This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Sports NewsState News

ಸಚಿನ್​, ಧೋನಿ ಸೇರಿ ಹಲವು ದಿಗ್ಗಜರ ದಾಖಲೆ ಮುರಿಯಲು ಸಜ್ಜಾದ ವಿರಾಟ್​, ರೋಹಿತ್​

ಸಚಿನ್​, ಧೋನಿ ಸೇರಿ ಹಲವು ದಿಗ್ಗಜರ ದಾಖಲೆ ಮುರಿಯಲು ಸಜ್ಜಾದ ವಿರಾಟ್​, ರೋಹಿತ್​

ಬೆಂಗಳೂರು:

ಏಷ್ಯಾ ತಂಡಗಳ ಕ್ರಿಕೆಟ್‌ ಹಣಾಹಣಿ ಏಷ್ಯಾಕಪ್‌ 2023ರ(Asia Cup 2023) ಪಂದ್ಯಾವಳಿಗೆ ಬುಧವಾರ(asia cup schedule 2023) ಚಾಲನೆ ದೊರೆಯಲಿದೆ. ಈ ಟೂರ್ನಿಯಲ್ಲಿ ಅನೇಕ ಆಟಗಾರರಿಗೆ ಮಾಜಿ ದಿಗ್ಗಜ ಆಟಗಾರರ ದಾಖಲೆಯನ್ನು(Asia Cup records) ಮುರಿತುವ ಅವಕಾಶವಿದೆ. ವಿರಾಟ್​ ಕೊಹ್ಲಿ, ನಾಯಕ ರೋಹಿತ್​ ಶರ್ಮ ಅವರಿಗೆ ಈ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿರುವ ಸಚಿನ್​ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಅವರ ದಾಖಲೆಯನ್ನು ಹಿಂದಿಕ್ಕುವ ಸುವರ್ಣ ಅವಕಾಶವಿದೆ. ಹಾಗೆ ಎಲ್ಲ ತಂಡದ ಆಟಗಾರರಿಗೂ ನೂತನ ದಾಖಲೆ ಬರೆಯುವ ಅವಕಾಶವಿದೆ. ಸದ್ಯ ಏಷ್ಯಾಕಪ್​ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಗಳಿಸಿದ ಭಾರತೀಯರ ಟಾಪ್​ 5 ಆಟಗಾರರ ವಿವರ ಇಲ್ಲಿದೆ.

ರೋಹಿತ್​ ಶರ್ಮ
ಪ್ರಸ್ತುತ ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(rohit sharma) ಅವರು ಸಚಿನ್​ ಬಳಿಕ ಏಷ್ಯಾಕಪ್​ನಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರರ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್​ ಅವರು ಈ ಆವೃತ್ತಿಯಲ್ಲಿ 226 ರನ್​ ಗಳಿಸಿದರೆ ಸಚಿನ್​ ಅವರ ದಾಖಲೆ ಪತನಗೊಳ್ಳಲಿದೆ. ರೋಹಿತ್ ಇದುವರೆಗೆ 22 ಪಂದ್ಯಗಳಿಂದ 46.56 ಸರಾಸರಿಯಲ್ಲಿ 745 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್​​ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ವಿರಾಟ್ ಕೊಹ್ಲಿ
ಕಿಂಗ್​ ಖ್ಯಾತಿಯ ವಿರಾಟ್ ಕೊಹ್ಲಿ(virat kohli) ಅವರು ಏಷ್ಯಾಕಪ್ ಟೂರ್ನಿಯಲ್ಲಿ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 613 ರನ್ ಬಾರಿಸಿದ್ದಾರೆ. 2012ರ ಏಷ್ಯಾಕಪ್ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿ 183 ರನ್ ಬಾರಿಸಿ ಪಾಕ್​ಗೆ ವಿರಾಟ ದರ್ಶನ ತೋರಿಸಿದ್ದರು. 2014ರಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರೂ ಫೈನಲ್​ ತಲುಪಿಸುವಲ್ಲಿ ವಿಫಲರಾಗಿದ್ದರು. ಕೋಹ್ಲಿ ಅವರು ಈ ಬಾರಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದು 35 ರನ್​ ಬಾರಿಸಿದರೆ ಮಾಜಿ ನಾಯಕ ಮಹೇಂದ್ರ ಸಿಂಗ್​ ಅವರ ರನ್​ ದಾಖಲೆಯನ್ನು ಮುರಿದು ಈ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಒಂದೊಮ್ಮೆ ವಿರಾಟ್​ ಅವರು 358 ರನ್​ ಬಾರಿಸಿದರೆ ಸಚಿನ್​ ಅವರ ಸರ್ವಕಾಲಿಕ 971 ರನ್​ ದಾಖಲೆ ಪತನಗೊಳ್ಳಲಿದೆ. ಹೀಗೆ ಕೊಹ್ಲಿಗೆ ಎರಡು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿಯುವ ಅವಕಾಶವಿದೆ.

ಸಚಿನ್​ ತೆಂಡೂಲ್ಕರ್​
ಟೀಮ್​ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್(sachin tendulkar)​ ಅವರು ಭಾರತ ಪರ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ದಾಖಲೆ ಹೊಂದಿದ್ದಾರೆ. 1990ರಲ್ಲಿ ಏಷ್ಯಾಕಪ್​ ಆಡಿದ ಸಚಿನ್ ತೆಂಡೂಲ್ಕರ್, 51.10 ಸರಾಸರಿಯಲ್ಲಿ 2 ಶತಕ ಹಾಗೂ 7 ಅರ್ಧಶತಕ ನೆರವಿನಿಂದ 971 ರನ್ ಸಿಡಿಸಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ ಮೊದಲ ಮತ್ತು ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್​ ಅವರು 2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್​ ಆಡಿದ್ದರು. ಈ ಆವೃತ್ತಿಯಲ್ಲಿ ಸಚಿನ್(52 ರನ್)​ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು.

ಮಹೇಂದ್ರ ಸಿಂಗ್ ಧೋನಿ
ಕ್ಯಾಪ್ಟನ್​ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್​ ಧೋನಿ(ms dhoni) ಅವರು ತಮ್ಮ ನಾಯಕತ್ವದಲ್ಲಿ 2 ಏಷ್ಯಾಕಪ್​ ಗೆದ್ದಿದ್ದಾರೆ.​ 2010ರಲ್ಲಿ ಏಕದಿನ ಮಾದರಿಯಲ್ಲಿ ಗೆದ್ದರೆ 2016ನೇ ಸಾಲಿನನಲ್ಲಿ ಟಿ20 ಮಾದರಿಯಲ್ಲಿ ಟ್ರೋಫಿ ಗೆದ್ದಿದ್ದರು. ಈ ಟೂರ್ನಿಯಲ್ಲಿ ಧೋನಿ 19 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ 3 ಅರ್ಧಶತಕ ನೆರವಿನಿಂದ 648 ರನ್ ಗಳಿಸಿ ಅತ್ಯಧಿಕ ರನ್​ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

ಗೌತಮ್ ಗಂಭೀರ್
ಟೀಮ್ ಇಂಡಿಯಾದ ಮಾಜಿ ಎಡಗೈ ಆರಂಭಿಕ ಆಟಗಾರ, ಬಿಜೆಪಿ ಸಂಸದರಾಗಿರುವ ಗೌತಮ್ ಗಂಭೀರ್(Gautam Gambhir) ಅವರು ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಭೀರ್ 44.07 ಸರಾಸರಿಯಲ್ಲಿ 1 ಶತಕ ಹಾಗೂ 5 ಅರ್ಧಶತಕ ನೆರವಿನಿಂದ 573 ರನ್ ಗಳಿಸಿದ್ದಾರೆ. 2010ರಲ್ಲಿ ಭಾರತ ಟ್ರೋಫಿ ಗೆಲ್ಲುವಲ್ಲಿ ಗಂಭೀರ್​ ಮಹತ್ವದ ಪಾತ್ರವಹಿಸಿದ್ದರು.

Nimma Suddi
";