This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ವಚನ ವಿಶ್ವವಿದ್ಯಾಲಯ ಡಾ.ಹಳಕಟ್ಟಿ : ಪಿ.ಎಚ್.ಪೂಜಾರ

ವಚನ ವಿಶ್ವವಿದ್ಯಾಲಯ ಡಾ.ಹಳಕಟ್ಟಿ : ಪಿ.ಎಚ್.ಪೂಜಾರ

ಬಾಗಲಕೋಟೆ

೧೨ನೇ ಶತಮಾನದ ಬಸವಾದಿ ಪ್ರಮತರು ರಚಿಸಿದ ವಚನಗಳನ್ನು ಇಂದು ನಮಗೆಲ್ಲ ತಲುಪಯವಂತೆ ಕಾರ್ಯ ಮಾಡಿದ ಡಾ.ಫ.ಗು.ಹಳಕಟ್ಟಿ ಅವರು ಒಂದು ವಿಶ್ವವಿದ್ಯಾಲಯ ಮಾಡುವಂತ ಕೆಲಸ ಮಾಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಡಾ.ಬಿ.ಆರ್.ಅಮಬೇಡ್ಕರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಫ.ಗು.ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳಕಟ್ಟಿಯವರು ಹುಟ್ಟೂರು ದಾರವಾಡವಾಗಿದ್ದರೂ ಅವರ ಕರ್ಮಭೂಮಿ ವಿಜಯಪುರವಾಗಿತ್ತು. ವಿದ್ಯಾರ್ಥಿ ದಿನಗಳಲ್ಲಿಯೇ ಕನ್ನಡ ನಾಡು ನುಡಿ ನೆಲಸ ಜಲ ಸಾಹಿತ್ಯ ಸಂಸ್ಕೃತಿಗಾಗಿ ದುಡಿಯಲು ದೃಡಸಂಕಲ್ಪ ಮಾಡಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

೧೯೦೧ ರಲ್ಲಿಯೇ ಪದವಿಧರರಾಗಿ ೧೯೦೪ರಲ್ಲಿ ಕಾನೂನು ಪದವಿಧರರಾಗಿ ಅವರ ಪತ್ನಿಯ ಊರಾದ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರು ಮನೆಯಲ್ಲಿ ದೊರೆತ ಅಪರೂಪದ ಹಾಗೂ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಗಂಟೊAದರಿAದ ಪ್ರಭಾವಿತರಾಗಿ ಬಸವಣ್ಣನವರ ಕಾಲದ ವಚನಗಳನ್ನು ಹುಡಿಕಿ ಹೊರತಂದ ಕೀರ್ತಿ ಹಳಕಟ್ಟಿಯವರದ್ದಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಇಂತಹ ವಚನಗಳನ್ನು ಮರು ಮುದ್ರಿಸಲು ತಮ್ಮ ಮನೆಯನ್ನೇ ಮಾರಿದವರು. ಒಂದೆಡೆ ವಕೀಲ ವೃತ್ತಿ, ಪತ್ರಿಕೋದ್ಯಮ, ನೇಕಾರಿಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಅನೇಕ ಸಂಘ ಸಂಸ್ಥೆ ಸ್ಥಾಪನೆಗಳನ್ನು ಸಹ ಸ್ಥಾಪನೆ ಮಾಡಿದ್ದು, ಅದರಲ್ಲಿ ವಿಜಯಪುರದ ಇಂದಿನ ಬಿ.ಎಲ್.ಡಿ ಸಂಸ್ಥೆ, ಸಿದ್ದೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್, ಗ್ರಾಮೀಣ ಅಭಿವೃದ್ದಿ ಸಂಘ, ನೇಕಾರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ ೧೯೫೧ ರಲ್ಲಿ ನವ ಕರ್ನಾಟಕ ಎಂಬ ವಾರ ಪತ್ತಿಕೆಯನ್ನು ಆರಂಭಿಸಿದ್ದರು. ಇಂತಹ ಮಹಾನ್ ವ್ಯಕಿ ನಮ್ಮ ಭಾಗದವರಾಗಿದ್ದು, ನಮಗೆಲ್ಲ ಹೆಮ್ಮೆ ಎಂದ ಅವರು ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಿಕೊಂಡಾಗ ಮಾತ್ರ ಜಯಂತೋತ್ಸವ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಡಾ.ಅಲ್ಲಮಪ್ರಭು ಅಂಬಿ ಮಾತನಾಡಿ ಡಾ.ಫ.ಗು.ಹಳಕಟ್ಟಿ ಅವರು ೧೨ನೇ ಶತಮಾನದ ನಶಿಸಿ ಹೋಗುತ್ತಿರುವ ಅಪರೂಪದ ತಾಳೆಗರಿಯಲ್ಲಿರುವ ವಚನಗಳನ್ನು ಮರು ಮುದ್ರಣಗೊಳಿಸಿದ ಕೀರ್ತಿ ಇವರದಾಗಿದ್ದು, ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ೧೯೨೦ರಲ್ಲಿ ಮುಂಬಯಿ ವಿಧಾನ ಪರಿಷತ್ತಿನ ಸದಸ್ಯತ್ವ ಪಡೆದಿದ್ದರು. ಮೂರನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷರಾಗಿ ವಿಶ್ವವಿದ್ಯಾಲಯದ ಶೆನೆಟ್ ಸದಸ್ಯತ್ವ ಪಡೆದು ೧೯೩೩ ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಇವರ ಸೇವೆ ಕಂಡು ಕರ್ನಾಟಕ ವಿಶ್ವವಿದ್ಯಾಲಯ ೧೯೫೬ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ, ಸಮುದಾಯದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಗುರುಬಸಪ್ಪ ನಿಲುಗಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿAಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

";