ನಿಮ್ಮ ಸುದ್ದಿ ಬಾಗಲಕೋಟೆ
ಲಸಿಕೆಗಳು ಜೀವ ರಕ್ಷಕ ಸರ್ಕಾರ ನೀಡುವ ಪ್ರತಿಯೊಂದು ಲಸಿಕೆಗಳನ್ನು ಕಾಲ ಕಾಲಕ್ಕೆ ಮಕ್ಕಳಿಗೆ ಹಾಕಿಸಬೇಕು ಮಕ್ಕಳ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು 2ನೇ ವಾರ್ಡ್ನ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀ ಲಕ್ಷ್ಮಣ ಮಾದರ ಹೇಳಿದರು
ಕಮತಗಿ ಪಟ್ಟಣನದ ಅಂಗನವಾಡಿ ಕೇಂದ್ರ 1ರಲ್ಲಿ ಸೋಮವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಪಟ್ಟಣ ಪಂಚಾಯಿತ ಕಮತಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಮತಗಿ ಸಹಯೋಗದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.O ಕಾರ್ಯಕ್ರಮವನ್ನು ಅವರು ಚಾಲನೆ ನೀಡಿ ಮಾತನಾಡಿದರು
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ Dr.V.N. ಮರಿಶೇಟ್ಟಿ ರವರು ಮಗುವಿಗೆ ಲಸಿಕೆ ಹಾಕುವ ಮೂಲಕ ಮಾತನಾಡಿ ಮನೆ ಮನೆಗೆ ತೆರಳಿ ಲಸಿಕೆ ಅರ್ಹರಿರುವ ಮಕ್ಕಳನ್ನು ಮತ್ತು ಗರ್ಭಿಣಿಯರನ್ನು ಗುರುತಸಿ ಲಸಿಕೆಗಳನ್ನು ಹಾಕಲು ಗುರಿಯನ್ನು ಹಾಕಿಕೊಳ್ಳಲಾಗಿದೆ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದ್ದು ಈ ಅಭಿಯಾನವನ್ನು ಯಶಸ್ವಿ ಗೊಳಿಸಲು ತಿಳಿಸಿದರು
ಪ್ರಾಸ್ತಾವಿಕವಾಗಿ ಹಿರಿಯ ಆರೋಗ್ಯ ನಿರೀಕ್ಷಣಾದಿಕಾರಿ M.C.ಹಂಡ್ರಗಲ್ಲ ಮಾತನಾಡಿ ಈ ಅಭಿಯಾನದಲ್ಲೀ ಲಸಿಕೆ ವಂಚಿತ ಮಕ್ಕಳನ್ನು ಗುರುತಸಿ ಹಾಕಿಸಲು ಇದು ಪರಿಣಾಮಕಾರಿಯಾಗಿದ್ದು ಎಲ್ಲ ಲಸಿಕೇ ವಂಚಿತ ಮಕ್ಕಳನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಲು ತಿಳಿಸಿದರು ಮಾರಣಾಂತಿಕ ರೋಗಗಳ ಬಗ್ಗೆ ತಿಳಿಸಿ ಲಸಿಕೆಯ ಮಹತ್ವದ ಬಗ್ಗೆ ತಿಳಿಸಿ ಹೇಳಿದರು ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿದ್ದು ಈ ಯೋಜನೆಗಳನ್ನು ಸಾರ್ವನಿಕರು ಉಪಯೋಗಿಸಿಕೊಳ್ಳುಬೇಕೆಂದು ತಿಳಿಸಿದರು
ಈ ಕಾರ್ಯಕ್ರವನ್ನು S.B. ಗುಳೇದಗುಡ್ಡರವರು ನಿರೂಪಿಸಿ ವಂದಿಸಿದರು PHCO ರಾದ S.D. ಲಾಯದಗುಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರ ಸಾರ್ವಜನಿಕರು ಭಾಗವಹಿಸಿದ್ದರು