ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಘೋಷಣೆ ಆದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಶಮನ ತಣ್ಣಗೆ ಆಗುವ ಲಕ್ಷಣ ಕಾಣುತ್ತಿಲ್ಲ. ಸಂಯುಕ್ತಾ ಪಾಟೀಲ ಅಭ್ಯರ್ಥಿಯಾದ ಬಳಿಕ ಆಕಾಂಕ್ಷೆ ಅಗಿದ್ದ ವೀಣಾ ಕಾಶಪ್ಪನವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಸಂಧಾನ ಸಹ ವಿಫಲವಾಗಿದ್ದು, ಈಗ .ವೀಣಾ ಕಾಶಪ್ಪನವರ ಏನು ಮಾಡಬೇಕು ಎಂದು ತಿಳಿಯದೆ ತಟಸ್ಥರಾಗಿ ಉಳಿಯಬೇಕು ಎಂದು ನಿರ್ಧಾರ ಮಾಡಿದ್ದಾರೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರೂ,ದೃತಿ ಗೆಡದೆ ಮತ್ತೆ ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡುತ್ತ,ತಮ್ಮದೇ ಆದ ಛಾಪು ಮೂಡಿಸಿದ್ದರು.
ಆದರೆ ಕೊನೆಯ ಘಳಿಗೆಯಲ್ಲಿ ಹೈಕಮಾಂಡಗೆ ಲಕ್ಷ್ಮೀಯಂತೆ ಸಂಯುಕ್ತಾ ಪಾಟೀಲ ಬಂದ ಹಿನ್ನಲೆ,ವೀಣಾ ಕಾಶಪ್ಪನವರ ಟಿಕೆಟ್ ಕೈ ತಪ್ಪಿತ್ತು.ಕಳೆದ ದಿನ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ ಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಟಿಕೆಟ್ ಬದಲಾವಣೆ ಮಾಡಲು ಸಾಧ್ಯವಿಲ್ಲ.ಪಕ್ಷವು ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರ ಗೆಲ್ಲಿಸುವಂತೆ ಶ್ರಮ ವಹಿಸಿ,ಮುಂದೆ ಏನಾದರೂ ಮಾಡೋಣ ಎಂದು ಸೂಚಿಸಿದರು.
ವೀಣಾ ಕಾಶಪ್ಪನವರ ಗಿಂತ ಹೆಚ್ಚು ಕ್ಷೇತ್ರದಲ್ಲಿ ಸಂಯುಕ್ತಾ ಪಾಟೀಲ ಕೆಲಸ ಮಾಡಿದ್ದಾರೆ ಎಂದು ಮುಖಂಡರು ಹೇಳಿದಿರುವುದಕ್ಕೆ ವೀಣಾ ಮನಸ್ಸಿಗೆ ನೋವಾಗಿದ್ದು, ಇದನ್ನು ಖುದ್ದು ವೀಣಾ ಅವರೇ ಹೇಳಿಕೊಂಡಿದ್ದಾರೆ. ಐದು ವರ್ಷದಿಂದ ಕೆಲಸ ಮಾಡಿದರೂ,ಈಗ ತಾನೆ ಬಂದಿರುವ ಸಂಯುಕ್ತಾ ಪರ ಎಲ್ಲರೂ ಬೆಂಬಲಿಸಿದ್ದಾರೆ ಎಂದು ಮಾಹಿತಿ ನೀಡಿದರು.