ಪ್ರಸ್ತಾಪಿಸಿದ ಪ್ರಸ್ತಾವನೆಯನ್ನು ಅಂತಾರಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ.

ಭಾರತ್ ಮಂಟಪದಲ್ಲೂ ವಿಶೇಷ ಭೋಜನ
ಶನಿವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ಶೃಂಗಸಭೆಗೆ ಆಗಮಿಸಿದ್ದ 170 ಅಧಿಕ ಗಣ್ಯರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದರು. ಈ ವೇಳೆಯೂ ಸಿರಿಧಾನ್ಯಗಳ ಆಧಾರಿತ ಮೆನು ರೂಪಿಸಲಾಗಿತ್ತು. ಶೃಂಗ ಸಭೆಯ ನಡೆಯು ಸ್ಥಳಕ್ಕೆ ಆಹಾರ ಪೂರೈಕೆಯ ಜವಾಬ್ದಾರಿಯನ್ನು ಐಟಿಸಿ ಹೊಟೇಲ್‌ದೆ ವಹಿಸಲಾಗಿತ್ತು ಎಂದು ಭಾರತದ ಜಿ20 ವಿಶೇಷ ಕಾರ್ಯದರ್ಶಿಯಾಗಿರುವ ಮುಕ್ತೇಶ್ ಪರದೇಶಿ ಅವರು ಹೇಳಿದ್ದಾರೆ. ಜಾಗತಿಕ ವೇದಿಕೆಯಲ್ಲಿ ದೇಶದ ಸಿರಿಧಾನ್ಯಗಳ ಮಹತ್ವವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

2023 ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸುವ ಭಾರತದ ಪ್ರಸ್ತಾಪಕ್ಕೆ 73 ರಾಷ್ಟ್ರಗಳು ಬೆಂಬಲಿಸಿದ್ದವು. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯವನ್ನು ಪಾಸು ಮಾಡಿಕೊಳ್ಳುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಯತ್ನ ಮಾಡಲಾಯಿತು ಮತ್ತು ಯಶಸ್ವಿಯಾಯಿತು.

";