ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕ ರಾಷ್ಟ್ರ ಬಿಜೆಪಿ ಸಂಕಲ್ಪ,: ಚರಂತಿಮಠ
ಬಾಗಲಕೋಟೆ: ಭಾರತದ ಸರ್ವಾಂಗಿಣ ಅಭಿವೃದ್ಧಿಯೊಂದಿಗೆ ವಿಶ್ವದಲ್ಲಿಯೆ ಭಾರತ ಮೂರನೇ ಆರ್ಥಿಕ ರಾಷ್ಟ್ರವನ್ನಾಗಿಸುವ ಸಂಕಲ್ಪ ಬಿಜೆಪಿ ಹೊಂದಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ಸೋಮವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು,
ಭಾರತ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲೆ ಗುರುತಿಸಿಕೊಂಡಿದೆ,
ಭಾರತವು ಮಹಿಳಾ ನೇತೃತವದ ಅಭಿವೃದ್ಧಿಯಲ್ಲಿ ವಿಶ್ವಕ್ಕೆ ದಿಕ್ಕನ್ನು ತೋರಿಸುವ ನಿಟ್ಟಿನಲ್ಲಿ ನಾರಿ ಶಕ್ತಿಗೆ ಹೊಸ ಚೈತನ್ಯ ತುಂಬಿದ್ದು ಬಿಜೆಪಿ, ನೂತನ ಭಾರತಕ್ಕಾ ನಮ್ಮ ಪ್ರಣಾಳಿಕೆ ಸಿದ್ದವಾಗಿದ್ದು ದೇಶದಲ್ಲಿ ಏಕರೂಪ ನಾಗರಿಕ ಸಂಹಿತ ಜಾರಿ, ಒಂದು ದೇಶ ಒಂದು ಚುನಾವಣೆ,
ಮುಂದಿನ 5 ವರ್ಷ ಬಡವರಿಗೆ ಉಚಿತ ಅಕ್ಕಿ ವಿತರಣೆ, ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ.ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕ ರಾಷ್ಟç ಸಂಕಲ್ಪ, 70ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ ಅಡಿ ಉಚಿತ ಸೇವೆ. ಸೂರ್ಯ ಘರ ಮೂಲಕ ಉಚಿತ ವಿದ್ಯತ್, ಮುದ್ರಾ ಸಾಲ 20 ಲಕ್ಷಕ್ಕೆ ಹೆಚ್ಚಳ,ದೇಶದ ಮೂಲೆ ಮೂಲೆಗೆ ವಂದೇ ಭಾರತ ರೈಲು ವಿಸ್ತರಣೆ,
ತೃತೀಯ ಲಿಂಗಿಗಳಿಗೆ ಆಯುಷ್ಮಾನ್ ಯೋಜನೆಯ ಸೌಲಭ್ಯ, ಪಿಎಂ ಆವಾಸ್ ಯೋಜನೆಯಡಿ 3 ಲಕ್ಷ ಮನೆ ನಿರ್ಮಾಣ ದಂತ ಅನೇಕ ಪ್ರಗತಿಪರ ಯೋಜನೆಗಳನ್ನು ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ ರೂಪಿಸಿಕೊಂಡಿದ್ದು ಇದರಿಂದ ಭಾರತದ ಎಲ್ಲ ಸಮುದಾಯಗಳ ಹಾಗೂ ದೇಶದ ಸರ್ವಾಂಗಿಣ ಅಭಿವೃದ್ಧಿ ಸಾಧ್ಯವಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಮೋದಿಯ ಕೈ ಬಲಪಡಿಸಿ ಎಂದರು.
ನಗರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ನಗರದ 10 ಮತ್ತು 14 ನೇ ವಾರ್ಡಗಳಲ್ಲಿ ಸಂಚರಿಸಿ ಮಾರವಾಡಿ ಗಲ್ಲಿ, ಕಳ್ಳಿಗುಡ್ಡ ಓಣಿ,ಸ್ಟೇಶನ್ ರಸ್ತೆ, ವಲ್ಲಬಾಯಿ ಚೌಕ ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.
ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯ ಹೀರಾಲಾಲ ಗೌಡ, ಶ್ಮೀತಾ ಪವಾರ, ಜ್ಯೋತಿ ಭಜಂತ್ರಿ,ಕುಮಾರ ಯಳ್ಳಿಗುತ್ತಿ, ರಾಜು ಸಿಂತ್ರೆ, ವಿಶ್ವನಾಥ ಕೋಲ್ಹಾರ, ಗುರುರಾಜ ಸಂಬಣ್ಣವರ್,ಜಯಂತ ಕುರಂದವಾಡ್, ಘನಶ್ಯಾಮ ಧರಕ, ಶಿವಲೀಲಾ ಸಂಬಣ್ಣವರ, ಜಗದಿಶ ಚೆನ್ನಗಾವಿ, ದೀಪಕ ಕಲಾದಗಿ, ಬಸವರಾಜ ಪರ್ವತಿಮಠ,ಸಂಗಣ್ಣ ಕಾರಪುಡಿ, ಸಂಗಮೇಶ ಹಿತ್ತಲಮನಿ,ಬಸವರಾಜ ನಾಶಿ,ಮಂಜುನಾಥ ಕಳ್ಳಿಗುಡ್ಡ,ಬಸವರಾಜ ಸಾಸನೂರ, ಶಿವಪ್ಪ ಜಮಖಂಡಿ, ಬೀಮು ಬಿಳಗಿ ಸೇರಿದಂತೆ ನಗರಸಭೇ ಸದ್ಯರು, ಪದಾಧೀಕಾರಿಗಳು, ಕಾರ್ಯಕರ್ತರು ಭಾಗವಹಸಿದ್ದರು.
*ಎಲ್ಲ ಸಮುದಾಯಗಳ ಆರ್ಥಿಕ ಸುಧಾರಣೆ ಹಾಗೂ ಸಮೃದ್ಧ ಭಾರತ ನಿರ್ಮಾಣದ ಕನಸು ಬಿಜೆಪಿ ಸಂಕಲ್ಪ ಪತ್ರಿಕೆ ಒಟ್ಟು ಸಾರ – ಡಾ.ವೀರಣ್ಣ ಚರಂತಿಮಠ*
*ಬೆಣ್ಣೂರ,ಶಿರಗುಂಪಿ,ತಳಗಿಹಾಳ, ಇಲಾಳ, ಮುಡಪಲಜೀವಿ,ಕಡ್ಲಿಮಟ್ಟಿ ಯಲ್ಲಿ ಬಿಜೆಪಿ ಪ್ರಚಾರ*
*ಮಧ್ಯಮ ವರ್ಗದವರಿಗೆ ಮೋದಿನೆ ಗ್ಯಾರಂಟಿ: ಚರಂತಿಮಠ*
ಬಾಗಲಕೋಟೆ : ದೇಶದ ಮಧ್ಯಮ ವರ್ಗದ ಕುಟುಂಬಗಳ ಉಜ್ವಲ ಭವಿಷ್ಯ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾದ್ಯವಿದ್ದು ಮಧ್ಯಮ ವರ್ಗದವರಿಗೆ ಮೋದಿನೆ ಗ್ಯಾರಂಟಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ರವಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆಯ ಮತಕ್ಷೇತ್ರದಿಂದ ಗ್ರಾಮೀಣ ಬಾಗದ ಬೇಣ್ಣೂರ ಗ್ರಾಮದಲ್ಲಿಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗದ್ದಿಗೌಡರ ಪರ ಮತಯಾಚನೆ ಮಾಡಿ ಮಾತನಾಡಿದರು.
ಸಮೃದ್ಧಿ ಭಾರತ ನಿರ್ಮಾಣದ ಕನಸು, ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿಮಧ್ಯಮ ವರ್ಗದ ಕುಟುಂಬಗಳ ಸ್ವಂತ ಮನೆ ಕನಸು ನನಸಾಗುವುದು, ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ, ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ,
ದೇಶದ ಶಕ್ತಿ ಯುವ ಜನಾಂಗ, ವಸತಿ ಮತ್ತು ಶುದ್ಧ ನೀರಿನ ಕನಸು ಸೇರಿದಂತೆ ಅನೇಕ ಜನಪರ ಅಬಿವೃದ್ಧಿಯನ್ನು ಮೋದಿ ಮಾಡಿದ್ದು ದೇಶಕ್ಕಾಗಿ ಮೋದಿ ಅವಶ್ಯವಾಗಿದ್ದು,ದೇಶದ ಸುರಕ್ಷತೆಗಾಗಿ ಮೋದಿಯವರನ್ನು ಬೆಂಬಲಿಸಿ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಸಂಗಣ್ಣ ಕಲಾದಗಿ, ಪ್ರಭುಸ್ವಾಮಿ ಸರಗಣಾಚಾರಿ.
ಕಾಶಿಬಾಯಿ ರಾಂಪುರ, ಹಣಮಂತ ಶಿಕ್ಕೇರಿ, ಮಲ್ಲಪ್ಪ ಉಳ್ಳಾಗಡ್ಡಿ, ಮಲ್ಲಪ್ಪ ಅಂಗಡಿ, ಶಂಕ್ರಪ್ಪ ರಾಂಪುರ, ರಾಚಪ್ಪ ಗಡೆಂಚಿ, ಗವಿಸಿದ್ದಪ್ಪ ತೋಟಗೇರ, ಮಲ್ಲಪ್ಪ ಬೂದಿಹಾಳ, ಶಂಕ್ರಪ್ಪ ಚೆಣ್ಣಿಗೇರಿ, ಈರಪ್ಪ ಕೋಟಿ ಸೇರಿದಂತೆ ಅನೇಕರು ಇದ್ದರು.
ನಂತರ ಶಿರಗುಂಪಿ, ತಳಗಿಹಾಳ, ಇಲಾಳ, ಮುಡಪಲಜೀವಿ, ಕಡ್ಲಿಮಟ್ಟಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು.
*ಇದೆ 18 ಗುರುವಾರದಂದು ಬಿಜಿಪಿ ಲೋಕಸಭೆ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಾಮಪತ್ರ ಸಲ್ಲಿಸುವುದರಿಂದ ಗ್ರಾಮೀಣ ಬಾಗದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ* – ಡಾ.ವೀರಣ್ಣ ಚರಂತಿಮಠ. ಮಾಜಿ ಶಾಸಕರು ಬಾಗಲಕೋಟೆ.