This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ವಾಲ್ಮೀಕಿ ಆದರ್ಶಗಳು ಮಾನವ ಜನಾಂಗಕ್ಕೆ ದಾರದೀಪ : ಚರಂತಿಮಠ

ವಾಲ್ಮೀಕಿ ಆದರ್ಶಗಳು ಮಾನವ ಜನಾಂಗಕ್ಕೆ ದಾರದೀಪ : ಚರಂತಿಮಠ
ಬಾಗಲಕೋಟೆ
ಮಹರ್ಷಿ ವಾಲ್ಮೀಕಿಯವರ ಆದರ್ಶ ಹಾಗೂ ತತ್ವಗಳು ಮಾನವ ಜನಾಂಗಕ್ಕೆ ದಾರಿದೀಪವಾಗಿವೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಜಯಂತಿ ಕೇವಲ ಪೂಜೆಗೆ ಸೀಮಿತವಾಗದೇ ಅವರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು ಎಂದರು.
ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸೀಮಿತವಾಗಿರದೇ ಮಾನವ ಕುಲೋದ್ದಾರಕರಾಗಿದ್ದರು. ಶಿಸ್ತು, ಶ್ರಮ, ಸಾಧನೆ ಹಾಗೂ ಶಿಕ್ಷಣವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ಸಮುದಾಯದವರು ಸರಕಾರ ನೀಡಿದ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರೂ ಕೂಡಿ ಬಾಳಿದಾಗ ಮಾತ್ರ ಮಹರ್ಷಿ ವಾಲ್ಮೀಕಿ ಅವರಿಗೆ ಗೌರವ ತಂದAತಾಗುವುದೆAದರು.
ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ, ಶೋಷಿತ ವರ್ಗದವರಿಗೆ ಸಮಾನತೆ ತಂದುಕೊಟ್ಟು ಏಕತೆಗೆ ಹೋರಾಡಿದ ಮಹಾನಾಯಕ ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ ಕುರಿತು ಮಾತನಾಡಿದರು. ಭಾರತದ ಅಖಂಡತೆಯನ್ನು ಎತ್ತಿ ಹಿಡಿದ ವಲ್ಲಭಬಾಯಿ ಪಟೇಲರ ಜನ್ಮ ದಿನದನ್ನು ರಾಷ್ಟಿçÃಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ೧೭ ಎಕರೆ ಪ್ರದೇಶದಲ್ಲಿ ಪಟೇಲರ ಅತಿದೊಡ್ಡ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಅವರ ಏಕತೆ ಸಂದೇಶವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಆರ್.ಜಿ.ಸನ್ನಿ ಮಾತನಾಡಿ, ಮಹರ್ಷಿ ವಾಲ್ಮಿಕಿಯವರ ರಚಿಸಿದ ರಾಮಾಯಣ ಹಿಡಿದು ರಾಷ್ಟç ಕವಿ ಕುವೆಂಪುರವರ ರಾಮಾಯಣ ದರ್ಶಣಂ ಕೃತಿಯವರೆಗೆ ಹಲವಾರು ಮಹನೀಯರು ರಾಮಾಯಣ ರಚಿಸಿದ್ದಾರೆ. ಅವರೆಲ್ಲರ ಸ್ಪೂರ್ತಿ ಮತ್ತು ಮಾತೃ ಕಾವ್ಯ ವಾಲ್ಮೀಕಿ ರಾಮಾಯಣವಾಗಿದೆ. ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ನಿರ್ಮಾಣ ವಾಲ್ಮೀಕಿಯಾಗಿದ್ದಾರೆ. ತಮ್ಮ ಮಹಾನ್ ಗ್ರಂಥದ ಮೂಲಕ ನಮ್ಮ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಎರಡು ಕಣ್ಣುಗಳು ಇದ್ದಹಾಗೆ. ರಾಮಾಯಣ ಮಧುರನೀತಿ ಕಾವ್ಯವಾದರೆ, ಮಹಾಭಾರತ ಸಾಮಾಜ ಶಾಸ್ತçವಾಗಿದೆ. ಆದ್ದರಿಂದ ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆ ಚಿಂತನ ಮಂತನ ವೇದಿಕೆಯಾಗಬೇಕು. ಆಚರಣೆ ಪೂಜಕ್ಕೆ ಸೀಮಿತವಾಗಬಾರದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಅಗತ್ಯವಿದೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ರಾಜು ನಾಯ್ಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾದ್ಯಕ್ಷ ಬಸವರಾಜ ಅವರಾದಿ, ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜದ ಮುಖಂಡರಾದ ಶಂಬುಗೌಡ ಪಾಟೀಲ, ದ್ಯಾಮಣ್ಣ ಗಾಳಿ, ನಿಂಗಪ್ಪ ಕ್ಯಾದಿಗೇರಿ, ಪಾಂಡು ಪೊಲೀಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಾಲ್ಮೀಕಿಯವರ ಕುರಿತು ರಚಿಸಿದ ಹಾಡನ್ನು ಹಾಡುವ ಮೂಲಕ ಎಲ್ಲರನ್ನು ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಎಸ್.ಆರ್.ನದಾಪ್ ವಂದಿಸಿದರು.

ರಾಷ್ಟಿçÃಯ ಏಕತಾ ದಿನಾಚರಣೆ:ಪ್ರತಿಜ್ಞಾವಿಧಿ
ರಾಷ್ಟಿçÃಯ ಏಕತಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಸಮ್ಮುಖದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿಯಲ್ಲಿ ರಾಷ್ಟçದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು. ದೇಶ ಬಾಂಧವರಲ್ಲಿ ಈ ಸಂದೇಶವನ್ನು ಸಾರಲು ಶ್ರಮಿಸಬೇಕು. ಸರ್ದಾರ ವಲ್ಲಭಬಾಯ್ ಪಟೇಲರ ದೂರದೃಷ್ಠಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡಿಕೊಳ್ಳುವಂತೆ ಹಾಗೂ ರಾಷ್ಟçದ ಭದ್ರತೆಯನ್ನು ಖಾತ್ರಿ ಪಡಿಸಲು ತನ್ನದೇ ಆದ ಕೊಡುಗೆಯನ್ನು ನೀಡುತ್ತೇನೆಂದು ಪ್ರತಿಜ್ಞೆ ಮಾಡಿಸಲಾಯಿತು.

";