This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಅಂಜನಾದ್ರಿಗೆ ಕೇಂದ್ರ ಸರಕಾರರಿಂದ ರೋಪ್ ವೇ ಭಾಗ್ಯ: ರಾಜ್ಯ ಸರ್ಕಾರದ ನಂತರ ಈಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ಅಂಜನಾದ್ರಿಗೆ ಕೇಂದ್ರ ಸರಕಾರರಿಂದ ರೋಪ್ ವೇ ಭಾಗ್ಯ: ರಾಜ್ಯ ಸರ್ಕಾರದ ನಂತರ ಈಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ

ಕೊಪ್ಪಳ: ಹನುಮ ಉದಯಿಸಿದ ನಾಡು ಅಂಜನಾದ್ರಿಗೆ ಕೇಂದ್ರ ಸರಕಾರರಿಂದ ರೋಪ್ ವೇ ಭಾಗ್ಯ ದೊರಕಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದು, ಅನುದಾನ ಕೊಡುವುದಾಗಿ ತಿಳಿಸಿದರು.

ಈ ಹಿಂದೆಯೇ ರಾಜ್ಯ ಸರಕಾರ ರೋಪ್ ವೇ ನಿರ್ಮಾಣ ಮಾಡುವುದಾಗಿ ತಿಳಿಸಿದ್ದು, ಈವರೆಗೆ ಅನುಷ್ಠಾನಗೊಂಡಿರಲಿಲ್ಲ. ಆದರೆ, ಫೆ. 16ರಂದು ಮಂಡಿಸಲಾಗಿದ್ದ ರಾಜ್ಯ ಬಜೆಟ್ ನಲ್ಲಿ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಜನಾದ್ರಿ ರೋಪ್ ವೇಗೆ 100 ಕೋಟಿ ರೂ. ಮೀಸಲಿರಿಸುವುದಾಗಿ ಘೋಷಿಸಿದ್ದು, ದಿನದಿಂದ ದಿನಕ್ಕೆ ಅಂಜನಾದ್ರಿಗೆ ಬರುವ ಭಕ್ತರಿಗೆ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಳವಾಗುತ್ತಲೇ ಇದೆ. 545 ಮೆಟ್ಟಿಲು ಹತ್ತಿ ಭಕ್ತರು ಹನುಮನ ದೇವರ ದರುಶನ ಪಡೆಯುವುದು ಕಷ್ಟ- ಸಾಧ್ಯವಾಗುತಿತ್ತು.

ಅಂಜನಾದ್ರಿ ಬೆಟ್ಟ ಹತ್ತಿ ಇಳಿಯುವಾಗಲೇ ಕಳೆದೊಂದು ವರ್ಷದಲ್ಲಿ ಮೂರು ಜನ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೀಗಾಗಿ ರೋಪ್ ವೇ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಕೊನೆಗೆ ಕೇಂದ್ರ ಸರಕಾರ ಸ್ಪಂದಿಸಿದ್ದು, ಭಕ್ತರಿಗೆ ಅನುಕೂಲವಾಗಲಿದೆ. ಇದೀಗ, ಕೇಂದ್ರ ಸರಕಾರ ರೋಪ್ ವೇ ನಿರ್ಮಾಣ ಮಾಡಿಕೊಟ್ಟರೂ ಅದರ ನಿರ್ವಹಣೆಯನ್ನು ರಾಜ್ಯ ಸರಕಾರ ಮಾಡಲಿದೆ.

ಕರ್ನಾಟಕ ರಾಜ್ಯ ಸರ್ಕಾರ ಸಹ ಇತ್ತೀಚೆಗೆ ಮಂಡಿಸಿದ್ದ ಬಜೆಟ್ ನಲ್ಲಿ ಅಂಜನಾದ್ರಿಗೆ ರೋಪ್ ವೇ ಸೌಲಭ್ಯ ಒದಗಿಸುವುದಾಗಿ ಒಪ್ಪಿಗೆ ನೀಡಿತ್ತು. ಫೆ. 16ರಂದು ಮಂಡಿಸಲಾಗಿದ್ದ ಕರ್ನಾಟ ಬಜೆಟ್ ನಲ್ಲಿ, ಅಂಜನಾದ್ರಿ ಬೆಟ್ಟ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಪಡಿಸುವ ಸಲುವಾಗಿ ಸಿದ್ದರಾಮಯ್ಯ 100 ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ, ಜಲಾಶಯಗಳ ಹಿನ್ನೀರಿನಲ್ಲಿ, ಕಡಲತೀರಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡಾ ತಾಣಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದರು.

Nimma Suddi
";