ಮತದಾರರ ಪಟ್ಟಿ ಪರಿಷ್ಕರಣೆ|ಐಹೊಳೆ, ರಾಮಥಾಳ ಗ್ರಾಮಕ್ಕೆ ಭೇಟಿ
ನಿಮ್ಮ ಸುದ್ದಿ ಬಾಗಲಕೋಟೆ
ಮತದಾರರ ಪಟ್ಟಿ ಪರೀಷ್ಕರಣೆ ಹಿನ್ನೆಲೆಯಲ್ಲಿ ಹುನಗುಂದ ತಾಲೂಕಿನ ಐಹೊಳೆ ಮತ್ತು ರಾಮಥಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಭೇಟಿ ನೀಡಿ ಮನೆ ಮನೆ ಸಮೀಕ್ಷೆ ಕಾರ್ಯ ಹಾಗೂ ಆಧಾರ್ ಜೋಡನೆಯ ಪರಿಶೀಲಿಸಿದರು.
ಐಹೊಳೆ ಗ್ರಾಮದ ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಗ್ರಾಮದ ವಾರ್ಡ್ಗಳಿಗೆ ಸಂಬAಸಿದ ಮತದಾರರ ಪಟ್ಟಿಯಲ್ಲಿ 18 ವರ್ಷ ಮೇಲ್ಪಟ್ಟ ಅರ್ಹರು ಪಟ್ಟಿಯಿಂದ ಹೊರಗುಳಿಯಬಾರದು. ಈಗಾಗಲೇ 18 ವರ್ಷ ತುಂಬಿದವರ ಪಟ್ಟಿ ನಮ್ಮಲ್ಲಿದ್ದು, ಪಟ್ಟಿಯಿಂದ ಹೊರಗುಳಿದರೆ ಬಿಎಲ್‌ಒಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತಪಟ್ಟ ವ್ಯಕ್ತಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಕೆಲಸವಾಗಬೇಕು. ಒಂದೇ ಕುಟುಂಬದ ಮತದಾರರು ಒಂದೇ ಮತಗಟ್ಟೆಯಲ್ಲಿ ಇರುವಂತೆ ಮಾಡಬೇಕು ಎಂದರು.
ಮತಗಟ್ಟೆ ವ್ಯಾಪ್ತಿಯಲ್ಲಿನ ಪ್ರತಿ ಮನೆಗೆ ಭೇಟಿ ನೀಡಬೇಕು. ಅಲ್ಲಿನ ಮತದಾರರ ಮಾಹಿತಿ ಪಡೆಯಬೇಕು. ಮೃತಪಟ್ಟಿದ್ದರೆ ಪಟ್ಟಿಯಿಂದ ತೆಗೆದು ಹಾಕುವುದು, ಸೇರ್ಪಡೆ ಸೇರಿದಂತ ಇತರೆ ಕಾರ್ಯ ಲೋಪವಿಲ್ಲದೆ ಪೂರ್ಣಗೊಳ್ಳಬೇಕು ಎಂದ ಜಿಲ್ಲಾಕಾರಿ ಅಲ್ಲಿನ ಶಾಲೆಯ ಅಡುಗೆ ಕೋಣೆಗೆ ತೆರಳಿ ಪರಿಶೀಲನೆ ನಡೆಸಿದರು. ಬೆಳೆ ಕುದಿಸಲು ಕುಕ್ಕರ್ ಬಳಕೆ ಮಾಡುವಂತೆ ತಿಳಿಸಿದರು.
ರಾಮಥಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಸಂವಿಧಾನ ಪೀಠಿಕೆ ಓದಿ ಹೇಳಿದರು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲಿಸಿ, ಆಧಾರ ಜೋಡನೆ ಮಾಹಿತಿ ಪಡೆದುಕೊಂಡರು.
ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಬಾಗಲಕೊಟೆ ತಹಶೀಲ್ದಾರ ಅಮರೇಶ ಪಮ್ಮಾರ, ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ ಇತರರಿದ್ದರು.