ರಾಜ್ಯಾಧ್ಯಕ್ಷ ಆಕಾಂಕ್ಷಿ ಅಲ್ಲ
ಬಾಗಲಕೋಟೆ
ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ದನಿದ್ದೇನೆ, ಆದರೆ ಇದೇ ಹುದ್ದೆ ಬೇಕು ಎಂದು ದುಂಬಾಲು ಬೀಳುವವನು ನಾನಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಹುದ್ದೆಗೆ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದಲ್ಲಿ 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ಈವರೆಗೆ ಯಾವುದೇ ಹುದ್ದೆ ಕೇಳಿಲ್ಲ. ವರಿಷ್ಠರು ಗುರ್ತಿಸಿ ಇಂತಹ ಹುದ್ದೆ ಎಂದು ಸೂಚಿಸಿದಾಗ ಸಮರ್ಥವಾಗಿ ನಿಭಾಯಿಸಿದ್ದೇನೆ. ಈ ಹಿಂದೆ ಜಿಲ್ಲಾಧ್ಯಕ್ಷನಾಗಿದ್ದೆ, ಬಿಜೆಪಿ ಸರಕಾರದ ಅವಯಲ್ಲಿ ಕೈಗಾರಿಕೆ ಮಂತ್ರಿ ಮಾಡಿದರು. ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನೀಡಿದ ಹುದ್ದೆಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿದ್ದೇನೆ ಎಂದರು.
ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಂಡಲ ಅಧ್ಯಕ್ಷರಿಂದ ರಾಷ್ಟಿçÃಯ ಅಧ್ಯಕ್ಷರವರೆಗೆ ಬದಲಾವಣೆ ಆಗುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆ ರಾಜ್ಯದಲ್ಲಷ್ಟೆ ಅಲ್ಲ ದೇಶಾದ್ಯಂತ ನಡೆಯುತ್ತಿದೆ. ಎಲ್ಲರೂ ವಿಜಯೇಂದ್ರ ಅವರಿಗೆ ಒಪ್ಪಿಗೆ ಕೊಟ್ಟರೆ ಅವರೇ ಮುಂದುವರೆಯಬಹುದು. ಆದರೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಾರದೆಂಬ ಒಂದು ತಂಡ ಬಹಿರಂಗವಾಗಿಯೇ ಕಣಕ್ಕಿಳಿದಿದೆ. ದಿನೇ ದಿನೇ ಆ ತಂಡದ ಸಂಖ್ಯೆ ಹೆಚ್ಚಾಗುತ್ತಿದೆ. ತಟಸ್ಥ ತಂಡ ಏನೂ ಹೇಳುತ್ತಿಲ್ಲ. ಇವೆಲ್ಲ ಗೊಂದಲ ನಿವಾರಿಸಲು ವಿಜಯೇಂದ್ರ ತಮ್ಮ ನಡೆ ಬದಲಾಯಿಸಿಕೊಳ್ಳಬೇಕು. ಅವರಿಗೆ ಅನುಭವದ ಕೊರತೆ ಇದೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಹೇಳಿದರು.
ಬೀಳಗಿ ಕ್ಷೇತ್ರದಲ್ಲಿಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಹಿಂದೆ ಬಿಜೆಪಿ ಸರಕಾರದಲ್ಲಿ 400 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿತ್ತು. ಚುನಾವಣೆ ನಂತರ ದೇವಸ್ಥಾನಗಳಿಗೆ ಅನುದಾನ ಕಡಿತಗೊಳಿಸಿ ಬೇರೆಡೆ ಉಪಯೋಗಿಸಿದ್ದಾರೆ. ಬಹುತೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬಜೆಟ್ ಅವೇಶನದೊಳಗೆ ಸರಕಾರದ ಗಮನ ಸೆಳೆಯವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದರು.
ದೇಶದ 2ನೇ ತೋಟಗಾರಿಕೆ ವಿವಿ ಬಹಳಷ್ಟು ಪ್ರಯತ್ನದಿಂದ ತಮ್ಮ ಸರಕಾರದ ಅವಯಲ್ಲಿ ಸ್ಥಾಪಿತವಾಗಿದೆ. ಇದೀಗ ಮಂಡ್ಯ ವಿವಿ ವ್ಯಾಪ್ತಿಗೆ ಕೆಲ ಕಾಲೇಜ್‌ಗಳನ್ನು ಸೇರ್ಪಡೆಗೊಳಿಸುವ ಸರಕಾರದ ನಿರ್ಧಾರಕ್ಕೆ ತಮ್ಮ ವಿರೋಧವಿದೆ. ಸಿಎಂಗೆ ರಾಜಕೀಯ ಮರುಜೀವ ನೀಡಿದ ಜಿಲ್ಲೆಯ ಕೊಡುಗೆ ಮರೆಯಬಾರದು. ಸರಕಾರ ತಮ್ಮ ಧೋರಣೆಗೆ ಅಂಟಿಕೊAಡರೆ ಈ ಭಾಗದ ಜನರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಹೂವಪ್ಪ ರಾಠೋಡ ಇದ್ದರು.