This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsState News

ತಂಬಾಕು ಉತ್ಪನ್ನಗಳ ಬಳಕೆ ಆರೋಗ್ಯಕ್ಕೆ ಮಾರಕ

ತಂಬಾಕು ಉತ್ಪನ್ನಗಳ ಬಳಕೆ ಆರೋಗ್ಯಕ್ಕೆ ಮಾರಕ

ನಿಮ್ಮ ಸುದ್ದಿ ಬಾಗಲಕೋಟೆ

ತಂಬಾಕು ಉತ್ಪನ್ನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ತೀರ ಕಳವಳಕಾರಿ ಸಂಗತಿಯಾಗಿದ್ದು, ಅದರ ಬಳಕೆ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಸೂಳೇಬಾವಿ ಸರಕಾರಿ ಪಪೂ ಕಾಲೇಜ್‌ನ ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ.ಹಾಲನ್ನವರ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಸರಕಾರಿ ಪಪೂ ಕಾಲೇಜ್‌ನ ಪ್ರೌಢಶಾಲಾ ವಿಭಾಗದಿಂದ ರಾಷ್ಟಿçÃಯ ತಂಬಾಕು ನಿಂಯAತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಗುಲಾಬಿ ಅಂದೋಲನದ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನಾಂಗ ಸೇರಿದಂತೆ ವಿದ್ಯಾರ್ಥಿಗಳು ಕೂಡ ಇದರ ವ್ಯಾಮೋಹಕ್ಕೆ ಒಳಗಾಗುತ್ತಿರುವದನ್ನು ತುರ್ತಾಗಿ ತಡೆಯಬೇಕಿದೆ ಎಂದರು.

ತಂಬಾಕು ಉತ್ಪನಗಳು ನಿಕೋಟಿನ್‌ನಂತಹ ಅಪಾಯಕಾರಿ ಅಂಶ ಒಳಗೊಂಡಿದ್ದು ಇದರ ಯಾವುದೇ ಉತ್ಪನ್ನಗಳ ಸೇವನೆ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಹೆಚ್ಚಿಸುತ್ತವೆ. ಜನಜಾಗೃತಿಯೇ ಇದಕ್ಕೆ ಪರಿಹಾರ ನೀಡಬಲ್ಲದು ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ, ತಂಬಾಕು ಉತ್ಪನ್ನಗಳ ಸೇವನೆ ಇತ್ತೀಚಿನ ದಿನದಲ್ಲಿ ಹೆಚ್ಚುತ್ತಿರುವುದು ನಿಜಕ್ಕೂ ಅಪಾಯಕಾರಿ ಸಂಗತಿ. ಅದರ ಸೇವನೆಯಿಂದಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ 62 ಸಾವಿರಕ್ಕೂ ಹೆಚ್ಚು ಜನ ಬಾಯಿ, ಅನ್ನನಾಳ ಮತ್ತು ಗಂಟಲು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಪುರುಷರಲ್ಲಿ ಇದು ಸಂತಾನೋತ್ಪತ್ತಿ ಸಾಮರ್ಥ್ಯ ಕುಗ್ಗಿಸಿ ಸಮಾಜದ ಸ್ವಾಸ್ಥö್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಂಬಾಕು ಉತ್ಪನ್ನಗಳ ಮಾರಾಟದ ಮೇಲೂ ಕೂಡ ನಿರ್ಭಂದ ಹೇರಬೇಕಾದ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಘೋಷಣೆ ಕೂಗಿದರು. ಗ್ರಾಮದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ವರ್ತಕರಿಗೆ ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ವಿನಂತಿಸಿದರು.

ಶಿಕ್ಷಕರಾದ ಪಿ.ಎಸ್.ಗಿರಿಯಪ್ಪನವರ, ಮುತ್ತಣ್ಣ ಚಲವಾದಿ, ಮಹಾಂತೇಶ ಪಾಟೀಲ್, ಜಗದೀಶ ಬೆಲ್ಲದ, ಶಬನಮ್ ತಟಗಾರ, ಶೋಭಾ ಮುಂಡೆವಾಡಿ, ಅಶೋಕ ಲಮಾಣೆ ಎಲ್.ಎಸ್.ಬಾರಡ್ಡಿ, ಮಹಾಂತೇಶ ಅಂಗಡಿ, ಎಫ್.ಎಂ.ತುAಬದ, ನಿಂಗಮ್ಮ, ಮಹಾಂತಮ್ಮ ಲೂತಿಮಠ ಇತರರು ಅಂದೋಲನದಲ್ಲಿ ಭಾಗವಹಿಸಿದ್ದರು.

 

Nimma Suddi
";