ವಿಜಯಪುರ-ಬಾಗಲಕೋಟೆ: ಪ್ರಜಾಪ್ರಭುತ್ಬ ಹಬ್ಬ, ಲೋಕ ಸಮರದ ನಿರ್ಣಾಯಕ ಘಟ್ಟಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಂತಿಯುತ, ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಚುನಾವಣೆಗೆ ವಿಜಯಪುರ-ಬಾಗಲಕೋಟೆ ಜಿಲ್ಲಾಡಳಿತಗಳು ಸಜ್ಜಾಗಿದೆ. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದರೆ, ಬಾಗಲಕೋಟೆ ಲೋಕಸ‘ಾ ಕ್ಷೇತ್ರದಲ್ಲಿ 27 ಅ‘್ಯರ್ಥಿಗಳು ಕಣದಲ್ಲಿದ್ದು, ಎಲ್ಲರ ಭವಿಷ್ಯವನ್ನು ಮಂಗಳವಾರ (ಮೇ 7ರಂದು) ಮತದಾರ ನಿರ್‘ಾರ ಮಾಡಲಿದ್ದಾರೆ.
23 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪದ ನಡುವೆಯೂ ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6ರ ತನಕ ಮತದಾನ ನಡೆಯಲಿದ್ದು, ಶಾಂತ ರೀತಿಯಿಂದಲ ಮತದಾನ ನಡೆಸಲು ಅವಳಿ ಜಿಲ್ಲೆ ಜಿಲ್ಲಾಡಳಿತಗಳು ಸನ್ನದ್ಧವಾಗಿವೆ. ಮತದಾನದ ಹಿಂದಿನ ದಿನವಾದ ಸೋಮವಾರ ವಿಜಯಪುರ ಮೀಸಲು ಲೋಕಸ‘ಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ
ತಾಲೂಕಿನ ಪಟ್ಟಣದಲ್ಲಿ ನಿಯೋಜಿತ ಸಿಬ್ಬಂದಿ ಮತದಾನದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮತ ಕೇಂದ್ರಗಳತ್ತ ತೆರಳಿದರು.
ಇನ್ನು ಬಾಗಲಕೋಟೆ ಲೋಕಸ‘ಾ ಕ್ಷೇತ್ರದ ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಹಾಗೂ ಗದಗ ಜಿಲ್ಲೆಯ ನರಗುಂದ ಸೇರಿ 8 ಕ್ಷೇತ್ರಗಳ ಮತದಾನ ಸಿಬ್ಬಂದಿ ಮತದಾನಕ್ಕೆ ಬೇಕಾದ ಅಗತ್ಯ ವಸ್ತು ತೆಗೆದುಕೊಂಡು ತಮಗೆ ನಿಗದಿ ಪಡಿಸಿದ ಗ್ರಾಮಗಳಿಗೆ ತೆರಳಿದರು.
ವಿಜಯಪುರ ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು
ರಮೇಶ ಜಿಗಜಿಣಗಿ (ಬಿಜೆಪಿ), ರಾಜು ಆಲಗೂರ (ಕಾಂಗ್ರೆಸ್), ನಾಗಜ್ಯೋತಿ ಬಿ.ಎನ್. (ಎಸ್‌ಯುಸಿಐ ಕಮ್ಯುನಿಸ್ಟ್ ), ಗಣಪತಿ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ), ಜಿತೇಂದ್ರ ಕಾಂಬಳೆ (ರಿಪಬ್ಲಿಕನ್ ಪಾರ್ಟಿ ಆ್ ಇಂಡಿಯಾ), ರಾಜಕುಮಾರ ಹೊನ್ನಕಟ್ಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಮಜಿ ಹರಿಜನ (ನಕಿ ‘ಾರತೀಯ ಏಕತಾ ಪಕ್ಷ), ತಾರಾಬಾಯಿ ‘ೋವಿ (ಪಕ್ಷೇತರ) ಅಂತಿಮ ಹಣಾಹಣಿಯಲ್ಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳು
ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಸಚಿವ ಶಿವಾನಂದ ಪಾಟೀಲರ ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಸೇರಿದಂತೆ 27 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಿಜಯಪುರದ ಮತದಾರರು
9,87,974 ಪುರುಷರು, 9,57,906 ಮಹಿಳೆಯರು ಹಾಗೂ 210 ಇತರೆ ಮತದಾರರು ಸೇರಿದಂತೆ ಒಟ್ಟು 19,46,090 ಮತದಾರರಿದ್ದಾರೆ.
ಬಾಗಲಕೋಟೆ ಮತದಾರರು
ಒಟ್ಟು ಮತದಾರರು: 18,06,183. ಅದರಲ್ಲಿ ಮಹಿಳೆಯರು: 9,10,650, ಪುರುಷರು: 8,95,432, ಇತರೆ: 101